ಅಲಿಯಂಬರ್ : ಅಬೇಡ್ಕರ್ ಜಯಂತಿಗೆ ಶ್ರಮಿಸಿದವರಿಗೆ ಪ್ರಶಸ್ತಿ ಪ್ರದಾನ
ಬೀದರ್ : ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ಇತ್ತಿಚೀಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 134ನೇ ಜಯಂತೋತ್ಸವದ ಅಂಗವಾಗಿ ಕಾರ್ಯಕ್ರಮದಲ್ಲಿ ಮುಖ್ಯ ಪಾತ್ರ ವಹಿಸಿ ಶ್ರಮಿಸಿರುವ ಕಮಿಟಿಯ ಅಧ್ಯಕ್ಷ ವೀರಶೆಟ್ಟಿ ಕಟ್ಟೆ ಹಾಗೂ ಕಾರ್ಯದರ್ಶಿ ಸತೀಶ ಕಟ್ಟೆ ಅವರ ಸೇವೆಯನ್ನು ಬೀದರ್ ಜಿಲ್ಲೆಯ ಯುವ ಹೋರಾಟಗಾರ ಸಂಗಮೇಶ ಭಾವಿದೊಡ್ಡಿ ಅವರು ಗುರುತಿಸಿ ಉತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಅಣದೂರ ವೈಶಾಲಿ ನಗರದ ಪೂಜ್ಯ ಬಂತೆ ಧಮಾನಂದ ಮಹಾ ಥೇರೋ, ಎರನಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶಾಮಸುಂದರ ಖಾನಪುರ, ನಿವೃತ್ತ ಪ್ರಾಚಾರ್ಯ ಶಿವಶರಣಪ್ಪ ಹುಗ್ಗಿ ಪಾಟೀಲ್, ಮಾಜಿ ತಾಲೂಕ ಪಂಚಾಯತ್ ಸದಸ್ಯ ಧರ್ಮಿಂದರ್, ಬಸವರಾಜ್ ಭಾವಿದೊಡ್ಡಿ, ಗ್ರಾಮದ ಪ್ರಮುಖರಾದ ಶ್ರೀನಿವಾಸ ಟಾಳೆ, ಶಿವಕುಮಾರ ಕೆರೂರೆ ಸೇರಿದಂತೆ ಗ್ರಾಮದ ಯುವಕರು, ಹಿರಿಯರು, ಮಹಿಳೆಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.