ಬೀದರ್: ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ನಗರದಲ್ಲಿ ಮೂರು ದಿನ ಹಮ್ಮಿಕೊಂಡಿರುವ ಕರ್ನಾಟಕದ ಸಾಂಸ್ಕøತಿಕ ನಾಯಕ ಬಸವಣ್ಣನವರ ಜಯಂತಿ ಉತ್ಸವ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದು ಚಿಂತಕಿ ಸುವರ್ಣಾ ಚಿಮಕೋಡೆ ಹೇಳಿದರು.
ನಗರದ ಬಸವೇಶ್ವರ ಕಾಲೊನಿಯ ಉದ್ಯಾನದಲ್ಲಿ ಭಾನುವಾರ ನಡೆದ ಬಸವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮೂರು ದಿನ ಬಸವ ಸೇವಾ ಪ್ರತಿಷ್ಠಾನ ಹಾಗೂ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ನಗರದಲ್ಲಿ ಬಸವೇಶ್ವರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ವೈಭವದ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಡಾ. ದೇವಕಿ ನಾಗೂರೆ ಮಾತನಾಡಿ, ನಗರದ ಎಲ್ಲ ಕಾಲೊನಿಗಳ ಬಸವಾನುಯಾಯಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕಾಂಚನಾ ರಾಜಕುಮಾರ ಬಿರಾದಾರ ಮಾತನಾಡಿದರು. ಬಸವೇಶ್ವರ ವೆಲ್‍ಫೇರ್ ಅಸೋಸಿಯೇಷನ್ ಅಧ್ಯಕ್ಷ ಡಾ. ಅಶೋಕಕುಮಾರ ನಾಗೂರೆ, ಶರಣಪ್ಪ ಚಿಮಕೋಡೆ, ಡಾ. ಪ್ರೇಮಲತಾ ಪಾಟೀಲ, ಶ್ರೀನಾಥ ನಾಗೂರೆ, ಪ್ರಭು ಗುನ್ನಳ್ಳಿ, ಸಚಿನ್ ಮಾಹೇಶ್ವರಿ, ಅಮರ ಕಾಳೇಕರ್, ಸುನೀಲ್ ಬ್ಯಾಂಬ್ರೆ, ಜಗದೇವಿ ಹೆಡಗಾಪುರ ಮತ್ತಿತರರು ಇದ್ದರು.
ಪ್ರಚಾರಾರ್ಥ ಮೆರವಣಿಗೆ: ಬಳಿಕ ಕಾಲೊನಿಯಲ್ಲಿ ಬಸವ ಜಯಂತಿ ಉತ್ಸವದ ಪ್ರಚಾರಾರ್ಥವಾಗಿ ಬಸವಣ್ಣನವರ ಭಾವಚಿತ್ರ, ಷಟ್‍ಸ್ಥಲ ಧ್ವಜ, ಭಜನೆಯೊಂದಿಗೆ ಮೆರವಣಿಗೆ ನಡೆಸಲಾಯಿತು. ಸಾರ್ವಜನಿಕರನ್ನು ಬಸವ ಜಯಂತಿ ಉತ್ಸವದ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಯಿತು.