Friday, May 23, 2025
Homeಜಿಲ್ಲೆಅಂಚೆ ಜೀವ ವಿಮೆ ಮಾರಾಟ ಮಾಡಲು ಪ್ರತಿನಿಧಿಗಳ ನಿಯುಕ್ತಿಗಾಗಿ ನೇರ ಸಂದರ್ಶನ ಮೇ.29ಕ್ಕೆ

ಅಂಚೆ ಜೀವ ವಿಮೆ ಮಾರಾಟ ಮಾಡಲು ಪ್ರತಿನಿಧಿಗಳ ನಿಯುಕ್ತಿಗಾಗಿ ನೇರ ಸಂದರ್ಶನ ಮೇ.29ಕ್ಕೆ

ಅಂಚೆ ಜೀವ ವಿಮೆ ಮಾರಾಟ ಮಾಡಲು
ಪ್ರತಿನಿಧಿಗಳ ನಿಯುಕ್ತಿಗಾಗಿ ನೇರ ಸಂದರ್ಶನ ಮೇ.29ಕ್ಕೆಬೀದರ್ : ಅಂಚೆ ಅಧೀಕ್ಷಕರು, ಬೀದರ ವಿಭಾಗ ಇವರು ಬೀದರ ವಿಭಾಗದಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ನಿಯುಕ್ತಿಗಾಗಿ ಮೇ.29 ರಂದು ಬೆಳಿಗ್ಗೆ 11 ಗಂಟೆಗೆ ಬೀದರ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ ಎಂದು ಬೀದರ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹತಾ ನಿಯಮಗಳು: ಅಭ್ಯರ್ಥಿಗಳು 10 ನೇ ತರಗತಿಉತ್ತೀರ್ಣರಾಗಿದ್ದುಕಡ್ಡಾಯವಾಗಿವಯಸ್ಸು 18 ವರ್ಷಗಳಾಗಿರಬೇಕು.ನಿರುದ್ಯೋಗಿ ಹಾಗೂ ಸ್ವಯಂಉದ್ಯೋಗನಿರತಯುವಕರು, ವಿಮಾ ಕಂಪನಿಗಳ ಮಾಜಿಏಜೆಂಟರು ಹಾಗೂ ಸಲಹೆಗಾರರು, ಮಾಜಿ ಸೈನಿಕರು, ಅಂಗನವಾಡಿಕಾರ್ಯಕರ್ತೆಯರು, ಮಹಿಳಾ ಮಂಡಳದ ಕಾರ್ಯಕರ್ತೆಯರು, ನಿವೃತ್ತ ಪ್ರಧಾನ ಮತ್ತುಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಅಂಚೆ ವಿಭಾಗದ ಮುಖ್ಯಸ್ಥರಿಗೆ ಸಮಂಜಸವೆಂದುಕಂಡುಬಂದಯಾವುದೇ ಅಭ್ಯರ್ಥಿಗಳಿಗೆ ಆಯ್ಕೆಯಾದ ಪಕ್ಷದಲ್ಲಿ ಅವಕಾಶ ನೀಡಲಾಗುವದು. ಆಯ್ಕೆಯಾದ ಅಭ್ಯರ್ಥಿಗಳು ರೂ.5000/- ಗಳನ್ನು ರಾಷ್ಟಿçÃಯ ಉಳಿತಾಯ ಪತ್ರಅಥವಾ ಕಿಸಾನ ವಿಕಾಸ ಪತ್ರದರೂಪದಲ್ಲಿ ಭದ್ರತಾಠೇವಣಿಯನ್ನುಇಡಬೇಕಾಗುತ್ತದೆ. ಆಯ್ಕೆಯಾದ ನೇರ ಪ್ರತಿನಿಧಿಗಳಿಗೆ ಅವರು ಮಾಡಿದ ವ್ಯವಹಾರಕ್ಕೆತಕ್ಕಂತೆ ಸೂಕ್ತ ಕಮೀಷನ್ ನೀಡಲಾಗುವದು. ನಿಗದಿತ ವೇತನವುಇರುವದಿಲ್ಲ.ಅಭ್ಯಥಿಗಳು ವೇರೆಯಾವುದೇ ವಿಮಾ ಕಂಪನಿ/ಸಂಸ್ಥೆ/ಸಂಘಗಳ ಏಜೆಂಟ ಆಗಿರಬಾರದು. ನುರಿತ ಸಂವಹನ ಕಲೆ, ಹಾಗೂ ವಿಮಾ ಮಾರಾಟಕ್ಷೇತ್ರದಲ್ಲಿ ಪೂರ್ವಾನುಭವ ಹೊಂದಿರುವವರಿಗೆಅದ್ಯತೆ ನೀಡಲಾಗುವದು.
ಆಸಕ್ತ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಸ್ವ-ವಿವರ, ಶೈಕ್ಷಣಿಕ ಪ್ರಮಾಣಪತ್ರದ ನಕಲುಗಳೊಂದಿಗೆ ಸದರಿ ದಿನಾಂಕದಂದು ನಡೆಯಲಿರಿವ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
*****

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3