ಬೀದರ್: ತಾಲ್ಲೂಕಿನ ಸೋಲಪುರ ರಸ್ತೆಯಲ್ಲಿನ ಅನಂತಶಯನ ಮಂದಿರ ಸಮೀಪದ ನಿಸರ್ಗ ಕಾನ್ವೆಂಟ್ ಸ್ಕೂಲ್‍ನಲ್ಲಿ ಸೋಮವಾರ ಹರ್ಷೋಲ್ಲಾಸದಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಗಾದಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಗಾದಗಿ ಅವರು ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಸಂಸ್ಥೆಯ ಕಾರ್ಯದರ್ಶಿ ಗುಂಡಪ್ಪ ಮಲ್ಕನೋರ್ ಅಧ್ಯಕ್ಷೆ ವಹಿಸಿದ್ದರು. ಓಡವಾಡದ ಸಾಯಿಬಾಬಾ ಮಂದಿರದ ಅಧ್ಯಕ್ಷ ಗುರಪ್ಪ ವಾಲ್ದೊಡ್ಡಿ, ಸಂಸ್ಥೆಯ ಮಾರ್ಗದರ್ಶಕ ಅಮೀತ್ ಸೋಲಪುರ, ಪ್ರಮುಖರಾದ ಸಿದ್ದಪ್ಪ ಗಾದಗಿ, ಜೈಸಿಲ್ ಮೀರಾಗಂಜ್, ವಿಠ್ಠಲ ಮಾಣಿ, ಶಿಕ್ಷಕರಾದ ಗೀತಾ ವಗ್ಗೆ, ಅಂಜಲಿ, ಅಕ್ಷಿತಾ, ಗಣೇಶ ಸ್ವಾಮಿ, ನಿತೀಶ್ ಮಾಳಗೆ ಮತ್ತಿತರರು ಇದ್ದರು.