Friday, January 16, 2026
HomePopularಶ್ರೀಕೃಷ್ಣ ಜನ್ಮಾಷ್ಠಮಿ: ಔರಾದ್‌ನಲ್ಲಿ ದಹಿ ಹಂಡಿ ಉತ್ಸವ

ಶ್ರೀಕೃಷ್ಣ ಜನ್ಮಾಷ್ಠಮಿ: ಔರಾದ್‌ನಲ್ಲಿ ದಹಿ ಹಂಡಿ ಉತ್ಸವ

ಶ್ರೀಕೃಷ್ಣ ಜನ್ಮಾಷ್ಠಮಿ: ಔರಾದ್‌ನಲ್ಲಿ ದಹಿ ಹಂಡಿ ಉತ್ಸವ
ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಲು ಮುಂದಾಗಿ: ಶಾಸಕ ಪ್ರಭು ಚವ್ಹಾಣ

ಬೀದರ್ : ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿಯಿಂದ ಔರಾದ(ಬಿ) ಪಟ್ಟಣದಲ್ಲಿ ಶನಿವಾರ ನಡೆದ ‘ದಹಿ ಹಂಡಿ ಸ್ಪರ್ಧೆ’ ಜನಮನ ಸೆಳೆಯಿತು. ಯುವಕರ ತಂಡಗಳು ಉತ್ಸಾಹದಿಂದ ಪಾಲ್ಗೊಂಡವು.

ಶ್ರೀ ಕೃಷ್ಣನ ಬಾಲಲೀಲೆಗಳನ್ನು ಪ್ರತಿಬಿಂಬಿಸುವ ದಹಿ ಹಂಡಿ ಸ್ಪರ್ಧೆಗಾಗಿ ಹೂಹಾರಗಳಿಂದ ಅಲಂಕೃತಗೊAಡ ಕ್ರೇನ್‌ಗೆ ಎತ್ತರದಲ್ಲಿ ಹಗ್ಗಕ್ಕೆ ಹಂಡಿ(ಮಡಕೆ) ಕಟ್ಟಲಾಗಿತ್ತು. ಯುವಕರ ತಂಡಗಳು ಮಾನವ ಗೋಪುರ ನಿರ್ಮಿಸಿ ಹಂಡಿ ಒಡೆಯಲು ಹಲವು ಪ್ರಯತ್ನಗಳನ್ನು ನಡೆಸಿದವು.”ಗೋವಿಂದಾ ಆಲಾ ರೇ!” ಎಂಬ ಘೋಷಣೆಗಳ ಮಧ್ಯೆ ಕಾರ್ಯಕ್ರಮ ಸಂಭ್ರಮದಿAದ ನೆರವೇರಿತು.
ಶಾಸಕರಾದ ಪ್ರಭು ಚವ್ಹಾಣ ಅವರು ಅಮರೇಶ್ವರ ಹಾಗೂ ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೃಷ್ಣ-ರುಕ್ಮಿಣಿ ವೇಷಧಾರಿಗಳಾಗಿ ಆಗಮಿಸಿದ್ದ ಮಕ್ಕಳಿಗೆ ಶಾಸಕರು ಬಹುಮಾನ ನೀಡಿ ಪ್ರೋತ್ಸಾಹಿಸಿದರು.

ಈ ವೇಳೆ ಮಾತನಾಡಿದ ಅವರು, ಶ್ರೀಕೃಷ್ಣ ಜನ್ಮಾಷ್ಠಮಿ ನಮ್ಮ ಸಂಸ್ಕೃತಿಯ ಪ್ರಮುಖ ಹಬ್ಬವಾಗಿದೆ. ಶ್ರೀಕೃಷ್ಣ ಪರಮಾತ್ಮರ ಲೀಲೆಗಳನ್ನು ತಿಳಿಸಲು ಶ್ರೀಕೃಷ್ಣ ಜನ್ಮಾಷ್ಠಮಿಯಂದು ದಹಿ ಹಂಡಿ ಉತ್ಸವವನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮ ಉತ್ತರ ಭಾರತದಲ್ಲಿ ಅತ್ಯಂತ ವಿಜೃಂಬಣೆಯಿAದ ನಡೆಯುತ್ತದೆ. ನಮ್ಮಲ್ಲಿಯೂ ಕೂಡ ದಹಿ ಹಂಡಿ ಉತ್ಸವ ಜರುಗಬೇಕೆಂಬುದು ಬಹಳಷ್ಟು ದಿನಗಳ ಬಯಕೆಯಾಗಿತ್ತು. ಅದರಂತೆ ಕಳೆದ ವರ್ಷ ಔರಾದ್‌ನಲ್ಲಿ ವೈಭವದಿಂದ ದಹಿ ಹಂಡಿ ಉತ್ಸವ ನಡೆಸಲಾಗಿತ್ತು. ಈ ವರ್ಷವೂ ಆಯೋಜಿಸಲಾಗುತ್ತಿದೆ ಎಂದರು.
ನಮ್ಮ ದೇಶದ ಸಂಸ್ಕೃತಿ, ಪರಂಪರೆಗಳನ್ನು ಉಳಿಸಲು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಈ ದಿಶೆಯಲ್ಲಿ ಎಲ್ಲರೂ ಪ್ರಯತ್ನಿಸಬೇಕು. ಈ ಉದ್ದೇಶದೊಂದಿಗೆ ಯಾವುದೇ ಪಕ್ಷಬೇಧಗಳಿಲ್ಲದೇ ದಹಿ ಹಂಡಿ ಉತ್ಸವ ಏರ್ಪಡಿಸಲಾಗುತ್ತಿದೆ. ಇದು ನನ್ನ ಕಾರ್ಯಕ್ರಮವಲ್ಲ. ಶ್ರೀ ಅಮರೇಶ್ವರರ ಮತ್ತು ಔರಾದ ಪಟ್ಟಣದ ಕಾರ್ಯಕ್ರಮವಾಗಿದ್ದು, ಎಲ್ಲರೂ ಭಾಗವಹಿಸಬಹುದಾಗಿದೆ ಎಂದರು.
ಶಿಕ್ಷಣ ಕ್ಷೇತ್ರದ ಸುಧಾರಣೆಯಾಗಬೇಕು. ನಮ್ಮ ಮಕ್ಕಳು ಕೂಡ ಐಎಎಸ್, ಐಪಿಎಸ್‌ನಂತಹ ಹುದ್ದೆಗಳನ್ನು ಅಲಂಕರಿಸುವAತಾಗಬೇಕೆAಬ ಉದ್ದೇಶದಿಂದ ವಿದ್ಯಾರ್ಥಿಗಳ ಮನೋಬಲ ಹೆಚ್ಚಿಸಲು ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸನ್ಮಾನಿಸುತ್ತಾ ಬಂದಿದ್ದೇನೆ. ನಮ್ಮ ಸಂಸ್ಕೃತಿಯ ಭಾಗವಾಗಿರುವ ಹಬ್ಬಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದುವರೆಸಿಕೊAಡು ಹೋಗಲು ರಕ್ಷಾಬಂಧನವೂ ಆಯೋಜಿಸಲಾಗುತ್ತಿದೆ. ಈ ವರ್ಷ ನಡೆದಿಲ್ಲ. ಮುಂದೆ ಎಲ್ಲ ಕಾರ್ಯಕ್ರಮಗಳನ್ನು ಮುಂದುವರೆಸಲಾಗುವುದು. ದಹಿ ಹಂಡಿ ಕಾರ್ಯಕ್ರಮ ಜೀವಮಾನ ಇರುವವರೆಗೆ ಮುಂದುವರೆಯಲಿದೆ ಎಂದರು.
ಕನೈಯ್ಯಾ, ಗೋಪಾಲ, ಕೇಶವ, ದ್ವಾರಕಾಧೀಶ, ವಾಸುದೇವ ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಶ್ರೀಕೃಷ್ಣನ ಲೀಲೆಗಳು ಸಾಕಷ್ಟಿವೆ. ಇವರ ಬಗ್ಗೆ ಮಹಾಭಾರತ ಹಾಗೂ ಭಗವದ್ಗೀತೆ ಕಂಡು ಬರುತ್ತದೆ. ಜಗತ್ತಿನಲ್ಲಿ ಅನ್ಯಾಯ, ಅತ್ಯಾಚಾರ ಅಧರ್ಮ, ಅಸತ್ಯ ಹೆಚ್ಚಾದಾಗ ಶ್ರೀಕೃಷ್ಣ ಅವತರಿಸುತ್ತಾರೆ. ಶ್ರೀಕೃಷ್ಣ ಪರಮಾತ್ಮನನ್ನು ಭಕ್ತಿಯಿಂದ ಪೂಜಿಸಿದರೆ ಕಷ್ಟಗಳು ದೂರವಾಗುತ್ತವೆ ಎಂದು ತಿಳಿಸಿದರು.
ನಾನು ಮಹಾಜನತೆಯ ಸೇವಕನಾಗಿದ್ದು ಸದಾ ನಿಮ್ಮ ಜೊತೆಗಿದ್ದೇನೆ. ಸರ್ಕಾರದ ಯೋಜನೆಗಳು ಪ್ರತಿ ಗ್ರಾಮಕ್ಕೆ ತಲುಪಿಸಬೇಕು. ಅರ್ಹರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕೆಂಬ ಉದ್ದೇಶದಿಂದ ಕೆಲಸ ಮಾಡುತ್ತಿದ್ದು, ಅಭಿವೃದ್ಧಿಯ ಸಂಕಲ್ಪದೊAದಿಗೆ ಕೆಲಸ ಮಾಡುತ್ತಿದ್ದೇನೆ. ಜನತೆಯೂ ನನ್ನ ಜೊತೆಗಿದ್ದು, ಯಾವುದೇ ಕಷ್ಟಗಳಿಗೆ ಕುಗ್ಗದೇ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸುತ್ತೇನೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಮಾತನಾಡಿ, ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಶಾಸಕ ಪ್ರಭು ಚವ್ಹಾಣ ಅವರು ನಿರಂತರ ಶ್ರಮಿಸುತ್ತಿದ್ದಾರೆ. ಕೇವಲ ಉತ್ತರ ಭಾರತಕ್ಕೆ ಸೀಮಿತವಾಗಿದ್ದ ದಹಿ ಹಂಡಿ ಉತ್ಸವವನ್ನು ಔರಾದ(ಬಿ) ಪಟ್ಟಣದಲ್ಲಿ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಕಾರ್ಯಕ್ರಮಗಳು ಎಲ್ಲಾ ಕಡೆಗಳಲ್ಲಿ ಆಗಬೇಕು ಎಂದು ಹೇಳಿದರು. ಕಸಾಪ ತಾಲ್ಲೂಕು ಅಧ್ಯಕ್ಷರಾದ ಬಿ.ಎಂ ಅಮರವಾಡಿ ಮಾತನಾಡಿದರು. ಉದ್ಭವಲೀಂಗ ಶ್ರೀ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿಯ ಅಧ್ಯಕ್ಷ ಶಿವರಾಜ ಅಲ್ಮಾಜೆ ಪ್ರಾಸ್ತಾವಿಕ ಮಾತನಾಡಿದರು.
ಗದಗ ಜಿಲ್ಲೆ ಕಲಕೇರಿ ಮಠದ ಪೂಜ್ಯ ನವೀನಶಾಸ್ತಿçಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಔರಾದ(ಬಿ) ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸರುಬಾಯಿ ಘೂಳೆ, ತಹಸೀಲ್ದಾರರಾದ ಮಹೇಶ ಪಾಟೀಲ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ಮುಖಂಡರಾದ ಮಾರುತಿ ಚವ್ಹಾಣ, ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ದಯಾನಂದ ಘೋಳೆ, ಸಂಜು ವಡೆಯರ್, ಬಾಬು ಪವಾರ್, ಸಚಿನ ರಾಠೋಡ, ಕೇರಬಾ ಪವಾರ್, ಉದಯ ಸೋಲಾಪೂರೆ, ಸುಜಿತ ರಾಠೋಡ, ಪ್ರದೀಪ ಪವಾರ, ಧನಾಜಿ ರಾಠೋಡ, ಅಶೋಕ ಶೆಂಬೆಳ್ಳಿ, ಸಂದೀಪ ಪಾಟೀಲ, ಬಸವರಾಜ ಹಳ್ಳೆ, ರಾಮ ನರೋಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಹುಮಾನ ಗಿಟ್ಟಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಕಾಲೇಜು ವಿಭಾಗದ ಸ್ಪರ್ಧೆಯಲ್ಲಿ ಔರಾದ(ಬಿ) ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳ ತಂಡವು ಅತಿ ಕಡಿಮೆ ಅವಧಿಯಲ್ಲಿ ದಒಡೆಯುವ ಮೂಲಕ ಗೆಲುವಿನ ನಗೆ ಬೀರಿತು. ಅಮರೇಶ್ವರ ಪದವಿ ಕಾಲೇಜು ತಂಡ ದ್ವಿತೀಯ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೆಜು ತಂಡ ತೃತಿಯ ಸ್ಥಾನ ಪಡೆಯಿತು. ಸಾರ್ವಜನಿಕ ವಿಭಾಗದಲ್ಲಿ ಮುಕ್ತಿನಾಥ ತಂಡ ಪ್ರಥಮ, ಸಿದ್ದರಾಮೇಶ್ವರ ತಂಡ ದ್ವಿತೀಯ ಮತ್ತು ಇಂದಿರಾನಗರ ತಾಂಡಾ ತಂಡವು ತೃತಿಯ ಸ್ಥಾನ ಗಳಿಸಿತು. ವಿಜೇತ ತಂಡಗಳಿಗೆ ಶಾಸಕರು ನಗದು ಬಹುಮಾನ, ಪಾರಿತೋಷಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದರು. ಪ್ರಥಮ ಸ್ಥಾನ ಪಡೆದ ತಂಡಕ್ಕೆ 25 ಸಾವಿರ, ಎರಡನೇ ತಂಡಕ್ಕೆ 15 ಸಾವಿರ ಮತ್ತು ಮೂರನೇ ತಂಡಕ್ಕೆ 10 ಸಾವಿರ ನಗದು ಬಹುಮಾನ ನಿಗದಿಪಡಿಸಲಾಗಿತ್ತು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3