ಬೀದರ್ : ಔರಾದ ಮತಕ್ಷೇತ್ರದ, ಕಮಲನಗರ ತಾಲೂಕಿನ ಚಿಮ್ಮೆಗಾಂವ ರೂ. 2300 ಕೋಟಿ ಅನುದಾನದಲ್ಲಿ ಕೇಂದ್ರ ನೂತನ ಹಾಗೂ ನವಿಕರಿಸಬಹುದಾದ ಇಂಧನ ಮೂಲ ಸಚಿವಾಲಯದ ಪವರ ಗ್ರೀಡ್ ಕಾರ್ಪೋರೇಷನ್ ಮೂಲಕ ನಿರ್ಮಾಣವಾಗುತ್ತಿರುವ ದಕ್ಷೀಣ ಭಾರತದಲ್ಲೆ ಅತಿ ದೊಡ್ಡದಾದ 2500 ಮೇ.ವ್ಯಾಟ್ ಸೋಲಾರ್ ಪವರ ಗ್ರೀಡ್, ಸಬ್ ಸ್ಟೇಷನ್ ಕಾಮಗಾರಿಯನ್ನು ಮಾಜಿ ಕೇಂದ್ರ ನೂತನ ಹಾಗೂ ನವಿಕರಿಸಬಹುದಾದ ಇಂಧನ ಮೂಲ ರಾಜ್ಯ ಖಾತೆ ಸಚಿವ ಭಗವಂತ ಖೂಬಾ ವಿಕ್ಷಿಸಿ, ಈ ಪವರ್ ಗ್ರೀಡ್ ಪ್ರಾರಂಭವಾದ ಮೇಲೆ ಈ ಭಾಗದ ಸಂಪೂರ್ಣ ಅಭಿವೃದ್ದಿಯಾಗಲಿದೆ, ಇಲ್ಲಿಯ ಭೂಮಿಗೆ ಒಳ್ಳೆಯ ಬೆಲೆ ಸಿಗಲಿದೆ, ರೈತರ ಜೀವನ ಹಸನಾಗಲಿದೆ ಎಂದು ತಿಳಿಸಿದರು.
ನಾನು ಕಳೆದ ಬಾರಿ ಕೇಂದ್ರದಲ್ಲಿ ಇದೇ ಖಾತೆಯ ಸಚಿವನಾಗಿದ್ದಾಗ, ನಮ್ಮ ಔರಾದ ತಾಲೂಕಿನ ಬರುಡು ಭೂಮಿಯಲ್ಲಿ ಈ ಯೋಜನೆಗಳು ತಂದರೆ ರೈತರಿಗೂ, ನಿರುದ್ಯೋಗಿ ಯುವಕರಿಗೂ ಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಈ ಯೋಜನೆ ಮಂಜೂರಿ ಮಾಡಿಸಿದ್ದೆ, ಅದರಂತೆ ಸದ್ಯ ಕಾಮಗಾರಿ ಸಮಯದ ಮಿತಿಯಲ್ಲಿ ನಡೆಯುತ್ತಿದ್ದು, ಬರುವ ಫೆಬ್ರುವರಿ 2026ಕ್ಕೆ ಮುಗಿಯಲಿದೆ, ಈ ಪವರ್‌ಗ್ರೀಡ್ ಇಂದ ಸದ್ಯ 2500 ಮೇ.ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯಾಗುತ್ತದೆ, ಕಾಲಕ್ರಮೇಣ ಇಲ್ಲಿಂದ ಒಟ್ಟು 5000 ಮೇ.ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೊಂಡು ಸರಬರಾಜು ಮಾಡಲಾಗುತ್ತದೆ, ಈಗಾಗಲೆ ಈ ಪವರ್ ಗ್ರೀಡ್ ಸುತ್ತಮುತ್ತ 8-10 ಕಿಮೀ ಒಳಗೆ ಬೆರೆ ಬೆರೆ ಸೋಲಾರ್ ಪವರ ಪ್ಲಾಂಟ್ ಹಾಕಲು ಉದ್ಯಮಿಗಳು ಮುಂದೆ ಬರುತ್ತಿದ್ದು, ಅಂದಾಜು 10 ಸಾವಿರ ಕೋಟಿ ಹೊಸ ಹೂಡಿಕೆ ಬರಲಿದೆ, ಇದರಿಂದ ರೈತರ ಬರುಡು ಭೂಮಿಗೆ ಒಳ್ಳೆಯ ಬೆಲೆ ಸಿಗುತ್ತದೆ, ಆದಾಯ ಹೆಚ್ಚಾಗುತ್ತದೆ ಮತ್ತು ಕಾರ್ಮಿಕರಿಗೆ, ನಿರುದ್ಯೋಗಿ ಯುವಕರಿಗೆ ಕೆಲಸ ಸಿಗುತ್ತದೆ ಎಂದು ತಿಳಿಸಿದರು.
164 ಎಕ್ಕರೆ ಭೂಮಿಯಲ್ಲಿ ಈ ಯೋಜನೆ ನಡೆಯುತ್ತಿದ್ದು, 3-4 ಲಕ್ಷ ಪ್ರತಿ ಎಕ್ಕರೆಗೆ ಮಾರುತ್ತಿದ್ದ ಹೊಲಗಳು ಇವಾಗ ಪ್ರತಿ ಎಕ್ಕರೆಗೆ 27 ಲಕ್ಷ ಕೋಟ್ಟು ಪವರ್ ಗ್ರೀಡ್ ಕಾರ್ಪೋರೇಷನ್ ಅವರು ಖರಿದಿಸಿದ್ದಾರೆ, ಇದರಿಂದ ರೈತರು ಖುಷಿಯಾಗಿದ್ದಾರೆ, ಮುಂದಿನ ದಿನಗಳಲ್ಲಿ ಇನ್ನು 5000 ಎಕ್ಕರೆ ಭೂಮಿಯ ಅವಶ್ಯಕವಾಗಿದ್ದು, ರೈತರು ಮುಂದೆ ಬಂದರೆ ಇನ್ನು ಹೆಚ್ಚಿನ ಸೊಲಾರ್ ಪ್ಲಾಂಟಗಳು ಇಲ್ಲಿ ತಲೆ ಎತ್ತಲಿವೆ ಎಂದು ಭಗವಂತ ಖೂಬಾ ತಿಳಿಸಿದರು.
ಸ್ಥಳಿಯರು ಹಾಗೂ ಸದರಿ ಯೋಜನೆಗೆ ಭೂಮಿಯನ್ನು ಮಾರಾಟ ಮಾಡಿರುವ ಶ್ರೀ ರಮಾಕಾಂತ ದೇಶಮುಖ ಅವರು ಮಾತನಾಡಿ, ಹೆಸರಿಗೆ ತಕ್ಕಂತೆ ಭಗವಂತ ಖೂಬಾ ಅವರು ನಮ್ಮ ಪಾಲಿಗೆ ಭಗವಂತ ಆಗಿದ್ದಾರೆ, ಇಂತಹ ಒಂದು ದೊಡ್ಡ ಯೋಜನೆ ಬರಲು ಭಗವಂತ ಖೂಬಾ ಅವರೆ ಕಾರಣವಾಗಿದ್ದಾರೆ, ಅವರಿಗೆ ನಾವು ನಮ್ಮ ರೈತರು ಸಹಕಾರ ನೀಡುತ್ತೇವೆ, ಇಂದು ನಮ್ಮ ಭೂಮಿಗೆ ಒಳ್ಳೆಯ ಬೆಲೆ ಬಂದಿದೆ, ನಾವೇಲ್ಲರೂ ತುಂಬಾ ಸಂತೋಷದಿAದ ಇದ್ದೇವೆ ಎಂದು ತಿಳಿಸಿದರು.
ಸಂಪೂರ್ಣ ಕಾಮಗಾರಿ ವಿಕ್ಷಣೆಯಾದ ಮೇಲೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಸ್ಥಳಿಯರೊಂದಿಗೆ ಒಳ್ಳೆಯ ಸಂಪರ್ಕ, ಸಂಬAಧ ಇಟ್ಟುಕೊಳ್ಳಲು ಮಾಜಿ ಸಚಿವರು ಅಧಿಕಾರಿಗಳಿಗೆ ತಿಳಿಸಿದರು, ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪ ಪಂಚಾಕ್ಷರಿ, ಪ್ರಕಾಶ ಘೂಳೆ, ರಮೇಶ ಬಿರಾದರ, ಚಂದ್ರಶೇಖರ ದೇಶಮುಖ, ಸಂತೋಷ ಪಾಟೀಲ್, ನಾರಾಯಣ ಪಾಟೀಲ್, ಯೋಜನಾ ಅಧಿಕಾರಿಗಳಾದ ವಿ. ಗಣೇಶ, ಸಾಯಿಬಲ್ ಸರ್ಕಾರ ಮುಂತಾದವರು ಉಪಸ್ಥಿತರಿದ್ದರು.