ಬೀದರ್ : 892ನೇ ಬಸವ ಜಯಂತಿ ಅದ್ದೂರಿ ಆಚರಣೆ ಅಂಗವಾಗಿ ಬೀದರ್ ನಗರದ ಮಡಿವಾಳ ವೃತ್ತದ ಬಳಿ ಇರುವ ಶಕುಂತಲಾ ಕಾಂಪ್ಲೆಕ್ಸ್ ನಲ್ಲಿ ಬಸವ ಜಯಂತಿ ಉತ್ಸವ ಸಮಿತಿಯ ಕಾರ್ಯಲಯವನ್ನು ಇಂದು ಭಾಲ್ಕಿಯ ಪೂಜ್ಯ ಬಸವಲಿಂಗ ಪಟ್ಟದೇವರು ಉದ್ಘಾಟಿಸಿದರು.
ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ನಾಡೋಜ ಬಸವಲಿಂಗ ಪಟ್ಟದೇವರು, ಬಸವಜಯಂತಿಯ ಲಿಂಗವAತರಿಗೆ ತುಂಬಾ ವಿಶಿಷ್ಟ ಹಾಗೂ ದೊಡ್ಡ ಹಬ್ಬವಾಗಿದೆ.
ಅಂತಹ ದೊಡ್ಡ ಹಬ್ಬದಂದು ಲಿಂಗಾಯತರು ತಮ್ಮ ಮನೆಗೆ ಸುಣ್ಣ- ಬಣ್ಣ ಮಾಡಿ, ಮಕ್ಕಳಿಗೆ ಹೊಸ ಬಟ್ಟೆ ತಂದು ವಿಜೃಭಣೆಯಿಂದ ಆಚರಿಸಬೇಕು ಎಂದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆ, ರಾಜ್ಯದ ಸಮಸ್ತ ಜನತೆಗೆ ಬಸವಜಯಂತಿಯ ಶುಭಾಶಯಗಳು. ಅಧ್ಯಕ್ಷರಾದ ಜಯರಾಜ ಖಂಡ್ರೆ, ಖಜಾಂಚಿ ರಜನೀಶ್ ವಾಲಿ, ಪ್ರಧಾನ ಕಾರ್ಯದರ್ಶಿ ಸಂಜು ಪಾಟೀಲ್ ಅವರ ನೇತೃತ್ವದಲ್ಲಿ ಈ ಬಾರಿಯ ಬಸವ ಜಯಂತಿಯನ್ನ ಒಗ್ಗಟ್ಟಿನಲ್ಲಿ ಆಚರಿಸುವ ಭರವಸೆ ಇದೆ ಎಂದರು.
ಸಮಿತಿ ಅಧ್ಯಕ್ಷರಾದ ಜಯರಾಜ ಖಂಡ್ರೆ ಮಾತನಾಡಿ,ಬಸವ ಜಯಂತಿ ಅಂಗವಾಗಿ ಈ ಬಾರಿ ಮೂರು ದಿನಗಳ ಕಾಲ ಅದ್ದೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು.
ಡಾ.ಚನ್ನಬಸವ ಪಟ್ಟದೇವರ ರಂಗಮAದಿರದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಯರಾಜ್ ಖಂಡ್ರೆ ಅವರು ಹೇಳಿದ್ದರು.