Friday, May 23, 2025
Homeರಾಜ್ಯಡಾ.ಸಚೀನ ಪಾಟೀಲ್ ನೇತೃತ್ವದ ನೂತನ ವಿಜಯಶ್ರೀ ಆಸ್ಪತ್ರೆಯ ಉದ್ಘಾಟನೆ

ಡಾ.ಸಚೀನ ಪಾಟೀಲ್ ನೇತೃತ್ವದ ನೂತನ ವಿಜಯಶ್ರೀ ಆಸ್ಪತ್ರೆಯ ಉದ್ಘಾಟನೆ

ಡಾ.ಸಚೀನ ಪಾಟೀಲ್ ನೇತೃತ್ವದ ನೂತನ ವಿಜಯಶ್ರೀ ಆಸ್ಪತ್ರೆಯ ಉದ್ಘಾಟನೆ
ಬೀದರ್: ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದೇವರ ರಂಗಮಂದಿರ ಆವರಣದಲ್ಲಿ ನೂತನವಾಗಿ ಡಾ.ಸಚೀನ ವಿಜಯಕುಮಾರ ಪಾಟಿಲ ಅವರ ನೇತೃತ್ವದಲ್ಲಿ ವಿಯಶ್ರೀ ಹೆಲ್ತ ಕೇರ್ ಆಸ್ಪತ್ರೆ ಸ್ಥಾಪಿಸಿದ್ದು ಅದರ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಉದ್ಘಾಟನೆ ನೇರವೇರಿಸಿ ಮಾತನಾಡಿದರು.
ಯರನಳ್ಳಿ ಕುಟುಂಬಕ್ಕೆ ಹಾಗೂ ನಮಗೆ ಅವಿನಾಭಾಬ ಸಂಬಂಧ ಇದೆ ಇವತ್ತು ಸಚೀನ ಪಾಟೀಲ ಅವರು ತಂದೆ ತಾಯಿಯ ಆಶಯದಂತೆ ವೈದ್ಯರಾಗಿ ಹುಟ್ಟಿದ ಊರಿನಲ್ಲಿಯೇ ವೈದ್ಯಕೀಯ ಸೇವೆ ನೀಡಲು ಮುಂದೆ ಬಂದಿದ್ದು
ದುಡ್ಡು ಇವತ್ತು ಬರುತ್ತೆ ಹೊಗುತ್ತೆ ಆದರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬಡ ರೋಗಿಗಳೀಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುವುದಾಗಿ ಆರೋಗ್ಯ ಸೇವೆ ನೀಡುವುದೆ ಮೊದಲ ಧ್ಯೇಯವಾಗಿಟ್ಟಿಕೊಂಡು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಎಂದು ಸಲಹೆ ನೀಡಿದರು.
ಸಚಿವ ರಹೀಮ ಖಾನ ಹಾಗೂ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ ಡಾ ಸಚೀನ ಪಾಟೀಲ ಅವರ ಆರೋಗ್ಯ ಸೇವೆ ನೀಡುವ ನಿರ್ಧಾರಕ್ಕೆ ಶುಭಕೋರಿದರು.
ಡಾ ಸಚೀನ ಪಾಟಿಲ ಮಾತನಾಡಿ ಬರಿ ಹಣ ಗಳಿಕೆಯ ಉದ್ದೆಶ ಇಟ್ಟಿಕೊಳ್ಳದೆ ಆರೋಗ್ಯ ಸೇವೆ ನೀಡುವ ಒಂದೆ ಉದ್ದೆಶ ಇಟ್ಟಿಕೊಂಡು ಬಿಪಿ ಶುಗರ,ಥೈರಾಯ್ಡ್,ಸರ್ಜರಿ,ಹರ್ನಿಯಾ ಅಲ್ಸರ್ ಹೀಗೆ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗೆ ಒಚಿದೆ ಸೂರಿನಡಿ ಚಿಕಿತ್ಸೆ ನೀಡಲು ಸಜ್ಜಾಗಿದ್ದೆವೆ ಎಂದು ತಮ್ಮ ವಿದ್ಯಾಭ್ಯಾಸದ ಬಗ್ಗೆ ಹೇಳಿದರು.
ಇದೆ ವೇಳೆ ವಿಜಯಕುಮಾರ ಪಾಟಿಲ ಯರನಳ್ಳಿ ಅವರು ಮಾತನಾಡಿ ಮಗನ ಹೊಸ ಪ್ರಯತ್ನಕ್ಕೆ ಸಂತಸ ವ್ಯಕ್ತಪಡಿಸಿದರು
ಇದೆ ವೇಳೆ ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಡಾ ಬಸವರಾಜ ಪಾಟೀಲ ಅಷ್ಟೂರೆ,ಡಾ ಚಂದ್ರಕಾಂತ ಗುದಗೆ,ಡಾ ಜ್ಞಾನೇಶ್ವರ ನಿರಗುಡೆ,ಬಾಬುವಾಲಿ,ಜೈರಾಜ ಖಂಡ್ರೆ,ಡಾ ಶಿವಯೋಗಿ ಬಾಲಿ,ಡಾವಿಜಕುಮಾರ ಕೋಟೆ,ಶ್ರೀಮತಿ ವಿಜಯಲಕ್ಞಿö್ಮ ಬಾಲಿ,ಕಿರಣ ಪಾಟೀಲ,ಸಂಜನಾ ಪಾಟಿಲ,ಶ್ರಿಮತಿ ಜಯಶ್ರೀ ವಿಜಯಕುಮಾರ ಪಾಟೀಲ ಸೇರಿದಂತೆ ಇನ್ನಿತರರು ಇದ್ದರು
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3