ಬೀದರ್: ಲಘು ಉದ್ಯೋಗ ಭಾರತಿ ಬೀದರ್ ಘಟಕ ಹಾಗೂ ಬೀದರ್ ಹಾರ್ಟಿಕಲ್ಟರ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ವತಿಯಿಂದ ಲಘು ಉದ್ಯೋಗ ಭಾರತಿ ಸ್ಥಾಪನಾ ದಿನದ ಅಂಗವಾಗಿ ತಾಲ್ಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
150 ರೈತರು ಹಾಗೂ 50 ಸಾರ್ವಜನಿಕರು ಸೇರಿ 200 ಮಂದಿಯ ಉಚಿತ ತಪಾಸಣೆ ಮಾಡಲಾಯಿತು.
ಡಾ. ಪೂಜಾ ಶಿಂಧೆ, ಡಾ. ಶೈಲೇಶ್ ದಾಬಕೆ, ಡಾ. ಶೈಲೇಶ್ ಮಠ, ಡಾ. ಸಂಗಮೇಶ ವಡಗಾವೆ, ಬ್ರಿಮ್ಸ್ ವೈದ್ಯ ವಿದ್ಯಾರ್ಥಿಗಳಾದ ಅನಿಲಕುಮಾರ ಸಜ್ಜನ್, ಆರ್ಯನ್ ಕಲ್ಲೂರಕರ್, ಅನ್ನಪೂರ್ಣ, ಅರುಣಕುಮಾರ ಪಾಟೀಲ ಹಾಗೂ ಮೊಹಿನಿ ಅವರು ನೇತ್ರ, ದಂತ, ನರ ಹಾಗೂ ಸಾಮಾನ್ಯ ರೋಗಗಳ ತಪಾಸಣೆ ಮಾಡಿದರು. ರೋಗಿಗಳಿಗೆ ಉಚಿತ ಔಷಧ ಸಹ ವಿತರಿಸಲಾಯಿತು.
ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಘು ಉದ್ಯೋಗ ಭಾರತಿ ಬೀದರ್ ಘಟಕದ ಅಧ್ಯಕ್ಷ ಸಚ್ಚಿದಾನಂದ ಚಿದ್ರೆ ಅವರು, ದೇಶದಲ್ಲಿ ಲಘು ಉದ್ಯೋಗ ಭಾರತಿಯಲ್ಲಿ 53 ಸಾವಿರ ಮೈಕ್ರೊ ಸ್ಮಾಲ್ ಮ್ಯಾಕ್ರೊ ಎಂಟರ್‍ಪ್ರೈಸೆಸ್ ಸದಸ್ಯರಿದ್ದಾರೆ. 500ಕ್ಕೂ ಹೆಚ್ಚು ಘಟಕಗಳು ಇವೆ ಎಂದು ತಿಳಿಸಿದರು.
ಲಘು ಉದ್ಯಮಗಳು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುತ್ತಿವೆ. ದೇಶದ ಅಭಿವೃದ್ಧಿಗೂ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.
ಉದ್ಘಾಟನೆ ನೆರವೇರಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಲಬುರಗಿ ವಿಭಾಗದ ಮಾನ್ಯ ಸಂಘ ಚಾಲಕ ಹನುಮಂತರಾವ್ ಪಾಟೀಲ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘವು ರಾಷ್ಟ್ರ ಸೇವೆಗೈಯ್ಯುವ ವ್ಯಕ್ತಿಗಳನ್ನು ತಯಾರು ಮಾಡುತ್ತಿದೆ. ಕೋವಿಡ್ ಹಾಗೂ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ತಕ್ಷಣ ಜನರ ನೆರವಿಗೆ ಧಾವಿಸುತ್ತಾ ಬಂದಿದೆ ಎಂದು ತಿಳಿಸಿದರು.
ಬೀದರ್ ಹಾರ್ಟಿಕಲ್ಚರ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಅಧ್ಯಕ್ಷ ಚೇತನ್ ದಾಬಕೆ ಮಾತನಾಡಿ, ದೇಶದ ಬೆನ್ನೆಲುಬಾಗಿರುವ ರೈತರು ಆರೋಗ್ಯ ಕಾಳಜಿ ವಹಿಸಬೇಕು ಎಂದರು.
ಲಘು ಉದ್ಯೋಗ ಭಾರತಿ ಬೀದರ್ ಘಟಕದ ಜಂಟಿ ಕಾರ್ಯದರ್ಶಿ ಮಂಜುನಾಥ ಹೂಗಾರ ಗಾದಗಿ, ಸಲಹೆಗಾರ ರಾಘವೇಂದ್ರ ಪಾಟೀಲ, ನರಸಿಂಗ್ ಸಿಂಧೆ, ನಿಖಿಲ್, ಗಂಗಶೆಟ್ಟಿ, ಮಹೇಶ ಚಿಮಕೋಡೆ, ವೀರೇಶ ಪಾಟೀಲ ಇದ್ದರು.