Friday, January 16, 2026
HomePopularಔರಾದನಲ್ಲಿ ಗಮನ ಸೆಳೆದ ತಿರಂಗಾ ಯಾತ್ರೆ ಕುಣಿದು ಸಂಭ್ರಮಿಸಿದ ಶಾಸಕ ಪ್ರಭು ಚವ್ಹಾಣ --

ಔರಾದನಲ್ಲಿ ಗಮನ ಸೆಳೆದ ತಿರಂಗಾ ಯಾತ್ರೆ ಕುಣಿದು ಸಂಭ್ರಮಿಸಿದ ಶಾಸಕ ಪ್ರಭು ಚವ್ಹಾಣ —

ಔರಾದನಲ್ಲಿ ಗಮನ ಸೆಳೆದ ತಿರಂಗಾ ಯಾತ್ರೆ
ಕುಣಿದು ಸಂಭ್ರಮಿಸಿದ ಶಾಸಕ ಪ್ರಭು ಚವ್ಹಾಣ
ಭಾರತೀಯ ಸೈನಿಕರ ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆಯ ನಿಮಿತ್ತ ಔರಾದ(ಬಿ) ಪಟ್ಟಣದಲ್ಲಿ ತಿರಂಗಾ ಯಾತ್ರೆ ಸೋಮವಾರ ಅದ್ದೂರಿಯಾಗಿ ನಡೆಯಿತು.
ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಪಟ್ಟಣದ ಪ್ರವಾಸಿ ಮಂದಿರದ ಬಳಿ ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಿರಂಗಾಯಾತ್ರೆಗೆ ಚಾಲನೆ ನೀಡಿದರು. ಧ್ವಜಯಾತ್ರೆ ಸಾರ್ವಜನಿಕ ಆಸ್ಪತ್ರೆ, ಬಸವೇಶ್ವರ ವೃತ್ತ, ಬಸ್ ನಿಲ್ದಾಣದ ಮೂಲಕ ಎಪಿಎಂಸಿ ಕ್ರಾಸ್ ತಲುಪಿ ಕೊನೆಗೊಂಡಿತು. ಯಾತ್ರೆಯುದ್ದಕ್ಕೂ ಭಾರತೀಯ ಸೈನಿಕರ ಕಾರ್ಯಕ್ಕೆ ಜೈಘೋಷ ಕೂಗಲಾಯಿತು. ಸಾರ್ವಜನಿಕರು ಭಾರತದ ಧ್ವಜವನ್ನು ಕೈಯಲ್ಲಿ ಹಿಡಿದು ದೇಶಭಕ್ತಿಯ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು, ವ್ಯಾಪಾರಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು,‌ ಅಧಿಕಾರಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು. ವಿವಿಧ ಮಠ-ಮಂದಿರಗಳ ಸ್ವಾಮೀಜಿಗಳು, ಮಹಿಳೆಯರು ಪಾಲ್ಗೊಂಡು ದೇಶದ ಸೈನಿಕರಿಗೆ ಗೌರವ ಸಮರ್ಪಿಸಿದರು.
ಕುಣಿದ ಕುಪ್ಪಳಿಸಿದ ಶಾಸಕ ಪ್ರಭು ಚವ್ಹಾಣ: ತಿರಂಗಾ ಯಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ಶಾಸಕ ಪ್ರಭು ಚವ್ಹಾಣ ಅವರು ಮೆರವಣಿಗೆಯುದ್ದಕ್ಕೂ ಜಯಘೋಷಗಳನ್ನು ಕೂಗಿದರು. ದೇಶಭಕ್ತಿಯ ಹಾಡುಗಳಿಗೆ ಕುಣಿದು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಭಾಲ್ಕಿ ಹಿರೇಮಠದ  ಪೂಜ್ಯ ಬಸವಲಿಂಗ ಪಟ್ಟದ್ದೆವರು ಮಾತನಾಡಿ, ದೇಶ ಸುರಕ್ಷಿತವಾಗಿದ್ದರೆ ಧರ್ಮ ಸೇರಿದಂತೆ ಎಲ್ಲವೂ ಉಳಿಯುತ್ತದೆ. ಹಾಗಾಗಿ ನಮಗೆ ದೇಶವೇ ಮೊದಲ‌‌ ಆದ್ಯತೆಯಾಗಬೇಕು. ತನು, ಮನದಲ್ಲಿ ದೇಶಭಕ್ತಿಯನ್ನು ಅಳವಡಿಸಿಕೊಳ್ಳಬೇಕು. ದೇಶಕ್ಕೆ ಆಪತ್ತು ಬಂದಾಗ ರಕ್ಷಣೆ್ಗೆ ಎಲ್ಲರೂ ಸಿದ್ದರಿರಬೇಕು ಎಂದರು.
ಮಾಜಿ ಸೈನಿಕ ಹಣಮಂತ ಬುಟ್ಟೆ ಮಾತನಾಡಿ, ದೇಶ ಸುರಕ್ಷಿತವಾಗಿ ಇರಿಸುವಲ್ಲಿ ಸೈನಿಕರ‌ ಪಾತ್ರ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ದೇಶದ ರಕ್ಷಣೆಯ ಜವಾಬ್ದಾರಿ ಕೇವಲ ಸೈನಿಕರದಲ್ಲ. ಎಲ್ಲ ನಾಗರಿಕರದ್ದಾಗಿದೆ. ಹಾಗಾಗಿ ಎಲ್ಲರಲ್ಲಿಯೂ ದೇಶಭಕ್ತಿ ಬೆಳೆಯಬೇಕು ಎಂದರು.

ಈ ಸಂದರ್ಭದಲ್ಲಿ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿ, ಶಿವಲಿಂಗ ಶಿವಾಚಾರ್ಯರು, ಶಂಭುಲಿಂಗ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು, ಛಾಪಾ ಮಹಾರಾಜ, ನಿಜಲಿಂಗ ಶಿವಾಚಾರ್ಯರು,  ಚನ್ನಮಲ ಶಿವಾಚಾರ್ಯರು, ಶಿವಾನಂದ ಶಿವಾಚಾರ್ಯರು, ಅಭಿನವ ಬಸವಲಿಂಗ ಶಿವಾಚಾರ್ಯರು, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಮುಖಂಡರಾದ ಈಶ್ವರಸಿಂಗ್ ಠಾಕೂರ್, ಮಾರುತಿ ಚವ್ಹಾಣ, ವಸಂತ ಬಿರಾದಾರ, ಕಿರಣ ಪಾಟೀಲ, ಪೀರಪ್ಪ ಔರಾದೆ, ಅರಹಂತ ಸಾವಳೆ, ರಾಜಶೇಖರ ನಾಗಮೂರ್ತಿ, ಮಹೇಶ್ವರ ಸ್ವಾಮಿ, ನಿಲೇಶ ರಕ್ಷ್ಯಾಳೆ, ಬಾಬುರಾವ ಕಾರಬಾರಿ, ವಿಜಯಲಕ್ಷ್ಮಿ ಕೌಟಗೆ, ಗುರುನಾಥ ಜ್ಯಾಂತಿಕರ್, ಧೊಂಡಿಬಾ ನರೋಟೆ, ಬಸವರಾಜ ಪಾಟೀಲ, ಶಿವರಾಜ ಅಲ್ಮಾಜೆ, ಶ್ರೀಮಂತ ಪಾಟೀಲ, ವೀರು ದಿಗ್ವಾಲ್, ಡಾ.ವೈಜಿನಾಥ ಬುಟ್ಟೆ, ಶಿವಾನಂದ ವಡ್ಡೆ, ಶೇಷರಾವ ಕೋಳಿ, ಮಲ್ಲಪ್ಪ ದಾನಾ, ಬಸವರಾಜ ಹಳ್ಳೆ, ಅಶೋಕ ಶೆಂಬೆಳ್ಳೆ, ಯಾದುರಾವ ಸಗರ, ಮಾಜಿ ಸೈನಿಕರಾದ ನರಸಿಂಗ್ ಗಡದೆ, ನಾಗರಾಜ ಗಾಯಕವಾಡ, ಮಹಾದೇವ ಕೋಟೆ, ಶರಣಪ್ಪ ವಲ್ಲೆಪೂರೆ, ನಿವರ್ತಿ ಸಿಂಗೋಡೆ, ಅನೀಲಕುಮಾರ ಮೈಲಾರೆ, ರಾಚಪ್ಪ ಮಸ್ಕಲ್, ಕೇಶವ ಪಾಟೀಲ‌ ಸೇರಿದಂತೆ ಇತರರಿದ್ದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3