Friday, January 16, 2026
HomePopularಆ.21 ರಂದು ಲೋಕಾಯುಕ್ತ ಅಹವಾಲು ಸಭೆ

ಆ.21 ರಂದು ಲೋಕಾಯುಕ್ತ ಅಹವಾಲು ಸಭೆ

ಆ.21 ರಂದು ಲೋಕಾಯುಕ್ತ ಅಹವಾಲು ಸಭೆ

ಬೀದರ್ : ಕರ್ನಾಟಕ ಲೋಕಾಯುಕ್ತ ಬೀದರ ಪೊಲೀಸ್ ಠಾಣೆ ವತಿಯಿಂದ ಹುಮನಾಬಾದ ತಾಲ್ಲೂಕು ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಆಗಸ್ಟ್.21 ರಂದು ಬೆಳಿಗ್ಗೆ 11 ಗಂಟೆಯಿಂದ 13:30 ಗಂಟೆಯವರೆಗೆ ಹುಮನಾಬಾದ ತಹಸೀಲ್ ಕಛೇರಿ ಸಭಾಂಗಣದಲ್ಲಿ ಸಾರ್ವಜನಿಕ ಕುಂದು ಕೊರತೆ/ಅಹವಾಲು ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಬೀದರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರಣ ಸಾರ್ವಜನಿಕರು ತಮಗೆ ಆಗಬೇಕಾದ ಕೆಲಸಗಳಲ್ಲಿ ವಿಳಂಭ ಮಾಡುತ್ತಿದ್ದರೆ ಅಥವಾ ಅಧಿಕಾರಿಗಳು ನ್ಯಾಯ ಸಮ್ಮತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ತೊಂದರೆ ಕೊಡುತ್ತಿದ್ದರೆ ಸಭೆಯಲ್ಲಿ ತಮ್ಮ ಕುಂದು ಕೊರತೆಗಳನ್ನು ನೇರವಾಗಿ ಬಂದು ಸಲ್ಲಿಸಲು ಅಥವಾ ಸ್ಥಳದಲ್ಲಿಯೇ ದೂರು ಅರ್ಜಿ ಫಾರಂ ನಂ. 1 ಮತ್ತು 2 ತೆಗೆದುಕೊಂಡು ದೂರು ನೀಡಲು ಅನುಕೂಲ ಕಲ್ಪಿಸಲಾಗಿದೆ, ಸಾರ್ವಜನಿಕರು ಇದರ ಸದುಇಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಅಧೀಕ್ಷಕರು ಕಲಬುರಗಿ ಅವರ ಮೊ.ಸಂ-9364062519, ಪೊಲೀಸ್ ಉಪಾಧೀಕ್ಷಕರು ಬೀದರ ಮೊಬೈಲ್ -9364062571, ಪೊಲೀಸ್ ನಿರೀಕ್ಷಕರು-1 ಮೊಬೈಲ್-9364062672, ಪೊಲೀಸ್ ನಿರೀಕ್ಷಕರು-2 ಮೊ.-9364062673, ಪೊಲೀಸ್ ನಿರೀಕ್ಷಕರು-3 ಮೊ.-9364062674 ಹಾಗೂ ಪೊಲೀಸ್ ನಿರೀಕ್ಷಕರು-4 ಮೊ.-9364062675 ಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3