Saturday, May 24, 2025
Homeಜಿಲ್ಲೆಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಸಾಂತ್ವನ ಹೇಳಿದ ಉಮೇಶ್ ಮುದ್ನಾಳ್

ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಸಾಂತ್ವನ ಹೇಳಿದ ಉಮೇಶ್ ಮುದ್ನಾಳ್

 ಮೃತಪಟ್ಟ ಏಳು ಜನರಿಗೆ ತಲಾ 10 ಲಕ್ಷ ಪರಿಹಾರಕ್ಕೆ ಆಗ್ರಹ

ಕಳೆದ ವಾರ ಶಹಾಪೂರ ತಾಲೂಕಿನ ಮದ್ದರಕಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳ ಮನೆಗೆ ಭೇಟಿ ನೀಡಿ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಮುದ್ನಾಳ್ ಸಾಂತ್ವನ ನೀಡಿದರು. ಮದ್ದರಕಿ ಬಳಿ ನಡೆದ ಭೀಕರ ಅಪಘಾತದಲ್ಲಿ ಒಂದೇ ಗ್ರಾಮದ ಏಳು ಜನರು ಮೃತಪಟ್ಟಿದು ತೀವ್ರ ಬೇಸರದ ಸಂಗತಿ ಎಂದು ಬೇಸರ ಹೊರ ಹಾಕಿದ್ದರು.

ಯಾದಗಿರಿ ತಾಲೂಕಿನ ವರ್ಕನಳ್ಳಿ ಗ್ರಾಮದವರಾಗಿದ್ದ ಮೃತರು ಜವಳಕ್ಕೆಂದು ಘತ್ತರಗಿ ಭಾಗಮ್ಮ ದೇವಸ್ಥಾನಕ್ಕೆ ಹೊರಟ್ಟಿದ್ದರು. ಈ ವೇಳೆ ಘೋರ ದುರಂತ ಸಂಭವಿಸಿದೆ. ಅಪಘಾತದಲ್ಲಿ ‌ಮೃತಪಟ್ಟ ಎಲ್ಲರದ್ದು ಒಂದೊಂದು ಕಣ್ಣೀರು ಕಥೆ ಇವೆ. ಆದರೂ ಸಹ ಜಿಲ್ಲಾಡಳಿತ ಹಾಗೂ ಸಚಿವರು, ಶಾಸಕರು ಸೌಜನ್ಯಕ್ಕಾದರೂ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿಲ್ಲ‌‌. ಇದು ದುರದೃಷ್ಟಕರ ಸಂಗತಿ ಎಂದು ಬೇಸರ ಹೊರ ಹಾಕಿದ್ದರು.

ಇದೇ ವೇಳೆ ಸರ್ಕಾರ ರಸ್ತೆ ಅಪಘಾತದಲ್ಲಿ ‌ಮೃತಪಟ್ಟ ಕುಟುಂಬಸ್ಥರಿಗೆ ತಲಾ 10 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದ್ದರು. ಜೊತೆಗೆ ‌ಅವರ ಕುಟುಂಬದಲ್ಲಿ ವಿದ್ಯಾವಂತರಿಗೆ ಹೊರಗುತ್ತಿಗೆ ಆಧಾರದ ಮೇಲಾದರೂ ನೌಕರಿ ಕೊಡಬೇಕು.   ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಸರ್ಕಾರವೇ ಹೊರಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದರು.

ಈ ಸಂದರ್ಭದಲ್ಲಿ ಊರಿನ ಮುಖಂಡರು ಹಾಗೂ ಮೃತ ದುರ್ದೈವಿಗಳ ಏಳು ಕುಟುಂಬ ಸದಸ್ಯರು ಇದ್ದರು. ಎಲ್ಲರಿಗೂ ಸಾಂತ್ವನ ಹೇಳಿ ದೈರ್ಯ ತುಂಬಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3