ನಿಸರ್ಗ ಕಾನ್ವೆಂಟ್ ಸ್ಕೂಲ್‍ನಲ್ಲಿ ಪ್ರಾರಂಭೋತ್ಸವ
ಬೀದರ್: ನಗರದ ಓಡವಾಡದ ಅನಂತಶಯನ ಮಂದಿರ ಬಳಿ ಸೋಲಪುರ ರಸ್ತೆಯಲ್ಲಿ ಇರುವ ನಿಸರ್ಗ ಕಾನ್ವೆಂಟ್ ಸ್ಕೂಲ್‍ನಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಈಚೆಗೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆ ಒಳ್ಳೆಯ ಸಂಸ್ಕಾರ ಕಲಿಸುವುದು ಬಹಳ ಅವಶ್ಯಕವಾಗಿದೆ ಎಂದು ಹೇಳಿದರು.
ಜಿಲ್ಲೆಯ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸಬೇಕು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಬೇಕು ಎಂದು ತಿಳಿಸಿದರು.

ಕೋವಿಡ್ ವೇಳೆ ಸೇವೆ ಸಲ್ಲಿಸಿದ ಗಾದಗಿ, ಮಾಳೆಗಾಂವ್ ಹಾಗೂ ಅಷ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಸ್ಕೂಲ್ ಕಾರ್ಯದರ್ಶಿ ಗುಂಡಪ್ಪ ಮಲ್ಕನೋರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಗಾಂಧಿಗಂಜ್ ಸಹಕಾರ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರಾವ್ ಮಲ್ಕಾಪುರ, ಡಾ. ಮಲ್ಲಿಕಾರ್ಜುನ ಜಿ.ಬಿ. ರವಿ ಬಿರಾದಾರ, ಶಿವಕುಮಾರ ಖಿಂಡಿ, ಕಸ್ತೂರಿ ಜಾಪಟ್ಟೆ, ಪ್ರಕಾಶ ಖಿಂಡಿ, ರಾಹುಲ್ ಮೋರೆ, ಶಾರುಲತಾ ಸಂಪತ್, ಆನಂದಕುಮಾರ ಉದಾನೆ, ವೀರಶೆಟ್ಟಿ ಪಾಟೀಲ, ಕಲ್ಯಾಣರಾವ್ ಅಡಸಾರೆ ಇದ್ದರು.
ಅಕ್ಷತಾ ಸ್ವಾಗತಿಸಿದರು. ನಾಗನಾಥ ಬಿರಾದಾರ ನಿರೂಪಿಸಿದರು. ಗೀತಾ ವಂದಿಸಿದರು.
