ಬೀದರ್ : ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪಾಸಾಗಿರುವ ಅರ್ಹ ಅಭ್ಯರ್ಥಿಗಳಿಂದ 2025-26ನೇ ಸಾಲಿನ ವಿವಿಧ ಡಿಪ್ಲೋಮಾ ಕೋರ್ಸುಗಳಿಗಾಗಿ ಅರ್ಜಿಯನ್ನು ಕರೆಯಲಾಗಿದೆ ಎಂದು ಸರ್ಕಾರಿ ಪಾಲಿಟೆಕ್ನಿಕ್ ಬೀದರನ ಪ್ರಾಚಾರ್ಯರಾದ ವಿಜಯಕುಮಾರ ಎಸ್. ಜಾಧವ ಅವರು ತಿಳಿಸಿದ್ದಾರೆ.
2025-26ನೇ ಸಾಲಿನ ಡಿಪ್ಲೋಮಾ ಇನ್ ಎಲೆಕ್ಟಿçಕಲ್ ಇಂಜಿನಿಯರಿಂಗ್, ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್, ಡಿಪ್ಲೋಮಾ ಇನ್ ಎಲೆಕ್ಟಾçನಿಕ್ಸ್ ಇಂಜಿನಿಯರಿAಗ್ ಪ್ರವೇಶಕ್ಕಾಗಿ ಆನ್ ಲೈನ್ ಅರ್ಜಿಗಳನ್ನು ಹಾಗೂ ಡಿಪ್ಲೋಮಾ ಇನ್ ಆಟೋಮೋಬೈಲ್, ಡಿಪ್ಲೋಮಾ ಇನ್ ಸಿವಿಲ್, ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾö್ಯಕ್ಟೀಸ್ (ಕನ್ನಡ ಮತ್ತು ಇಂಗ್ಲೀಷ್), ಹಾಗೂ ಡಿಪ್ಲೋಮಾ ಇನ್ ಮೆಕಾನಿಕಲ್ ಇಂಜಿನಿಯರಿಂಗ್ ಕೋರ್ಸುಗಳಿಗೆ ಆಫ್ ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆನ್ ಲೈನ್ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕ ಮೇ-15 ಮತ್ತು ಆಫ್ ಲೈನ್ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕ ಮೇ-9 ಆಗಿರುತ್ತದೆ. ಆಯ್ಕೆಯಾದ ಆನ್-ಲೈನ್ ವಿದ್ಯಾರ್ಥಿಗಳ ಮೆರಿಟ್ ಪಟ್ಟಿಯನ್ನು ದಿನಾಂಕ ಮೇ-16 ರಂದು ಮತ್ತು ಆಫ್-ಲೈನ್ ಮೆರಿಟ್ ಪಟ್ಟಿಯನ್ನು ಮೇ-10ರಂದು ಸಂಸ್ಥೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು. ಆನ್-ಲೈನ್ ಕೋರ್ಸುಗಳ ಸೀಟು ಹಂಚಿಕೆಯನ್ನು ಮೇ-21 ರಿಂದ ಮತ್ತು ಆಫ್ ಲೈನ್ ಸೀಟು ಹಂಚಿಕೆಯನ್ನು ಮೇ-10 ರಿಂದ ನಡೆಸಲಾಗುವುದೆಂದು ಸರ್ಕಾರಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿಯೊಂದಿಗೆ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಮೂಲ ಅಂಕಪಟ್ಟಿ ಅಥವಾ ವಿದ್ಯಾರ್ಥಿಗಳು ಓದಿರುವ ಶಾಲೆಯ ಮುಖ್ಯಗುರುಗಳ ದೃಢಿಕೃತ ಸಹಿ ಇರುವ ಇಂಟರನೆಟ್ ಜಿರಾಕ್ಸ್ ಪ್ರತಿ, ಮೂಲ ವರ್ಗಾವಣೆ ಅಥವಾ ಬೊನಾಫೈಡ್ ಪ್ರಮಾಣಪತ್ರ, 1 ರಿಂದ 10ನೇ ತರಗತಿವರೆಗೆ ಓದಿರುವ ವ್ಯಾಸಂಗ ಪ್ರಮಾಣಪತ್ರ, ಆಧಾರ ಕಾರ್ಡ ಪ್ರತಿ ಹಾಗೂ 6 ಭಾವಚಿತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು. ಉಳಿದಂತೆ ಕನ್ನಡ ಮಾಧ್ಯಮ ಪ್ರಮಾಣ ಪತ್ರ, ಗ್ರಾಮೀಣ ಪ್ರಮಾಣಪತ್ರ, 371(ಜೆ) ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಅನ್ವಯಿಸದಲ್ಲಿ ಮಾತ್ರ ನೀಡತಕ್ಕದ್ದೆಂದು ತಿಳಿಸಿದ್ದಾರೆ.