ಬೀದರ್: ಮನುಷ್ಯರೆಲ್ಲರೂ ಒಂದೇ. ಕುಲ ಕುಲ ಎಂದು ಬಡಿದಾಡದಿರಿ. ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕು ಸಾಗಿಸಿಬೇಕು ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಸಲಹೆ ಮಾಡಿದರು.
ಬೀದರ್ ತಾಲ್ಲೂಕಿನ ನಿಡವಂಚಾ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಗುರು ನಿಜಲಿಂಗ ಭದ್ರೇಶ್ವರರ 111ನೇ ಪುಣ್ಯರಾಧನೆ ಅಂಗವಾಗಿ ಜಾತ್ರಾ ಮಹೊತ್ಸವ ಪ್ರಯುಕ್ತ ಧರ್ಮಸಭೆ ಉದ್ಘಾಟಿಸಿ ಮಾತನಾಡುತ್ತಾ ದೇವರು ಒಬ್ಬನೇ ಇದ್ದಾನೆ. ದೇವರ ಕೃಪೆಗೆ ಪಾತ್ರರಾಗಲು ಪೂಜೆ, ಧ್ಯಾನ ಮಾಡಬೇಕು. ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಅಲ್ಲದೇ ಸಾಧು ಸಂತರನ್ನು ಗೌರವಿಸಿ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಿವೇಲ್ಲ ಸಾಗಬೇಕು ಎಂದು ತಿಳಿಸಿದರು.
ಬೆಳಗಾವಿ ಮುಕ್ತಿ ಮಠ ಹಾಗೂ ಇಟಗಾ ಮಠ ಪೂಜ್ಯ ಶ್ರೀ ಮಹರ್ಷಿ ಧರ್ಮಶ್ರೀ ಶಿವಸಿದ್ಧ ಸೋಮೇಶ್ವರ ಶಿವಾರ್ಚಾರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಆರ್ಶಿವಚನ ನೀಡುತ್ತಾ ಗುರು ನಿಜಲಿಂಗ ಭದ್ರೇಶ್ವರರ ಪವಾಡ ಪುರುಷರಾಗಿದರು. ಭಕ್ತರು ಭಕ್ತಿಯಿಂದ ಬೇಡಿದರೆ ಬೇಡಿದ ವರ ನೀಡಿದ್ದಾರೆ ಅಲ್ಲದೇ ಭದ್ರೇಶ್ವರರು ಜಾತಿ ಬೇಧ ಮಾಡಲಿಲ್ಲ ಮನುಷ್ಯಕುಲ ಎಂದು ಸಾರಿದರು. ಇವರು ಮಹಾ ತಪಸ್ವಿಗಳಾಗಿದರು ಎಂದರು. ಎಲ್ಲರೂ ಆಚಾರ ವಿಚಾರದಿಂದ ನಡೆದುಕೊಂಡು ಪ್ರೀತಿಯಿಂದ ಬದುಕು ಸಾಗಿಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಸಾನಿಧ್ಯವಹಿಸಿದ ಷ.ಬ್ರ.ಶ್ರೀ ಶಂಭುಲಿಂಗ ಶಿವಾಚಾರ್ಯರ ಹಿರೇಮುನವಳ್ಳಿ ಪ್ರತಿಯೊಬ್ಬರು ಪ್ರವಚನ, ಪುರಾಣ ಆಲಿಸಬೇಕು. ಬಿಡುವಿದ್ದಾಗ ಕುಟುಂಬದ ಸದಸ್ಯರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯಬೇಕು ಎಲ್ಲದೇ ಎಲ್ಲರೂ ಒಳ್ಳೆಯ ವಿಚಾರ ಇಟ್ಟು ಕೊಂಡು ಬದುಕು ಸಾಗಿಸಿಬೇಕು ಹೊಸ ರಥ ನಿರ್ಮಿಸಲಾಗಿದೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಜೀವನ ಪಾವನ ಮಾಡಿಕೊಳ್ಳಿಎಂದು ತಿಳಿಸಿದರು. ಶಾಂತವೀರಯ್ಯ ಸ್ವಾಮಿ ನಾವದಗಿ ಕಾರ್ಯಕ್ರಮ ನಿರೂಪಿಸಿದರು.