Friday, January 16, 2026
HomePopularಶ್ರದ್ಧೆ, ಶಿಸ್ತು ಮತ್ತು ಸೇವಾಭಾವನೆಯ ಪರಿಪೂರ್ಣ ರೂಪ: ಶ್ರೀ ಅಶೋಕ ಮಹಾಲಿಂಗ

ಶ್ರದ್ಧೆ, ಶಿಸ್ತು ಮತ್ತು ಸೇವಾಭಾವನೆಯ ಪರಿಪೂರ್ಣ ರೂಪ: ಶ್ರೀ ಅಶೋಕ ಮಹಾಲಿಂಗ

ಸ್ವಯಂ ನಿವೃತ್ತಿ ಹೊಂದಿರುವ ಶ್ರೀ ಅಶೋಕ ಮಹಾಲಿಂಗ ಅವರಿಗೆ ಇಂದು ಬೀದರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಶ್ರೀ ಪ್ರದೀಪ ಗುಂಟಿ, ಐಪಿಎಸ್., ಗೌರವಿಸಿ ಬೀಳ್ಕೊಟ್ಟರು.

ಕೌಟುಂಬಿಕ ಹಿನ್ನೆಲೆ:

ಶ್ರೀ ಅಶೋಕ ಮಹಾಲಿಂಗರವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕು ಖಂಡಾಳ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿ ಬೆಳೆದವರು. ಅವರು ಸ್ವ. ಗುರುಲಿಂಗಪ್ಪ ಮತ್ತು ಶ್ರೀಮತಿ ಭಾಗಿರತಿಬಾಯಿ ಮಹಾಲಿಂಗರವರ 2ನೇ ಪುತ್ರ. ಈ ದಂಪತಿಗೆ ನಾಲ್ವರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣುಮಗಳು.

ಶ್ರೀ ಅಶೋಕ ಮಹಾಲಿಂಗ ಮತ್ತು ಅವರ ಧರ್ಮಪತ್ನಿ ಮಹಾದೇವಿಯವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗು. ಅವರ ಪುತ್ರಿ ಪೂಜಾರನ್ನು ಬೀದರನ ಎಂ.ಎಸ್.ಪಾಟೀಲ ಮಗ ಮೃತ್ಯುಂಜಯ ಅವರಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಅವರೀಗ ದುಬೈನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುತ್ರ ಪುನೀತ ಎಲ್.ಎಲ್.ಬಿ. ಮುಗಿಸಿ ಹೈಕೋರ್ಟನಲ್ಲಿ ವಕೀಲರಾಗಿದ್ದಾರೆ. ಪುತ್ರಿ ಪ್ರತೀಕ್ಷಾ ಬಿ.ಇ. (ಕಂಪ್ಯೂಟರ್ ಸೈನ್ಸ್) ಮುಗಿಸಿ ಟೆಕ್ ಮಹೀಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಶೈಕ್ಷಣಿಕ ಹಿನ್ನೆಲೆ:

ಅವರು ಪ್ರಾಥಮಿಕ ಶಿಕ್ಷಣ ಖಂಡಾಳ ಗ್ರಾಮದಲ್ಲಿ, ಪ್ರೌಢ ಶಿಕ್ಷಣ ಬಸವಕಲ್ಯಾಣದ ಜೆ.ಬಿ.ಕೆ. ಹೈಸ್ಕೂಲಿನಲ್ಲಿ ಪಡೆದರು. 1984ರಲ್ಲಿ ಎಸ್.ಎಸ್.ಎಲ್.ಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಬಳಿಕ ಸರ್ಕಾರಿ ಪಾಲಿಟೆಕ್ನಿಕ್, ಬೀದರದಲ್ಲಿ ಕಮರ್ಷಿಯಲ್ ಪ್ರಾಕ್ಟೀಸ್ ಡಿಪ್ಲೋಮಾ ಪ್ರವೇಶ ಪಡೆದು 1987ರಲ್ಲಿ ಯಶಸ್ವಿಯಾಗಿ ಪೂರೈಸಿದರು. ಶ್ರೀ ಜಿ.ಎಂ.ಗೋಣಿ ಮತ್ತು ಶ್ರೀಮತಿ‌ ಚಂದಾ ಕುಲಕರ್ಣಿ ಯವರ ಪ್ರೀತಿಯ ಶಿಷ್ಯರಾಗಿ ಅಧ್ಯಯನ ಮಾಡಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ವಿಜಯ ಕಾಲೇಜಿನಲ್ಲಿ ಬಿಕಾಂ ಪದವಿ, ನಂತರ ಬೀದರ್‌ನ ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ ಪದವಿ ಪಡೆದರು. ಅವರು ಕನ್ನಡ ಶೀಘ್ರಲಿಪಿ, ಕಂಪ್ಯೂಟರ್ ತಾಂತ್ರಿಕ ವಿದ್ಯೆಗಳಲ್ಲಿ ಪರಿಣತಿ ಗಳಿಸಿದ್ದಾರೆ.

ವೃತ್ತಿ ಜೀವನ:

ಡಿಪ್ಲೋಮಾ ಮುಗಿಸಿದ ತಕ್ಷಣವೇ ವಿವಿಧ ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಆರಂಭಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಆಫೀಸ್, ಜಿಲ್ಲಾ ಪೊಲೀಸ್ ಕಚೇರಿಗಳಲ್ಲಿ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸಿದರು. ಅವರು ಪೊಲೀಸ್ ಇಲಾಖೆಯಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲ ವಿವಿಧ
ಕಾರ್ಯನಿರ್ವಹಿಸಿ, 31-7-2024 ರಂದು ಸ್ವಯಂ ನಿವೃತ್ತರಾಗಿದ್ದಾರೆ. ಇಲಾಖೆಯಲ್ಲಿ ಕರ್ತವ್ಯನಿರ್ವಹಿಸುವ ಹೊತ್ತಿಗೆ ಅಪರಿಮಿತವಾದ ಕಾಯಕ ಶ್ರದ್ಧೆ ಮತ್ತು ಪ್ರಾಮಾಣಿಕತೆಯ ಮಾದರಿ ವ್ಯಕ್ತಿತ್ವ ಹೊಂದಿದ್ದರು.

ಜನೋಪಕಾರಿ ಸೇವೆ:

ಅವರು ತಮ್ಮ ಕುಟುಂಬ ಮತ್ತು ಸಮಾಜದಲ್ಲಿನ ಹಲವು ಪ್ರತಿಭಾವಂತರನ್ನು ವಿದ್ಯಾವಂತರಾಗಿ ರೂಪಿಸಲು ಮಾರ್ಗದರ್ಶನ ನೀಡಿದ್ದಾರೆ. ಗ್ರಾಮಸ್ಥರು, ಸಂಬAಧಿಕರು, ಉದ್ಯೋಗದ ಹೊತ್ತಿನಲ್ಲಿ ಸಲಹೆ ಬೇಕಾದವರಿಗಾಗಿ ಸದಾ ಲಭ್ಯರಿದ್ದರು. ಅವರ ಮಾರ್ಗದರ್ಶನದಲ್ಲಿ ಅನೇಕರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಸರ್ಕಾರಿ ಸೇವೆ ಸಲ್ಲಿಸುವಾಗಿನ ಪರಿಪೂರ್ಣ ಸೇವಾ ಮನೋಭಾವನೆ, ಸಾಮಾಜಿಕ ಕಳಕಳಿ, ಬಡವರ, ಹಿಂದುಳಿದವರ್ಗದವರ ಕುರಿತಾದ ಅನುಕಂಪ, ಮಹಿಳೆಯರ ಬಗೆಗಿನ ಗೌರವ ಅವರ ವ್ಯಕ್ತಿತ್ವವನ್ನು ಹೆಚ್ಚಿಸಿದೆ.

ಕಠಿಣ ಸಂದರ್ಭಗಳು:

ಗ್ರಾಮೀಣ ಕೃಪಾಂಕ ಆಧಾರಿತ ಉದ್ಯೋಗ ಪಡೆದಾಗ ಸುಪ್ರಿಂ ಕೋರ್ಟ ಆದೇಶದಂತೆ ನೌಕರಿ ತ್ಯಜಿಸಬೇಕಾದ ಪ್ರಸಂಗ ಬಂದಾಗ ಹಾಗೂ ತನ್ನ ಕರ್ತವ್ಯಪಥದಲ್ಲಿ ನಡೆಯುವಾಗ ಕೆಲವರ ಸುಳ್ಳು ಆರೋಪಗಳಿಗೆ ಒಳಗಾಗಬೇಕಾಯಿತು. ಆದರೆ ನ್ಯಾಯಾಲಯವು ಅವರನ್ನು ನಿರ್ದೋಷಿ ಎಂಬುದನ್ನು ಸಾಬೀತುಪಡಿಸಿತು. ಇಂತಹ ಕಠಿಣ ಪ್ರಸಂಗಗಳಲ್ಲೂ ತಮ್ಮ ಆತ್ಮಬಲದಿಂದ ಹೋರಾಡಿ ಮುಂದಿನ ಹಾದಿಯಲ್ಲಿ ಸುಗಮವಾಗಿ ಸಾಗಿದರು.

ನಿರ್ಣಯ ಕ್ಷಣ:

31-7-2025ರ ನಿವೃತ್ತಿಯ ನಂತರ, ತಮ್ಮ ಬಾಲ್ಯದಲ್ಲೇ ಕುಡಿಯೊಡೆದಿದ್ದ ಮತ್ತು ನ್ಯಾಯಾಂಗ ಇಲಾಖೆಯ ಸೇವೆಯಲ್ಲಿರುವಾಗ ಮೂಡಿದ ಆಸೆಯಂತೆ ವಕೀಲ ವೃತ್ತಿಗೆ ಪಾದಾರ್ಪಣೆ ಮಾಡಿದ್ದಾರೆ. ತಮ್ಮ ವಕೀಲಿ ವೃತ್ತಿಯ ಜೊತೆಗೆ ಸಮಾಜಸೇವೆಯನ್ನು ಮುಂದುವರೆಸುವುದಾಗಿ ಪಣತೊಟ್ಟಿದ್ದಾರೆ.

ಒಟ್ಟಾರೆ, ಶ್ರೀ ಅಶೋಕ ಮಹಾಲಿಂಗರವರು ಶ್ರದ್ಧೆ, ಶಿಸ್ತಿನೊಂದಿಗೆ ಸರ್ಕಾರಿ ಸೇವೆ ಸಲ್ಲಿಸಿ ಇದೀಗ ವಕೀಲ ವೃತ್ತಿಗೆ ಕಾಲಿಟ್ಟಿದ್ದು ಅವರ ಬಹುಮುಖ ವ್ಯಕ್ತಿತ್ವದ ಪ್ರತೀಕ. ಸದಾ ಚಲನಶೀಲತೆಯನ್ನು ಮೈಗೂಡಿಸಿಕೊಂಡು ಪಾದರಸದಂತೆ ಓಡಾಡಿಕೊಂಡಿರುವ ಅವರ ಜೀವನ ಇತರರಿಗೆ ಪ್ರೇರಣಾದಾಯಕ.

ಶಿವಕುಮಾರ ಕಟ್ಟೆ, ಉಪನ್ಯಾಸಕರು,ಜಿಆರ್‌ಐಸಿಪಿ, ಬೆಂಗಳೂರು.

————————

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3