ವಿದ್ಯಾರ್ಥಿಗಳು ನಿರಂತರ ಪ್ರಯತ್ನದಲ್ಲಿರಬೇಕು: ಚಂದ್ರಕಾಂತ ಶಾಬಾದಕರ್
ಬೀದರ್ : ಡೈಮಂಡ್ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಬರುವ ಶಾಹು ಮಹಾರಾಜ್ ಪಿಯು ಸೈನ್ಸ್ ಕಾಲೇಜು ವತಿಯಿಂದ 2024-25ನೇ ಸಾಲಿನ ದ್ವಿತೀಯ ವರ್ಷದ ಪದವಿಪೂರ್ವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಶಾಬಾದಕರ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಸಮಯಪ್ರಜ್ಞೆ ಹಾಗೂ ಶಿಸ್ತನ್ನು ಮೈಗೂಡಿಸಿಕೊಂಡು ಓದಿನ ಕಡೆ ಗಮನ ಹರಿಸಿದರೆ ಜೀವನದಲ್ಲಿ ಖಂಡಿತ ಯಶಸ್ಸು ಸಾಧಿಸಬಹುದು. ಅಭ್ಯಾಸದ ಜೊತೆಗೆ ತಂದೆ ತಾಯಿಗಳಿಗೆ ಗೌರವಿಸುವುದು, ಮೊಬೈಲ್‌ನಿಂದ ದೂರವಿದ್ದು, ಸತತ ಪ್ರಯತ್ನ ಮಾಡಬೇಕು. ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸಿ ಉನ್ನತ ಮಟ್ಟಕ್ಕೆ ಬೆಳೆಯಿರಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶ್ರೀಮತಿ ಶೈನಿ ಪ್ರದೀಪ್ ಗುಂಟಿ ಮಾತನಾಡಿ ಇಂದಿನ ಕಾಲದಲ್ಲಿ ಸಾಕಷ್ಟು ಟೆಕ್ನಾಲಜಿ ಬಂದಿವೆ. ಜಾಬ್ ಓರಿಯೆಂಟೆಡ ಕೋರ್ಸ್ಗಳು ಬಂದಿವೆ. ಅವುಗಳನ್ನು ಸದುಪಯೋಗ ಮಾಡಿಕೊಂಡು ಜೀವನದಲ್ಲಿ ಶ್ರಮಜೀವಿಗಳಾಗಿ ಬದುಕಬೇಕೆಂದು ಸಲಹೆ ನೀಡಿದರು.

ಡೈಮಂಡ ಗ್ರೂಪ್ ಆಫ್ ಸಂಸ್ಥೆ ಅಧ್ಯಕ್ಷ ವೈ ಮಾಧವರಾವ ಅವರು ಮಾತನಾಡಿ ಯಾರ ತಂದೆ ತಾಯಿಗಳಿಗೆ ಗೌರವ ಕೊಡುವುದಿಲ್ಲವೋ ಅಂಥವರು ಅನುತ್ತೀರ್ಣರಾಗಿದ್ದಾರೆ. ತಂದೆ ತಾಯಿ ಹಾಗೂ ಪಾಲಕರ ಆದೇಶ ಪಾಲಿಸಿದವರು ಪಾಸಾಗಿದ್ದಾರೆ. ಮಕ್ಕಳು ಹಿಂದೆ ಗುರು ಮುಂದೆ ಗುರಿ ಇಟ್ಟು ನಡೆಯಬೇಕು. ಅಂದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಮಕ್ಕಳು ತರಗತಿಗಳಿಗೆ ಸ್ಪಂದಿಸಿ ಉತ್ತಮ ಪ್ರಯತ್ನ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಕ್ಕಾಗಿ ಅವರಿಗೆ ಶುಭ ಹಾರೈಸುತ್ತೇನೆ ಎಂದರು.
ಇದೇ ವೇಳೆ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಕಾಲೇಜಿನ ಉಪನ್ಯಾಸಕರಿಗೂ, ಆಡಳಿತ ಮಂಡಳಿ ಸದಸ್ಯರಿಗೂ ಹಾಗೂ ಸಹಕಾರ ನೀಡಿದ ಪಾಲಕರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜ್ಞಾನಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಮೀನಾಕ್ಷಿ ಕಾಳೆ, ಎಸ್‌ಎಸ್ ಎಜುಕೇಶನ ಸೊಸೈಟಿ ಅಧ್ಯಕ್ಷರಾದ ಶೇಖ್ ಮಸ್ತಾನಲಿ, ಡೈಮಂಡ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷೆ ವೈ ರಜನಿರಾವ್, ಸೋಮೇಶೇಖರ ಬಿರಾದರ ಚಿದ್ರಿ, ಡಾ.ಮನ್ಮಥ ಡೊಳೆ, ಪ್ರಭು ಎಸ್, ಓಂಕಾರ ಸೂಯವಂಶಿ, ಬಿ.ಎಸ್.ಕರ್ಣಂ, ಸುನಂದಾ ಬಿರಾದಾರ, ಗಣೇಶ ಜೋಜನೆ, ಮಂಜುನಾಥ ನೀಲಂಗೆ, ಅಶ್ವಿನ್ ಭೋಸ್ಲೆ ಸೇರಿದಂತೆ ವಿದ್ಯಾರ್ಥಿಗಳು ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.