ಬೀದರ್ ದಕ್ಷಿಣ ಕ್ಷೇತ್ರದ ಚಿಟ್ಟಾ ರಸ್ತೆಗೆ ಶಾಸಕ ಶೈಲೇಂದ್ರ ಬೆಲ್ದಾಳೆ ಭೇಟಿ, ಪರಿಶೀಲನೆ
ಬೀದರ್ : ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಚಿಟ್ಟಾ ರಸ್ತೆ ಮಳೆಯಿಂದ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು ಈಗಾಗಲೇ ಗುಂಪಾ ರಸ್ತೆಯಿಂದ ೫ ಕೋಟಿ ರೂ. ವೆಚ್ಚದ ರಸ್ತೆ ಹಾಗೂ ೧ ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿ ಚಾಲನೆ ನೀಡಲಾಗಿದೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂಳಿದ ರಸ್ತೆ ನಿರ್ಮಾಣಕ್ಕಾಗಿ ೯ ಕೋಟಿ ಅವಶ್ಯಕತೆ ಇರುವ ಕಾರಣ ಸಂಬAಧಪಟ್ಟ ಇಲಾಖೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಅನುದಾನ ಬಿಡುಗಡೆ ಮಾಡಿದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು.

ಈ ಹಿಂದೆ ಮಳೆ ನೀರು ಸಹಜವಾಗಿ ಹರಿಯಲು ದೊಡ್ಡ ಕಾಲುವೆ (ಹಳ್ಳಾ) ವ್ಯವಸ್ಥೆ ಮಾಡಲಾಗಿತ್ತು ಇದೀಗ ಸುತ್ತಮುತ್ತಲಿನ ಜಮೀನಿನ ಮಾಲಿಕರು ಹಾಗೂ ಲೇಔಟ್ ಮಾಲಿಕರು ಕಾಲುವೆ ಒತ್ತುವರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಉಂಟಾಗಿದೆ ಹೀಗಾಗಿ ಕಾಲುವೆ ನಕಾಶೆ ಸ್ಥಳ ಗುರುತಿಸಿ ಒತ್ತುವರಿ ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಒಂದು ವಾರದಲ್ಲಿ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ವಿಧಾನಸಭೆ ಅಧಿವೇಶನದಲ್ಲಿ ಜಿಲ್ಲೆಯ ಅತಿವೃಷ್ಟಿ ಹಾನಿ ಕುರಿತು ಮಾತನಾಡಿದ್ದೇನೆ ಸರ್ಕಾರ ಶೀಘ್ರ ಪರಿಹಾರ ಬಿಡುಗಡೆ ಮಾಡಬೇಕು. ವಾಡಿಕೆಗಿಂತ ಹೆಚ್ಚು ಮಳೆಯಾಗಿರುವ ಹಿನ್ನೆಲೆಯಲ್ಲಿ ಕಾರಂಜಾ ಜಲಾಶಯ ತುಂಬಿ ನೀರು ಬಿಟ್ಟಿದ್ದರಿಂದ, ಮಾಂಜ್ರಾ ನದಿಗೆ ಪ್ರವಾಹ ಬಂದಿದ್ದರಿAದ ಸಾಕಷ್ಟು ಸಮಸ್ಯೆಯಾಗಿದೆ. ಬೆಳೆ ಹಾನಿ ಜೊತೆಗೆ ಅನೇಕ ಕಡೆ ರಸ್ತೆಗಳು, ಸೇತುವೆಗಳಿಗೆ ಹಾನಿಯಾಗಿದೆ. ವಿದ್ಯುತ್ ಕಂಬ, ಟ್ರಾನ್ಸ್ಫರ್ಮರ್ ನಾಶವಾಗಿವೆ. ಅನೇಕ ಮನೆಗಳು ಬಿದ್ದಿವೆ. ಹೀಗಾಗಿ ಅತಿವೃಷ್ಟಿಪೀಡಿತ ಜಿಲ್ಲೆಗೆ ತಕ್ಷಣ ತುರ್ತು ಪರಿಹಾರ ನೀಡಿ ನೆರವಿಗೆ ಬರುವಂತೆ ಸರ್ಕಾರಕ್ಕೆ ಒತ್ತಾಯಿಸುವೆ ಜಿಲ್ಲಾಡಳಿತ ಸಹ ಶೀಘ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
