ಬೀದರ್ : ತಮ್ಮ ಘೋರ ತಪಸ್ಸಿನಿಂದ ಗಂಗೆಯನ್ನು ಧರೆಗೆ ತಂದು ತಮ್ಮ ಪೂರ್ವಜರ ಶಾಪ ವಿಮೋಚನೆಗೊಳಿಸಿ, ಸಕಲ ಜೀವರಾಶಿಗಳಿಗೆ ನೀರಿನ ದಾಹವನ್ನು ತಣಿಸಿದ ಮಹಾನ್ ತಪಸ್ವಿ ಭಗೀರಥ ಮಹರ್ಷಿಗಳು ಛಲ, ದೃಢ ಸಂಕಲ್ಪದ ಪ್ರತೀಕರಾಗಿದ್ದಾರೆ ಎಂದು ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಮ್ ಖಾನ್ ಹೇಳಿದರು.
ಅವರು ರವಿವಾರ ನಗರದ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮAದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಶ್ರೀ ಭಗೀರಥ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಗೀರಥರ ತತ್ವಾದರ್ಶಗಳನ್ನು ತಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ದುಶ್ಚಟಕಗಳಿಗೆ ಬಲಿಯಾಗಬಾರದು. ನಮ್ಮ ಸರ್ಕಾರ ಉಪ್ಪಾರ ಸಮಾಜ ಅಭಿವೃದ್ಧಿಗೆ ಬದ್ಧವಾಗಿದೆ. ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಉಪ್ಪಾರ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇವೆ. ಮುಂದೆಯೂ ಉಪ್ಪಾರ ಸಮುದಾಯದ ಅಭಿವೃದ್ಧಿಗೆ ಸರ್ಕಾರದಿಂದ ಹಾಗೂ ವಯಕ್ತಿಕ ಸಹಕಾರ ನೀಡಲಾಗುವುದು ಎಂದರು.
ಭಗೀರಥ ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಜಗನ್ನಾಥ ಅಲಗೋಲ ಉಪ್ಪಾರ ತಡಪಳ್ಳಿ ಅವರು, ಭಗೀರಥರು ತಮ್ಮ ಪೂರ್ವಜರ ಆತ್ಮಶಾಂತಿ ಹಾಗೂ ಮುಕ್ತಿಗಾಗಿ ಗಂಗೆಯನ್ನು ಭೂಮಿಗೆ ತಂದವರು ಭಗೀರಥರು. ಭಗೀರಥ ಎಂದರೆ ಪ್ರಯತ್ನ, ಪ್ರಯತ್ನ ಎಂದರೆ ಭಗೀರಥ ಆದ್ದರಿಂದ ಅವರ ವಂಶಸ್ಥರಾದ ನಾವುಗಳು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಪ್ರಯತ್ನ ಮಾಡುವುದನ್ನು ನಿಲ್ಲಿಸಬಾರದು. ಅವರ ಆದರ್ಶಗಳನ್ನು ಜೀವನದಲ್ಲಿ ಮೈಗುಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಭಗೀರಥ ಮಹರ್ಷಿಗಳ ಭಾವಚಿತ್ರ ಮೆರವಣಿಗೆಯು ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಗೊAಡು ಶಿವಾಜಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಹರಳಯ್ಯ ವೃತ್ತ ಹಾಗೂ ರೋಟರಿ ವೃತ್ತದ ಮಾರ್ಗದಿಂದ ಸಾಗಿ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರ ತಲುಪಿತು.
ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೋಡೆ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಸಿಂಧೆ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾ ಸೋನಾರೆ, ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ತಾನಾಜಿ ಸಗರ್, ಸಮಾಜ ಪತ್ರಕರ್ತ ಮಲ್ಲಿಕಾರ್ಜುನ ನಾಗರಾಳ, ಶಿವಾಜಿರಾವ ಸಗರ್ ಶರಣಪ್ಪ ಹುಮನಾಬಾದ, ರಾಜಶೇಖರ್ ಸೇಡಂಕರ್, ಬಾಬುರಾವ ಕೊಳ್ಳುರ್, ಮಾಣಿಕರಾವ್ ಮುತ್ನಾಳ ಸೇರಿದಂತೆ ಸಮಾಜ ಮುಖಂಡರುಗಳು ಉಪಸ್ಥಿತರಿದ್ದರು.
***