ಬೀದರ್ : ಉಮೇಶ ಬಿ.ಕೆ. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಕಲಬುರಗಿ ಅವರ ಆದೇಶದ ಮೇರೆಗೆ ಬೀದರ ಜಿಲ್ಲೆಯ ಬಾಬಾಸಾಹೇಬ ಪಾಟೀಲ್ ಪೊಲೀಸ್ ನಿರೀಕ್ಷಕರು-3, ಕರ್ನಾಟಕ ಲೋಕಾಯುಕ್ತ ಬೀದರ ಅವರು ದಿನಾಂಕ : 22-04-2025 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹುಮನಾಬಾದ ಪ್ರವಾಸಿ ಮಂದಿರದಲ್ಲಿ ಬ್ರಷ್ಟಾಚಾರ ಮತ್ತು ಕುಂದು ಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆಂದು ಬೀದರ ಕರ್ನಾಟಕ ಲೋಕಾಯುಕ್ತ ಪೊಲೀಸ್ ನಿರೀಕ್ಷಕರು-3 ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಸರ್ಕಾರಿ ಕಛೇರಿಗಳಲ್ಲಿ ಕೆಲಸಗಳನ್ನು ವಿಳಂಭ ಮಾಡುತ್ತಿದ್ದರೆ ಕಾಣ ಇಲ್ಲದೆ ಅರ್ಜಿ ತಿರಸ್ಕರಿಸುತ್ತಿದ್ದರೆ ಅಥವಾ ಕಛೇರಿಗೆ ಅಲೆದಾಡಿಸುತ್ತಿದ್ದರೆ ಅಲ್ಲದೆ, ಸರ್ಕಾರಿ ಕಛೇರಿಗಳಲ್ಲಿ ಕೆಲಸ ಮಾಡಿಕೊಡಲು ಯಾರಾದರೂ ಲಂಚ ಕೇಳಿದರೆ ನಮ್ಮ ಗಮನಕ್ಕೆ ತರಬಹುದಾಗಿದೆ. ಕಾರಣ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಎಮ್.ಐ.ಜಿ.ನಂ. 29, ಕೆ.ಎಚ್.ಬಿ.ಕಾಲೋನಿ ಬೀದರ ದೂರವಾಣಿ ಸಂಖ್ಯೆ : 9364062674, 08482-295445 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
*****