ಆಪರೇಷನ್ ಸಿಂಧೂರ್ ಯಶಸ್ವಿ: ಶಾಸಕ ಪ್ರಭು ಚವ್ಹಾಣರಿಂದ ಪೂಜೆ
ಬೀದರ್ : ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಮೇ.9ರಂದು ಪಟ್ಟಣದ ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ವೈರಿ ರಾಷ್ಟçದ ಪ್ರಚೋದಿತ ಭಯೋತ್ಪಾದಕರ ದಾಳಿಯಿಂದ ದೇಶದ ಮುಗ್ಧ ಜನತೆ ಪ್ರಾಣ ಕಳೆದುಕೊಂಡಿದ್ದರು. ಈ ಪೈಶಾಚಿಕ ಕೆಲಸಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಪ್ರತಿಕಾರ ತೀರಿಸಿಕೊಂಡಿದೆ. ಭಾರತ ಎಂದಿಗೂ ಶಾಂತಿಯ ಪರವಾಗಿರುತ್ತದೆ. ಅದನ್ನೇ ದೌರ್ಬಲ್ಯವೆಂದು ಭಾವಿಸಿದವರಿಗೆ ಪ್ರಧಾನಿಯವರು ಜಗತ್ತಿಗೆ ನಮ್ಮ ಶಕ್ತಿಯನ್ನು ಪರಿಚಯಿಸಿದ್ದಾರೆ.
ಭಾರತದಲ್ಲಿ ಭಯೋತ್ಪಾದಕರಿಗೆ ಉಳಿಗಾಲವಿಲ್ಲ. ಶಾಂತಿಯನ್ನು ಕದಡಲು ಯತ್ನಿಸಿದವರು ಯಾರೇ ಇರಲಿ ನಮ್ಮ ಸೈನಿಕರು ಸುಮ್ಮನೆ ಬಿಡುವುದಿಲ್ಲ, ಇನ್ನು ಮುಂದೆ ವೈರಿ ರಾಷ್ಟçಗಳ ಸಂಚುಗಳು ದೇಶದಲ್ಲಿ ಕೆಲಸ ಮಾಡುವುದಿಲ್ಲ. ಅದಕ್ಕೆ ಭಾರತೀಯ ಯೋಧರು ಅವಕಾಶ ಕಲ್ಪಿಸಿಕೊಡುವುದಿಲ್ಲವೆಂಬ ಸಂದೇಶವನ್ನು ಕೊಡಲಾಗಿದೆ ಎಂದರು.
ಭಾರತದಲ್ಲಿ ಭಯೋತ್ಪಾದಕರಿಗೆ ಉಳಿಗಾಲವಿಲ್ಲ. ಶಾಂತಿಯನ್ನು ಕದಡಲು ಯತ್ನಿಸಿದವರು ಯಾರೇ ಇರಲಿ ನಮ್ಮ ಸೈನಿಕರು ಸುಮ್ಮನೆ ಬಿಡುವುದಿಲ್ಲ, ಇನ್ನು ಮುಂದೆ ವೈರಿ ರಾಷ್ಟçಗಳ ಸಂಚುಗಳು ದೇಶದಲ್ಲಿ ಕೆಲಸ ಮಾಡುವುದಿಲ್ಲ. ಅದಕ್ಕೆ ಭಾರತೀಯ ಯೋಧರು ಅವಕಾಶ ಕಲ್ಪಿಸಿಕೊಡುವುದಿಲ್ಲವೆಂಬ ಸಂದೇಶವನ್ನು ಕೊಡಲಾಗಿದೆ ಎಂದರು.

ದೇಶದ ಹಿತಕ್ಕಾಗಿ ಜೀವದ ಹಂಗು ತೊರೆದು ಹೋರಾಡುವ ನಮ್ಮ ಸೈನಿಕರು ಈಗ ಶತೃರಾಷ್ಟç ಮತ್ತು ಭಯೋತ್ಪಾದಕರ ವಿರುದ್ಧ ಮಾಡಿರುವ ಕಾರ್ಯಾಚರಣೆ ಪ್ರಶಂಸನೀಯ. ದೇಶಕ್ಕಾಗಿ ಇಡೀ ಜೀವನ ಮುಡಿಪಾಗಿಡುವ ವೀರಯೋಧರ ಒಳಿತನ್ನು ಬಯಸುವುದು ಎಲ್ಲ ದೇಶವಾಸಿಗಳ ಕರ್ತವ್ಯ. ಈ ದಿಶೆಯಲ್ಲಿ ಔರಾದನ ಆರಾಧ್ಯದೈವ, ಉದ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾದಲ್ಲಿ ವಿಶೇಷ ಪೂಜೆ ನೆರವೇರಿಸಿ ದೇಶ ಕಾಯುವ ಯೋಧರಿಗೆ ಯಾವುದೇ ತೊಂದರೆ ಆಗದಂತೆ ಕಾಪಾಡುವಂತೆ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ಭಾರತೀಯ ಸೈನಿಕರ ಮನೋಬಲ ಹೆಚ್ಚಿಸುವುದು ಮತ್ತು ಅವರ ಒಳಿತಿಗಾಗಿ ಎಲ್ಲರೂ ಪೂಜೆ, ಪ್ರಾರ್ಥನೆಗಳನ್ನು ನೆರವೇರಿಸುವುದು ಎಲ್ಲರ ಕರ್ತವ್ಯ. ದೇಶಾದ್ಯಂತ ಪೂಜಾ ಪ್ರಾರ್ಥನೆಗಳು ನಡೆಯುತ್ತಿವೆ. ಅದರಂತೆ ನಮ್ಮಲ್ಲಿಯೂ ಕೂಡ ಎಲ್ಲ ಕಡೆಗಳಲ್ಲಿ ಇಂತಹ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಿ ದೇಶದ ಸೈನಿಕರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಬೇಕೆಂದು ಸಾರ್ವಜನಿಕರಲ್ಲಿ ಕೋರಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ದಯಾನಂದ ಘೂಳೆ, ಕೇರಬಾ ಪವಾರ್, ವೀರೇಶ ಅಲ್ಮಾಜೆ, ಖಂಡೋಬಾ ಕಂಗಟೆ, ಎಂ.ಡಿ ಸಲಾವುದ್ದಿನ್, ಮಹಾದೇವ ಅಲ್ಮಾಜೆ, ಶಿವಾಜಿ ಬೋಗಾರ್, ಸಂದೀಪ ಪಾಟೀಲನ ಸೇರಿದಂತೆ ಇತರರಿದ್ದರು.
———————–