ಬಡ ಮಕ್ಕಳಿಗೆ ನೀಡುತ್ತಿರುವ ಉಚಿತ ಶಿಕ್ಷಣವೇ ನಿಜವಾದ ಪೂಜೆ: ಪಟ್ಟದ್ದೇವರು
ಬೀದರ್; ಬಡ ಮಕ್ಕಳಿಗೆ ನೀಡುತ್ತಿರುವ ಉಚಿತ ಶಿಕ್ಷಣವೇ ನಿಜವಾದ ಪೂಜೆಯಾಗಿದೆ ಎಂದು ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಭಾನುವಾರ ನಗರದ ಡಾ.ಚನ್ನಬಸವ ಪಟ್ಟದ್ದೇವರ ರಂಗಮAದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ಬುದ್ದಿಷ್ಟ್ ಏಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಡಿ ನಡೆಯುತ್ತಿರುವ ರಾಂಪುರೆ ಫೌಂಡೇಷನ್, ವಿ.ಎಂ ರಾಂಪುರೆ ಪಬ್ಲಿಕ್ ಸ್ಕೂಲ್ ಮತ್ತು ಫ್ರೀ ಸ್ಕೂಲ್‌ಗಳ ಸಹಯೋಗದಲ್ಲಿ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ ಪ್ರಯುಕ್ತ ಅನಾಥ ಮತ್ತು ಬಡ ಹೆಣ್ಣು ಮಕ್ಕಳಿಗೆ ಪಠ್ಯ ಪರಿಕರಗಳು ಹಾಗೂ ಸಮವಸ್ತç ವಿತರಿಸಿ ಮಾತನಾಡಿದರು.

ಮಹಿಳೆಯರನ್ನು ದೇವತೆ ಎಂತಲೂ, ಆದಿ ಶಕ್ತಿ ಎಂತಲೂ ಕರೆಯಲ್ಪಡುವ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮುಖೇನ ಅವರ ಬದುಕಿನಲ್ಲಿ ಹೊಸ ಚೈತನ್ಯ ಹುಟ್ಟು ಹಾಕಲು ಯುವ ಉತ್ಸಾಹಿ ಮಹೇಶ ರಾಂಪುರೆ ಉಚಿತ ಶಿಕ್ಷಣ ನೀಡಿ, ಅವರಿಗೆ ಪಠ್ಯ ಪುಸ್ತಕ, ಸಮವಸ್ತç ವಿತರಿಸಿ ಜಿಲ್ಲೆಯ ಶಿಕ್ಷಣ ಪ್ರೇಮಿಗಳಿಗೆ ಮಾದರಿಯಾಗಿದ್ದಾರೆ. ಅವರು ಮಾಡುವ ಈ ಮಹತ್ತರ ಕಾರ್ಯಕ್ಕೆ ಎಲ್ಲರು ಕೈ ಜೋಡಿಸಬೇಕಿದೆ ಎಂದರು.
ಬದುಕಿನಲ್ಲಿ ಪ್ರತಿಯೊಬ್ಬರು ಶ್ರೇಷ್ಠ ಗುರಿ ಇರಿಸಿಕೊಂಡು, ಉತ್ತಮ ಸಾಧಕರಾಗುವ ಮೂಲಕ ಸಮಾಜಮುಖಿಯಾಗಿ ಹೊರ ಹೊಮ್ಮಬೇಕು. ಒಳ್ಳೆ ಮನಸ್ಸಿನಿಂದ ಮಾಡುವ ಪ್ರತಿಯೊಂದು ಕಾರ್ಯ ಅದು ಪರಮಾತ್ಮನಿಗೆ ಮೆಚ್ಚುಗೆಯಾಗುತ್ತದೆ. ಹಾಗಾಗಿ ಮಹೇಶ ರಾಂಪುರೆ ಇದೆಲ್ಲವನ್ನು ಮೀರಿ ಧ್ವನಿಯಿಲ್ಲದವರಿಗೆ ಧ್ವನಿಯಾಗಿ, ವಿದ್ಯೆಯಿಂದ ವಂಚಿತರಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತ ಸಾವಿತ್ರಿಬಾಯಿ ಫುಲೆ ಅವರ ಕನಸ್ಸು ನನಸ್ಸು ಮಾಡಲು ಹೊರಟಿದ್ದಾರೆ ಎಂದು ಕೊಂಡಾಡಿದರು.
ಸಾಹಿತಿ ಪಾರ್ವತಿ ಸೋನಾರೆ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಾವಿತ್ರಿಬಾಯಿ ಫುಲೆ ತನ್ನ ೯ನೇ ವಯಸ್ಸಿನಲ್ಲಿಯೆ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಶೋಷಿತರು, ದಲಿತರು ಹಾಗೂ ಅಸ್ಪçಶ್ಯರಿಗೆ ವಿದ್ಯೆ ಕಲಿಸಲು ಪತಿ ಜ್ಯೋತಿಬಾ ಫುಲೆಯವರೊಂದಿಗೆ ಮನೆ ತೊರೆಯಬೇಕಾಗಿ ಬಂತು. ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದರೂ ಅದನ್ನು ಲೆಕ್ಕಿಸದೇ ಮತಾಂಧರಿAದ ನಿತ್ಯ ಸಗಣಿ ಸ್ನಾನ ಮಾಡಿಸಿಕೊಂಡು ತನ್ನ ಛಲ ಬಿಡದೇ ಶಾಲೆಗೆ ಹೋಗಿ ಸೀರೆ ಬದಲಿಸಿ ತುಳಿತಕ್ಕೋಳಗಾದವರಿಗೆ ಅಕ್ಷರ ಕಲಿಸಿದ ದೇಶದ ಪ್ರಥಮ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.
ಭಾಲ್ಕೆ ಆಸ್ಪತ್ರೆಯ ಮುಖ್ಯಸ್ಥ ಡಾ.ಸೋಮಶೇಖರ ಭಾಲ್ಕೆ ಮಾತನಾಡಿ, ಯುವಕ ಮಹೇಶ ರಾಂಪುರೆ ಮಾಡುತ್ತಿರುವ ಈ ಪೂಣ್ಯ ಕಾರ್ಯಕ್ಕೆ ನಮ್ಮಂಥವರ ಅಳಿಲು ಸೇವೆ ಇರಲಿ ಎಂಬ ಕಾರಣಕ್ಕೆ ವಿ.ಎಂ ರಾಂಪುರೆ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುವುದೆಂದು ಭರವಸೆ ನೀಡಿದರು.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ ಕಾರ್ಯಕ್ರಮ ಉದ್ಘಾಟಿಸಿದರು. ಲಿಂಗಾಯತ ಸಮನ್ವಯ ಸಮಿತಿ ಸಂಚಾಲಕ ಶ್ರೀಕಾಂತ ಸ್ವಾಮಿ, ಬಾಪು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಕಾಶಿನಾಥ ಪಾಟೀಲ, ಅನುದಾನ ರಹಿತ ಖಾಸಗಿ ಶಾಲಾ ಅಡಳಿತ ಮಂಡಳಿ ಜಿಲ್ಲಾಧ್ಯಕ್ಷ ರಾಜೇಂದ್ರ ಮಣಗೇರೆ, ದಲಿತ ಮುಖಂಡರಾದ ಅನೀಲಕುಮಾರ ಬೆಲ್ದಾರ್, ದೇವೇಂದ್ರ ಸೋನಿ, ಬಸವರಾಜ ಮಯೂರ, ವೀರಶೆಟ್ಟಿ ದೀನೆ, ಶ್ರೀಪತರಾವ ದೀನೆ, ವಿಜಯಕುಮಾರ ಸೋನಾರೆ, ಕು.ಸುಸ್ಮಿತಾ ಮೋರೆ ಹಾಗೂ ಇತರರು ವೇದಿಕೆಯಲ್ಲಿದ್ದರು. ಸಂಸ್ಥೆಯ ಸಂಸ್ಥಾಪಕಿ ಶಾರದಾಬಾಯಿ ರಾಂಪುರೆ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಬಡ ಹಾಗೂ ಅನಾಥ ಮಕ್ಕಳಿಗೆ ಪಠ್ಯ ಪರಿಕರಗಳು ಹಾಗೂ ಸಮವಸ್ತçಗಳನ್ನು ಉಚಿತವಾಗಿ ವಿತರಿಸಲಾಯಿತು. ಬುದ್ದಿಷ್ಟ್ ಏಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅದ್ಯಕ್ಷ ಮಹೇಶ.ಎಸ್.ರಾಂಪುರೆ ವಂದನೆ ಸಲ್ಲಿಸಿದರು.
ಆರಂಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ನಾಡಗೀತೆ ಜರುಗಿತು. ಚನ್ನಬಸವ ಹೇಡೆ ಸ್ವಾಗತಿಸಿ, ಪ್ರೇಮ ಅವಿನಾಶ ಕಾರ್ಯಕ್ರಮ ನಿರೂಪಿಸಿದರು.
