ಬೀದರ್ : ನಾಟಕಗಳಿಂದ ರಂಗಭೂಮಿ ಮತ್ತು ರಂಗಕರ್ಮಿಗಳು ಉಳಿಯಲು ಸಾಧ್ಯ ಎಂದು ರಂಗಾಯಣ ಕಲಬುರಗಿಯ ಮಾಜಿ ನಿರ್ದೇಶಕರಾದ ಮಹೇಶ ವಿ ಪಾಟೀಲ ತಿಳಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಸಹಯೋಗದಲ್ಲಿ ಗುಂಪಾ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿ ಬಾಬಾ ನಾಟ್ಯ ಸಂಘದ ಥೇಟರ್‌ನಲ್ಲಿ ಜರುಗಿದ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ತಾಯಿಯ ಕರುಳು ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಇಂದಿನ ಕಾಲದಲ್ಲಿ ನಾಟಕ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಕಲಾವಿದರ ಬದುಕು ದಯನೀಯವಾಗಿದೆ. ಸರ್ಕಾರದ ಜೊತೆಗೆ ಜನರು ನಾಟಕ ವೀಕ್ಷಣೆ ಮಾಡಿ ಅವರಿಗೆ ಪ್ರೋತ್ಸಾಹಿಸಬೇಕು. ಏಕೆಂದರೆ ನಾಟ್ಯ ಸಂಘದವರು ನಮ್ಮ ದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ಇಂದಿಗೂ ಉಳಿಸಿ ಬೆಳೆಸುತ್ತಿದ್ದಾರೆ ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಹಿರಿಯ ರಂಗ ಕಲಾವಿದ ಸಂಗ್ರಾಮ ಎಂಗಳೆ ಮಾತನಾಡಿ ಮುಂದಿನ ಯುವ ಪೀಳಿಗೆಗೆ ನಾಟಕ ಪರಿಚಯಿಸಲು ಎಲ್ಲರೂ ಪ್ರಯತ್ನಿಸಬೇಕು. ಆಧುನಿಕತೆ ಬಂದ ತಕ್ಷಣ ಹಳೆಯ ಸಂಸ್ಕೃತಿಯನ್ನು ಯಾರೂ ಮರೆಯಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ ವ್ಯಕ್ತಿ ಮಂಗನಿಂದ ಮಾನವನಾದ ಎಂಬುದು ಎಲ್ಲರ ವಾದ. ಬರುಬರುತ್ತಾ ಸುಸಂಸ್ಕೃತನಾಗುತ್ತಾ ಬಂದ. ಇಂದಿನ ಆಧುನಿಕತೆಯ ಜೊತೆಗೆ ಸೇರಿಕೊಂಡು ಹಳೆಯ ನಾಟಕ ಸಂಸ್ಕೃತಿಯೂ ಮರೆಯದೆ ಉಳಿಸಿ ಬೆಳೆಸಬೇಕಾದ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಶಿರಡಿ ಸಾಯಿ ಬಾಬಾ ನಾಟ್ಯ ಸಂಘದ ಅಧ್ಯಕ್ಷ ಬಸವರಾಜ ಕಟ್ಟಿಮನಿ ಕಷ್ಟದ ಮಧ್ಯೆಯೂ ನಾಟಕ ಕಂಪನಿ ನಡೆಸುತ್ತ ನಮ್ಮ ಸಂಸ್ಕೃತಿ ಉಳಿಸುತ್ತಿರುವುದು ಶ್ಲಾಘನೀಯ ಎಂದರು.
ಇದೇ ವೇಳೆ ತಾಯಿಯ ಕರುಳು ನಾಟಕ ಪ್ರದರ್ಶನ ಜರುಗಿತು. ಪವನ ಬಾರೆ ಪ್ರಾರ್ಥಿಸಿದರು. ರಾಷ್ಟಿಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಸುನಿತಾ ಕೂಡ್ಲಿಕರ್ ನಿರೂಪಿಸಿದರು.
ಎಸ್.ಬಿ.ಕುಚಬಾಳ ವಂದಿಸಿದರು. ವೇದಿಕೆ ಮೇಲೆ ಕಲಾವಿದರಾದ ವಿಷ್ಣುಕಾಂತ ಬಿಜೆ, ಬಸವರಾಜ ಕಟ್ಟಿಮನಿ, ಶೇಷಪ್ಪ ಚಿಟ್ಟಾ, ದೇವಿದಾಸ ಚಿಮಕೋಡ, ಲಕ್ಷö್ಮಣ ಮಚಕುರಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಂಭುಲಿAಗ ವಾಲದೊಡ್ಡಿ, ನಿಜಲಿಂಗಪ್ಪ ತಗಾರೆ ಸೇರಿದಂತೆ ವಿವಿಧ ಗಣ್ಯರು ಹಾಗೂ ಜನರು ನಾಟಕ ವೀಕ್ಷಣೆ ಮಾಡಿದರು.
—————-