ಸಿಂದೋಲದಲ್ಲಿ ಜರುಗಿದ ರತ್ನಮ್ಮ ತಾಯಿಯವರ ತುಲಾಭಾರ ಕಾರ್ಯಕ್ರಮ
ಬೀದರ್: ತಾಲ್ಲೂಕಿನ ಸಿಂದೋಲ್ ಗ್ರಾಮದಲ್ಲಿ ಇತ್ತೀಚಿಗೆ ಶ್ರೀ ರಾಚೋಟೇಶ್ವರ ಶಿವಾಚಾರ್ಯರ ಹಾಗೂ ಸರ್ವಶರಣರ ಸ್ಮರಣೋತ್ಸವ ಹಾಗೂ ರತ್ನಮ್ಮ ತಾಯಿಯವರ ತುಲಾಭಾರ ಬಹು ಸಡಗರ ಸಂಭ್ರಮಗಳಿಂದ ಜರಗಿತು ಬೆಳಗ್ಗೆ 8:೦೦ ರಿಂದ ಶ್ರೀ ಶಿವಶಂಕರಯ್ಯ ಸ್ವಾಮಿ ಹಿರೇಮಠ ಲಾಡಗೇರಿ ಹಾಗೂ ರಾಚಯ್ಯ ಸ್ವಾಮಿ ಶಾಂತಯ್ಯ ಸ್ವಾಮಿ ಅವರ ತಂಡದವರಿಂದ ಸಂಗೀತ ರುದ್ರಾಭಿಷೇಕ ಜರಗಿತು ಮಧ್ಯಾಹ್ನ 12:30ಕ್ಕೆ ಧಾರ್ಮಿಕ ಸಭೆಯಲ್ಲಿ ಶ್ರೀ ಸೋಮಯ್ಯ ಸ್ವಾಮಿ ಹಿರೇಮಠ ಅವರ ಸನ್ನಿಧಿಯಲ್ಲಿ ಶ್ರೀ ಸಿದ್ದರಾಮಯ್ಯ ಹಿರೇಮಠರ ಸ್ವಾಮಿ ಅಧ್ಯಕ್ಷತೆಯಲ್ಲಿ ಶ್ರೀ ಶಿವಶಂಕರಯ್ಯ ಹಿರೇಮಠ್ ಲಾಡಗೇರಿ ಹಾಗೂ ಶ್ರೀ ವೀರಭದ್ರಪ್ಪ ಶರಣರ ಸಮ್ಮುಖದಲ್ಲಿ ಮುಖ್ಯ ಅತಿಥಿಗಳಾಗಿ ಗುರುನಾಥ ರಾಜಗಿರಾ ಬಗದಲ ಚಂದ್ರಯ್ಯ ಸ್ವಾಮಿ ಕೋಕಿಲಾ ಮಹಾದೆವಪ್ಪಾ ಮುಖ್ಯ ಅತಿಥಿಗಳಾಗಿ ಡಾ. ವಿ .ಎಸ್ ಕೋರಿ ಜಾನುವಾರು ಅಧಿಕಾರಿ ಮಾತನಾಡುತ್ತಾ ಶ್ರೀ ರಾಚೋಟೇಶ್ವರರು ಭಕ್ತರ ಕಲ್ಪವೃಕ್ಷ ಕಾಮಧೇನು ಹಾಗೂ ಸಂತಾನ ಫಲ ಇಷ್ಟಾರ್ಥ ಸಿದ್ಧಿ ದಾಯಕರಾಗಿದ್ದರು ಎಂದು ತಿಳಿಸಿದರು. ಅಮೃತಪ್ಪ ರಂಜೇರಿ ವಿರೂಪಾಕ್ಷಪ್ಪ ಪಾಟೀಲ್ ರೇವಣಪ್ಪ ಮೋರೆ ಶ್ರೀ ಕಲ್ಲಪ್ಪ ಎ.ಎಸ್. ಐ ರೇವಣಪ್ಪಾ ಮುಲ್ಗೆ ಮಹಾದೇವಪ್ಪ ಹಿಪ್ಪಳಗಾವ ಶ್ರೀಮತಿ ಶಾಂತಬಾಯಿ ಮಲ್ಲಿಕಾರ್ಜುನ ರಾಸುರ ಮಾತನಾಡುತ್ತಾ ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮಗಳು ಮಾಡುವುದರಿಂದ ಅಜ್ಞಾನ ಅಂಧಕಾರ ಮೂಢನಂಬಿಕೆ ಹಾಗೂ ಕಂದಾಚಾರ ನಿವಾರಣೆಯಾಗಿ ಎಲ್ಲರೂ ಸತ್ಸಂಗದಲ್ಲಿ ಇರುವುದರಿಂದ ಪಾಪಕರ್ಮಗಳು ಭಸ್ಮವಾಗುತ್ತವೆ ಎಂದು ತಿಳಿಸಿದರು. ಮಾತೊಶ್ರೀ ರತ್ನಮ್ಮ ತಾಯಿಯವರ ತುಲಾಭಾರ ಹಿರೇಮಠ ಪರಿವಾರದವರು ಬಹು ಭಕ್ತಿಯಿಂದ ನೆರವೇರಿಸಿದರು.
ವೇದಿಕೆಯಲ್ಲಿ ಪಂಚಯ್ಯ ಸ್ವಾಮಿ ಮಾಹಾಂತಯ್ಯ ಸ್ವಾಮಿ ಕಾಶಿನಾಥ ಸ್ವಾಮಿ ಸಂಜು ಕುಮಾರ ಪಾಟೀಲ ದಿಲೀಪ ನೀಲಂ ಭೀಮಣ್ಣ ಭೆಮಳಗಿ ಚಂದ್ರಕಾಂತ್ ನ್ಯಾಮ್ತಾಬಾದ್ ಬಸವಣ್ಣ ಬಾಂಬೆ ವಿಜಯಕುಮಾರ ರೆಡ್ಡಿ ಬಗದಲ ಪಾತರಪಳ್ಳಿ ಭಂಗೂರ ಹಾಗೂ ಬೀದರ ನಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಯುವ ಕಲಾವಿದ ಕಿರಣ ಹಿರೇಮಠ ಹಾಗೂ ಸಂಗಡಿಗರಿಂದ ಸಂಗೀತ ದರ್ಬಾರ ಜರಗಿತು. ಸಂಗಮೇಶ ಹಿರೇಮಠ ಸರ್ವರನ್ನು ಸ್ವಾಗತಿಸಿದರು. ವಿರೂಪಾಕ್ಷ ದೇವರು ನಿರೂಪಿಸಿದರು. ಶರಣಯ್ಯ ಸ್ವಾಮಿ ವಂದಿಸಿದರು. ಇಡೀ ರಾತ್ರಿ ಶಿವಶಕ್ತಿ ಸತ್ಸಂಗ ಬಳಗದವರಿಂದ ಭಜನೆ ಸತ್ಸಂಗ ಕಾರ್ಯಕ್ರಮ ನಡೆಯಿತು.