ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಹೆಚ್ಚುವರಿಯಾಗಿ 250 ಕೋಟಿ ನೀಡಲಾಗಿದೆ – ಸಚಿವ ರಹೀಂ ಖಾನ್
ಬೀದರ್ : ಬೀದರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಹೆಚ್ಚುವರಿಯಾಗಿ 250 ಕೋಟಿ ಹಣವನ್ನು ನೀಡಲಾಗಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್ ಅವರು ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೀದರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ-4ರ ಅಡಿಯಲ್ಲಿ ಅನೇಕ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು ಅದರಲ್ಲಿ ಭಾಗಶಃ ಪರ‍್ಣಗೊಂಡಿದ್ದು, ಇನ್ನು ಕೆಲವು ಕರ‍್ಯ ಪ್ರಗತಿಯಲ್ಲಿವೆ. 15ನೇ ಹಣಕಾಸು ಆಯೋಗದ ಅನುದಾನದ ಅಡಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಪೂರೈಕೆ ಮತ್ತು ಘನತ್ಯಾಜ್ಯ ನರ‍್ವಹಣೆಗೆ ಸಂಬಂಧಿಸಿದಂತೆ ಅನೇಕ ಕರ‍್ಯಕ್ರಮಗಳು ಕೈಗೊಳ್ಳಲಾಗಿದೆ ಹಾಗೂ ರಾಜ್ಯ ಹಣಕಾಸು ಆಯೋಗದಿಂದ SCSP ಮತ್ತು TSP ಯೋಜನೆಗಳ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸ್ವಚ್ಛ ಭಾರತ ಮಿಷನ್ ರ‍್ಬನ್ 2.0 ಯೋಜನೆಯಡಿ ನಗರ ಪ್ರದೇಶಗಳಲ್ಲಿ ಗೃಹ ಶೌಚಾಲಯಗಳು ಮತ್ತು ಸರ‍್ವಜನಿಕ ಶೌಚಾಲಯ ನರ‍್ಮಾಣ ಮಾಡಲಾಗಿದೆ. ಅಮೃತ 2.0 ಯೋಜನೆ ಅಡಿಯಲ್ಲಿ ಉದ್ಯಾನವನ ಹಾಗೂ ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹುಮನಾಬಾದನಲ್ಲಿ 3 ಪಾರ್ಕಗಳ ನಿರ್ಮಾಣ ಮತ್ತು ಬೀದರನಲ್ಲಿ ಪಾಪನಾಶ ಕೆರೆ 5 ಕೋಟಿ ರೂ. ಮತ್ತು ಗರ‍್ನಳ್ಳಿ ಕರೆ 15 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಜಿಲ್ಲೆಯಲ್ಲಿ ಹೊಸದಾಗಿ 5 ಇಂದಿರಾ ಕ್ಯಾಂಟೀನ್ ಗಳು ಆರಂಭವಾಗಲಿವೆ, ಬೀದರ ನಗರದಲ್ಲಿ 3, ಚಿಟ್ಟಗುಪ್ಪಾ ಮತ್ತು ಹಳ್ಳಿಖೇಡ (ಬಿ) ಗಳಲ್ಲಿ ತಲಾ ಒಂದು ಆರಂಭವಾಗಲಿವೆ. ಇ-ಖಾತಾಗೆ ಸಂಬಂಧಿಸಿದ ಕಾರ್ಯಗಳು ಕೂಡ ತ್ವರಿತವಾಗಿ ಪ್ರಗತಿ ಕಾಣಬೇಕು ಎಂದು ತಿಳಿಸಿದರು.

ಹುಮನಾಬಾದ ಶಾಸಕರಾದ ಡಾ. ಸಿದ್ಧಲಿಂಗಪ್ಪ ಎನ್. ಪಾಟೀಲ್ ಮಾತನಾಡಿ, ಹುಮನಾಬಾದ, ಚಿಟ್ಟಗುಪ್ಪಾ, ಹಳ್ಳಿಖೇಡ (ಬಿ) ಪುರಸಭೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ರ‍್ತಿ ಮಾಡಿಕೊಳ್ಳಲು ಸಚಿವರಿಗೆ ಮನವಿ ಮಾಡಿದರು
ಬೀದರ ದಕ್ಷಿಣ ಶಾಸಕರಾದ ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, ಹೊಸದಾಗಿ ಆಗಿರುವ ಮಹಾನಗರ ಪಾಲಿಕೆಗೆ ಬೀದರ ದಕ್ಷಿಣದ 8 ಗ್ರಾಮಗಳು ಸರ‍್ಪಡೆಯಾಗಿದ್ದು, ಅವುಗಳ ಸವಾರ್ಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಸಚಿವರಿಗೆ ಮನವಿ ಮಾಡಿದರು.
ಈ ಸಂರ‍್ಭದಲ್ಲಿ ಜಿಲ್ಲಾಧಿಕಾರಿಗಳಾದ ಶಿಲ್ಪಾ, ಪೌರಾಡಳಿತ ಮತ್ತು ಹಜ್ ಸಚಿವರ ಆಪ್ತ ಕಾರ್ಯದರ್ಶಿ ಕೆ. ಮುರಳಿಧರ, ನಗರಸಭೆ ಅಧ್ಯಕ್ಷರಾದ ಮಹಮ್ಮದ ಗೌಸ, ಬೀದರ ನಗರಸಭೆಯ ಆಯುಕ್ತರಾದ ಶಿವರಾಜ್ ರಾಥೋಡ್ ಹಾಗೂ ಎಲ್ಲಾ ನಗರಸಭೆ ಮತ್ತು ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಮುಖ್ಯ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
*****
