ರಾಜ್ಯ ಸರಕಾರಿ ನೌಕರ ಮಹಿಳಾ ಸಾಧಕರಿಗೆ ಸನ್ಮಾನ ಸಮಾರಂಭ
ಅಭಿನಂದನಾ ಸಮಾರಂಭ ಮತ್ತು ತಾಲೂಕಾ ಪದಾಧಿಕಾರಿಗಳ ಆಯ್ಕೆ.
ಬೀದರ್ : ನಿನ್ನೆ ಸಂಜೆ ನೆಹರು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಸರಕಾರಿ ನೌಕರರ ಕ್ರೀಡಾ ಕೂಟದಲ್ಲಿ ನಮ್ಮ ಜಿಲ್ಲೆಗೆ 72 kg ಕುಸ್ತಿ,ಜನಪದ ಗೀತೆ, ಯೋಗ, ಮತ್ತು ಕ್ಯಾರಂ ಮುಂತಾದವುಗಳಲ್ಲಿ ಚಿನ್ನ,ಬೆಳ್ಳಿ,ಮತ್ತು ಕಂಚನ್ನು ಹೊತ್ತು ತಂದ ಸಾಧಕರಿಗೆ ರಾಜ್ಯ ಸರಕಾರಿ ನೌಕರ ಮಹಿಳೆಯರ ಸಂಘ ( ರಿ) ಬೆಂಗಳೂರು . ಜಿಲ್ಲಾ ಘಟಕ ಬೀದರ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ಔರಾದ ತಾಲೂಕಿನ ಪ್ರಾಥಮಿಕ ಸಂರಕ್ಷಣಾ ಅಧಿಕಾರಿಗಳಾದ ಶ್ರೀಮತಿ ರೇಣುಕಾ ಅವರು ಪ್ರಥಮ ಸ್ಥಾನ ಮತ್ತು ಚಂದ್ರಕಾಂತ ತಳವಾಡೆ ಶಿಕ್ಷಕರು ಹಾಗೂ ಶ್ರೀಮತಿ ಕಸ್ತೂರಿ ಅವರು ತೃತಿಯ ಸ್ಥಾನ ಪಡೆದುಕೊಂಡಿದ್ದಾರೆ. ಜನಪದ ಗೀತೆಯಲ್ಲಿ ಭಾನುಪ್ರೀಯಾ ಅರಳಿ ಮತ್ತು ತಂಡದವರಾದ ಎಮ್ ಎಸ್ ಮನೋಹರ, ರಾಜಕುಮಾರ ಕರುಣಾ ಸಾಗರ, ಶಿವಪ್ಪ,ರೇಣುಕಾ ಕೋರೆ,ದೀಪಾ ಕಿರಣ, ಪ್ರಣಿತಾ ಕೋರೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ. ಕ್ಯಾರಂ ಅಲ್ಲಿ ಶ್ರೀಮತಿ ಆಪ್ರೀನ್ ಮತ್ತು ಯೋಗದಲ್ಲಿ ಶ್ರೀಮತಿ ಸಾರಿಕಾ ಗಂಗಾ ಹಾಗೂ ಭುವನೇಶ್ವರಿ ಅವರು ದ್ವಿತಿಯ ಸ್ಥಾನ ಪಡೆದುಕೊಂಡಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ನಮ್ಮ ಜಿಲ್ಲೆಯ ಮಹಿಳೆಯರು ಸಾಧಗೈಯುತ್ತಿರುವುದು ತುಂಬಾ ಸಂತಸದ ವಿಷಯವಾಗಿದೆ. ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಲ್ಲ ಉದ್ಯೋಗ ಮಾಡುವುದರ ಜೊತೆಗೆ ಮನಸ್ಸು ಮಾಡಿದರೆ ಜಗತ್ತನ್ನೇ ಗೆಲ್ಲಬಹುದು. ಬೀದರ ಜಿಲ್ಲೆಯಲ್ಲಿ ಪ್ರತಿಭೆಗಳು ಬೇಕಾದಷ್ಟಿವೆ ಸರಿಯಾದ ಅವಕಾಶಗಳಿಲ್ಲ. ಎಲ್ಲ ಇಲಾಖೆಗಳಲ್ಲಿ ಒಂದು ಸಾಂಸ್ಕೃತಿಕ ಸಂಘವನ್ನು ಕಟ್ಟಿಕೊಂಡು ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕಟ್ಟಿ ಬೆಳೆಸುವ ಅವಶ್ಯಕತೆ ಇದೆ. ಈ ಮೂಲಕ ಎಲೆ ಮರೆ ಕಾಯಿಗಳಂತಿದ್ದ ಪ್ರತಿಭೆಗಳು ಮುನ್ನೆಲೆಗೆ ಬರಲು ಸಾಧ್ಯವಾಗುತ್ತದೆ.
ನಮ್ಮ ಜಿಲ್ಲೆಯಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಅದನ್ನು ಗುರುತಿಸುವ ಕಣ್ಣುಗಳು ಬೇಕು. ಮುಂಬರುವ ದಿನಗಳಲ್ಲಿ ಸರಕಾರಿ ನೌಕರರು ಒಂದು ನಾಟಕ ತಂಡವನ್ನು ಕಟ್ಟಿ ಕಲೆಯನ್ನು ಉಳಿಸಿ ಬೆಳೆಸೋಣ. ಸಮಯವಿಲ್ಲ ಎಂದು ಹೇಳುವುದು ಮೈಗಳ್ಳರ ಮಾತು. ಎಲ್ಲರ ಬಳಿ ಇಪ್ಪತ್ನಾಲ್ಕು ಗಂಟೆಗಳೇ ಇವೆ. ಕೆಲವರು ಸಾಧಿಸಿ ಸಾಧಕರಾಗುತ್ತಾರೆ. ಇನ್ನು ಕೆಲವರು ಬೇರೆಯವರ ಬಗ್ಗೆ ಮಾತನಾಡುತ್ತಾ ಕಾಲ ಹರಣ ಮಾಡುತ್ತಾರೆ. ಸ್ತುತಿ ನಿಂದನೆಗಳಿಗೆ ಕಿವಿಗೊಡದೆ ಮುಂದೆ ಹೋದವರು ಸಾಧಕರ ಪಟ್ಟಿಯಲ್ಲಿ ಸೇರುತ್ತಾರೆ.ಎಂದು ಸರಕಾರಿ ನೌಕರ ಮಹಿಳೆಯರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಬಿಜೆ ಪರ‍್ವತಿ ವಿ ಸೋನಾರೆಯವರು ಹೇಳಿದರು.

ಅದೇ ರೀತಿಯಾಗಿ ಕಸಾಪದ ಬೀದರ ತಾಲೂಕಿನ ಮಾಜಿ ಅಧ್ಯಕ್ಷರಾದ ಎಮ್ ಎಸ್ ಮನೋಹರ ಅವರು ಮಾತನಾಡಿ, ನಾವು ಸರಕಾರಿ ನೌಕರರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಮನಸ್ಸು ಮಾಡಬೇಕಷ್ಟೆ. ಈ ರ‍್ಷ ತಂದ ಬಹುಮಾನಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮುಂದಿನ ವರುಷ ತರೋಣ . ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಮಾಡಬೇಕಾಗಿದೆ ಎಂದರು.
ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷರಾದ ಶ್ರೀಮತಿ ಸಾರಿಕಾ ಗಂಗಾ ಅವರು ಮಾತನಾಡಿ ಅನೇಕರಲ್ಲಿ ಅನೇಕ ಪ್ರತಿಭೆಗಳಿವೆ ಆದರೆ ಸರಿಯಾದ ಸಮಯಕ್ಕೆ ಸರಿಯಾದ ವೇದಿಕೆಗಳು ಸಿಗಬೇಕಷ್ಚೆ. ಈಗ ನೋಡಿ ನಮಗೆ ಯೋಗ ಗೊತ್ತಿತ್ತು ಯೋಗ ಸ್ರ‍್ಧೆ ನಡೆದ ಕಾರಣ ನಾವು ಬಹುಮಾನ ತರಲು ಸಾಧ್ಯವಾಯಿತು. ಅದೇ ರೀತಿಯಾಗಿ ಅವರವರಲ್ಲಿರುವ ಪ್ರತಿಭೆಗಳಿಗೆ ವೇದಿಕೆ ಸಿಕ್ಕರೆ ಮಾತ್ರ ಮುನ್ನೆಲೆಗೆ ಬರಲು ಸಾಧ್ಯವಾಗುತ್ತದೆ. ಮತ್ತು ಅವರು ಸಾಧನೆಗೈಯಬೇಕೆಂದು ಛಲ ತೊಡುತ್ತಾರೆ ಎಂದರು.
ಅದೇ ರೀತಿಯಾಗಿ ಸವಿಗಾನ ಅಕಾಡೆಮಿಯ ಅಧ್ಯಕ್ಷರಾದ ಭಾನುಪ್ರೀಯಾ ಅರಳಿಯವರು ಮಾತನಾಡಿ ಯಾವ ಕ್ಷೇತ್ರವೇ ಇರಲಿ ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ. ಸರಿಯಾದ ಮರ‍್ಗರ‍್ಶನ ಮತ್ತು ಅವಕಾಶಗಳು ಸಿಗಬೇಕು ಮತ್ತು ಈ ರೀತಿಯ ಸನ್ಮಾಗಳಿಂದ ಉತ್ಸಾಹ ಇಮ್ಮಡಿಗೊಳ್ಳುತ್ತದೆ. ಆ ನಿಟ್ಟಿನಲ್ಲಿ ಅವರು ಇನ್ನು ಹೆಚ್ಚು ಎರ‍್ಟ ಹಾಕಲು ಸಹಕಾರಿಯಾಗುತ್ತದೆ ಎಂದರು.
ಒಟ್ಟಾರೆಯಾಗಿ ನಮ್ಮ ಜಿಲ್ಲೆಗೆ ಚಿನ್ನ ಬೆಳ್ಳಿ ಮತ್ತು ಕಂಚನ್ನು ಗೆದ್ದ ಬಂದದ್ದಕ್ಕೆ ಸರಕಾರಿ ನೌಕರ ಮಹಿಳೆಯರ ಸಂಘದ ಪದಾಧಿಕಾರಿಗಳೆಲ್ಲರೂ ಗೆದ್ದವರನ್ನು ಅಭಿನಂದಿಸಿ ಸನ್ಮಾನ ಮಾಡುವ ಮೂಲಕ ರ‍್ಷ ವ್ಯಕ್ತ ಪಡಿಸಿದ್ದಾರೆ.

ಈ ಅಭಿನಂದನಾ ಕರ‍್ಯಕ್ರಮಕ್ಕೆ ಹುಮನಾಬಾದ, ಭಾಲ್ಕಿ, ಮತ್ತು ಔರಾದ ತಾಲೂಕಿನಿಂದ ಮಹಿಳಾ ಸರಕಾರಿ ನೌಕರರು ಭಾಗವಹಿಸಿದ್ದರು. ಇದೇ ಸಂರ‍್ಭದಲ್ಲಿ ಈ ಮೂರು ತಾಲೂಕಾ ಅಧ್ಯಕ್ಷರ ಆಯ್ಕೆ ಮಾಡಲಾಯಿತು.
ಹುಮನಾಬಾದ ತಾಲೂಕಿನ ಅಧ್ಯಕ್ಷರಾಗಿ ಶ್ರೀಮತಿ ಇಂದುಜಾ ಭಾಗವತ ಪ್ರಥಮ ರ‍್ಜೆಯ ಸಹಾಯಕರು ಶಿಕ್ಷಣ ಇಲಾಖೆ ಇವರನ್ನು ಆಯ್ಕೆ ಮಾಡಲಾಯಿತು
ಭಾಲ್ಕಿ ತಾಲೂಕಾ ಅಧ್ಯಕ್ಷರಾಗಿ ಶ್ರೀಮತಿ ಯಮುನಾಬಾಯಿ ಶಿಕ್ಷಣ ಇಲಾಖೆ ಔರಾದ ತಾಲೂಕಿನ ಅಧ್ಯಕ್ಷರಾಗಿ ಶ್ರೀಮತಿ ರೇಣುಕಾ ಆರೋಗ್ಯ ಇಲಾಖೆ ಯವರನ್ನು ಆಯ್ಕೆ ಮಾಡಲಾಯಿತು.
ಕರ‍್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಪದ್ಮಾ ಮಡಿವಾಳ ಕ್ರೀಡಾ ಇಲಾಖೆ ಅವರು ನರ‍್ವಹಿಸಿದರು. ಶ್ರೀಮತಿ ಕಾವೇರಿ ಆರ್ ಫುಲೇಕಾರ ಅವರು ಸ್ವಾಗತಿದರು ಮತ್ತು ಶ್ರೀಮತಿ ಗೀತಾ ಗಡ್ಡೆಯವರು ಕರ‍್ಯಕ್ರಮದ ವಂದನರ‍್ಪಣೆಯನ್ನು ಮಾಡಿದರು.
