ಬೀದರ್ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಿಗೆ ರೂ. 5.00 ಲಕ್ಷಗಳ ಗೌರವದೊಂದಿಗೆ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಬೀದರ ಸಂಸದರಾದ ಸಾಗರ ಖಂಡ್ರೆ ಅವರಿಗೆ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ ಸೋನಾರೆ ಮನವಿ ಪತ್ರ ಸಲ್ಲಿಸಿದರು.
ಈಗಾಗಲೇ ಕೇಂದ್ರ ಸರ್ಕಾರದ ವತಿಯಿಂದ ಪ್ರತಿ ವರ್ಷ ಸಾಧಕರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗಳು ನೀಡುತ್ತಿರುವುದು ಸ್ವಾಗತಾರ್ಹ, ಆದರೇ ಪ್ರಶಸ್ತಿ ಜೊತೆಗೆ ಯಾವೂದೇ ರೀತಿಯ ಗೌರವ ಧನ ನೀಡುವುದಿಲ್ಲ. ಕರ್ನಾಟಕ ರಾಜ್ಯ ಸರಕಾರ ಪ್ರತಿ ವರ್ಷ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ ರೂ.5.00 ಲಕ್ಷ ಹಾಗೂ ವಿವಿಧ ಅಕಾಡೇಮಿ ದತ್ತಿ ಪ್ರಶಸ್ತಿಗಳಿಗೂ ರೂ. 25 ಸಾವಿರ ಗೌರವ ಧನ ನೀಡುತ್ತಿದೆ.

ಆದರಿಂದ ಕೇಂದ್ರ ಸರಕಾರ ಮತ್ತು ಸಂಸ್ಕೃತಿ ಮಂತ್ರಾಲಯಕ್ಕೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ನೀಡುವ ಪದ್ಮಶ್ರೀ, ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಜೊತೆಗೆ ರೂ.5.00 ಲಕ್ಷ ಗೌರವ ಧನದೊಂದಿಗೆ ಗೌರವಿಸಿ, ಅವರಿಗೆ ಮಾಸಿಕ ರೂ. 5 ಸಾವಿರ ಮಾಶಾಸನ ದೊರಕುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಬೇಕೆಂದು ಸಂಸದ ಸಾಗರ ಖಂಡ್ರೆಯವರಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸುನೀಲ ಭಾವಿಕಟ್ಟಿ, ಗುರುಶಾಂತ (ಗುರು), ಸಿದ್ದಲಿಂಗ್ ಕಣಜಿ ಇದ್ದರು.
———————-