Friday, January 16, 2026
HomePopularಕಾರಂಜಾ ಮಹಿಳಾ ರೈತ ಉತ್ಪಾದಕರ ಕಂಪನಿಗೆ ಸಹಕಾರ ನೀಡಲಾಗುವುದು - ಶಾಸಕ ಡಾ.ಸಿದ್ಧಲಿಂಗಪ್ಪ ಎನ್.ಪಾಟೀಲ್

ಕಾರಂಜಾ ಮಹಿಳಾ ರೈತ ಉತ್ಪಾದಕರ ಕಂಪನಿಗೆ ಸಹಕಾರ ನೀಡಲಾಗುವುದು – ಶಾಸಕ ಡಾ.ಸಿದ್ಧಲಿಂಗಪ್ಪ ಎನ್.ಪಾಟೀಲ್

ಕಾರಂಜಾ ಮಹಿಳಾ ರೈತ ಉತ್ಪಾದಕರ ಕಂಪನಿಗೆ ಸಹಕಾರ ನೀಡಲಾಗುವುದು – ಶಾಸಕ ಡಾ.ಸಿದ್ಧಲಿಂಗಪ್ಪ ಎನ್.ಪಾಟೀಲ್
ಬೀದರ್ :- ಕಾರಂಜ ಮಹಿಳಾ ರೈತ ಉತ್ಪಾದಕರ ಕಂಪನಿ 10000 ಎಫ್‌ಪಿಓ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಕಂಪನಿ ಇನ್ನು ಯಶಸ್ವಿಯಾಗಲಿ ಎಂದು ಹಾರೈಸಿದರು ಹಾಗೂ ಏನೇ ಸಹಾಯ ಸರ್ಕಾರ ವತಿಯಿಂದ ಅಥವಾ ತಮ್ಮ ಕಡೆಯಿಂದ ಮಾಡಲಾಗುವುದೆಂದು ಹುಮನಾಬಾದ ಶಾಸಕ ಡಾ.ಸಿದ್ಧಲಿಂಗಪ್ಪ ಎನ್.ಪಾಟೀಲ್ ಹೇಳಿದರು.
ಅವರು ಶನಿವಾರದಂದು ಹುಮನಾಬಾದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಬೆಂಗಳೂರು, ಜಿಲ್ಲಾ ಪಂಚಾಯತ ಬೀದರ, ತಾಲ್ಲೂಕಾ ಪಂಚಾಯತ ಹುಮನಾಬಾ ಸಹಯೋಗದಲ್ಲಿ ಹುಮನಾಬಾದಲ್ಲಿ ಹಮ್ಮಿಕೊಂಡಿದ್ದ ಕಾರಂಜಾ ಮಹೀಳಾ ರೈತ ಉತ್ಪಾದಕರ ಕಂಪನಿ ಉದ್ಘಾಟಿಸಿ ಮಾತನಾಡಿದರು.
ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯು ಮಹಿಳೆಯರ ಸ್ವಸಹಾಯ ಸಂಘಗಳ ಮುಖಾಂತರ ಗ್ರಾಮೀಣ ಬಡತನ ನಿರ್ವಹಣಾ ಕಾರ್ಯಕ್ರಮವಾಗಿದ್ದು, ರಾಷ್ಟ್ರದ ಪ್ರತಿಯೊಂದೂ ರಾಜ್ಯದಲ್ಲಿ ತನ್ನದೇಯಾದ ಹೆಸರಿನಲ್ಲಿ ಈ ಯೋಜನೇಯನ್ನು ಅನುಷ್ಠಾನಗೊಳಿಸುತ್ತಿವೆ. ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನಲ್ಲಿ ದಿನಾಂಕ : 11-2-2024 ರಂದು ನೊಂದಣಿಯಾಗಿದ್ದು, ಇದರಲ್ಲಿ ಒಂದು ಸಾವಿರ ಷೇರುದಾರರು ಇದ್ದು ಪ್ರತಿ ಸದಸ್ಯರಿಗೆ 1500 ರು ಸದಸ್ಯತ್ವ ಶುಲ್ಕವನ್ನು ಹೊಂದಿದೆ. ಕರ್ನಾಟಕದಲ್ಲಿ ಸಂಜೀವಿನಿ ಕೆ.ಎಸ.ಆರ್ . ಎಲ್.ಪಿ.ಎಸ್ ಹೆಸರಿನಿಂದ ಅನುಷ್ಠಾನಗೊಂಡಿದ್ದು, ಈ ಯೋಜನೆಯೂ ಕೇಂದ್ರದಿAದ 60%. ರಷ್ಟು ಹಾಗೂ ರಾಜ್ಯದಿಂದ 40% ರಷ್ಟು ಅನುದಾನದಿಂದ ಕಾರ್ಯಕ್ರಮವನ್ನು ಅನುಷ್ಠಾನಗೊಳ್ಳುತ್ತಿದೆ. ಮಹಿಳೆಯರು ಕೈಗೊಳ್ಳವ ವಿವಿಧ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವದು ಹಾಗೂ ಕಿರು ಉದ್ಯಮಗಳಿಗೆ ಆರ್ಥಿಕ ಹಾಗೂ ಸಾಮರ್ಥ್ಯ ಬಲವರ್ಧನ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಗ್ರಾಮ ಪಂಚಾಯತ್ ಒಕ್ಕೂಟದ (ಜಿಪಿಎಲ್‌ಎಫ್) ಮುಖಾಂತರ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆಂದರು.

ಈ ಸಂದರ್ಭದಲ್ಲಿ ಕಾರಂಜ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯವರಾದ ಮಧುಮತಿ, ಅನಿಲ್, ಬೀ.ಒ.ಡಿ.ಗಳು, ಜಗನ್ನಾಥ ಮೂರ್ತಿ (ಯೋಜನಾ ನಿರ್ದೇಶಕರು ಡಿ ಆರ್, ಡಿ,ಎ ಜಿಲ್ಲಾ ಪಂಚಾಯತ್ ಬೀದರ್), ದೀಪಿಕಾ ನಾಯ್ಕರ (ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಹುಮನಾಬಾದ್), ತಬಸಮ್ ತಹಶೀಲ್ದಾರ (ಹುಮನಾಬಾದ್ ತಾಲೂಕ), ಹಾಗೂ ಎನ್‌ಆರ್‌ಎಲ್‌ಎಂ ಸಿಬ್ಬಂದಿಯವರು ಆಕಾಶ್ ಸ್ವಾಮಿ ಜಿಲ್ಲಾ ವ್ಯವಸ್ಥಾಪಕರು (ಕೃಷಿ), ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕರು ದಯಾನಂದ.ಎಸ್, ಎಂ.ಕೆ.ಪಿ.ಸಿ. ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿಗಳು, ಭುವನೇಶ್ವರಿ ಎಂ.ಕೆ.ಪಿ.ಸಿ. ಲೆಕ್ಕಪರಿಶೋಧಕರು ಪೂಜಾ ಬಿರಾದಾರ, ಎಂ.ಕೆ.ಪಿ.ಸಿ. ನಿರ್ದೇಶಕರು ಹಾಗೂ ಕಂಪನಿಯ ಸೇರುದಾರರು ಮತ್ತು ಗ್ರಾಮ ಪಂಚಾಯತ್ ಮಟ್ಟದ ಎನ್.ಆರ್.ಎಲ್.ಎಂ. ಸಿಬ್ಬಂದಿ ವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3