*ಸೆಲ್ಫಿ ಪ್ರಿಯರೇ ಎಚ್ಚರ!*
ಸೆಲ್ಫಿ ಹುಚ್ಚು! ಜೀವಕ್ಕೆ ಕುತ್ತು!
ಇಂದಿನ ದಿನಮಾನಗಳಲ್ಲಿ ಅದೇಷ್ಟೋ ಯುವಕ, ಯುವತಿಯರು, ಹಾಗೂ ಪ್ರವಾಸಿಗರು ಮಳೆಗಾಲದಲ್ಲಿ ಹಸಿರಿನ ಓಡಲು ಕಣ್ತುಂಬಿಸಿಕೊಳ್ಳಲು ದೇಶ ವಿದೇಶಗಳಿಗೆ ತಮ್ಮ ತಮ್ಮ ಕುಟುಂಬದ ಜೊತೆ ಹೆಚ್ಚಾಗಿ ಪ್ರವಾಸ ಮಾಡುವುದು ನೋಡುತ್ತೇವೆ, ನದಿ, ಸರೋವರ, ಆಣೆಕಟ್ಟು, ಜಲಾಶಯಗಳು ತುಂಬಿ ತುಳುಕುವುದು ಅದರ ಮಧ್ಯ ಜಲಾಶದಿಂದ ನೀರು ಹರಿಯುವ ದೃಶ್ಯ ನೋಡಲು ಜನ ಬರಿ ಸೆಲ್ಫಿಗಾಗಿ ತಾ ಮುಂದು ನಾ ಮುಂದು ಎಂದು ಮುಗಿ ಬೀಳುವುದು ಸರ್ವೇ ಸಾಮಾನ್ಯ ಅದರಲ್ಲಿ ಪ್ರಸಿದ್ಧ ಯಾತ್ರಾ ನದಿಗಳಲ್ಲಿ ಜಲಾಶಯಗಳ ದಂಡೆಯ ಮೇಲೆ ರಭಸದಿಂದ ತುಂಬಿ ಹರಿಯುತ್ತಿರುವ ಸಾಗರಗಳ ಕೊನೆ ಅಂಚಿನಲ್ಲಿ ನಿಂತುಕೊಂಡು ನೀರಿನ ವೇಗ ಲೆಕ್ಕಿಸದೆ ಸೆಲ್ಫಿ ತೆಗೆದುಕೊಳುವವರ ಸಂಖ್ಯಾವೇನು ಕಡಿಮೆಯಾಗಿಲ್ಲ ಅಂತಹ ಸಂದರ್ಭದಲ್ಲಿ ನೀರಿನ ಅಬ್ಬರದ ಅಲೆಗಳಿಗೆ ಸಿಲುಕಿ ಆದೇಷ್ಟೂ ಜನ ಅನಾಹುತಕ್ಕೆ ಬಲಿ ಆಗಿರುವ ಉದಾಹರಣೆಗಳು ನಾವು ನೀವು ಕೇಳಿದೇವೆ ನೋಡಿದ್ದೇವೆ ಆದರೂ ಜನತೆಯು ಸೆಲ್ಫಿ ಹುಚ್ಚು ಇನ್ನೂ ಬಿಟ್ಟಿಲ್ಲ.
ಕರ್ನಾಟಕದ ಕೆಲವೊಂದು ಜಿಲ್ಲೆಗಳು ಪ್ರಸಿದ್ಧ ಪ್ರವಾಸಿ ತಾಣಗಳಾಗಿ ಗುರುತಿಸಿಕೊಂಡಿವೆ ಅದರಲ್ಲಿ ವಿಶ್ವ ವಿಖ್ಯಾತಿ ಜೋಗ ಜಲಪಾತ, ಆಗುಂಬೆ, ಸೇರಿದಂತೆ ಹತ್ತು ಹಲವಾರು ಪ್ರವಾಸಿ ತಾಣಗಳಲ್ಲಿರುವ ನದಿ ಸರೋವರಗಳಲ್ಲಿ ಸೆಲ್ಫಿ ಫೋಟೊಗಾಗಿ ಅಪಾಯಕಾರಿ ಪ್ರದೇಶಗಳನ್ನು ಗುರುತಿಸಿ ಸರ್ಕಾರ ಅಲ್ಲಿ ಸೆಲ್ಫಿಗೆ ಅವಕಾಶ ನೀಡದೇ ಮುಂಜಾಗ್ರತಾ ಕ್ರಮವಾಗಿ ತಂತಿ ಬೇಲಿ ಹಾಕಿ ಪ್ರವಾಸಿಗರ ರಕ್ಷಣೆಗೆ ಮುಂದಾಗಬೇಕು, ಎನ್ನುವುದೇ ಎಲ್ಲರ ಆಶೆ…
ಹರಿಯುತ್ತಿರುವ ನದಿಯಲ್ಲಿ ಸೆಲ್ಫಿ ಫೋಟೊ ತೆಗೆದುಕೊಳ್ಳುವ ವ್ಯಾಮೋಹದಲ್ಲಿ ಪ್ರವಾಸಿಗರು ತನ್ನ ಪ್ರಾಣ ಬಿಟ್ಟ ಆದೇಷ್ಟೂ ಘಟನೆಗಳು ಬೆಳಗಾದರೆ ಸಾಕು, ಸುದ್ದಿ ಮಾಧ್ಯಮದಲ್ಲಿ ಅವುಗಳದ್ದೇ ಸದ್ದು ಒಂದು ಸರಿ ಹಿಂದೆ ಮುಂದೆ ನೋಡದೇ ನದಿಯ ದಂಡೆಯ ತೀರದಲ್ಲಿ, ಬಂಡೆಯ ಮೇಲೆ ನಿಂತುಕೊಂಡು ಸೆಲ್ಫಿಯ ಹುಚ್ಚಾಟದಲ್ಲಿ ಮಗ್ನರಾಗುತ್ತಾರೆ ಫೋಟೋ ಕ್ಲಿಕ್ಕಿಸುವಾಗ ಸ್ವಲ್ಪ ಯಾಮಾರಿದರೆ ಅಪಾಯ ಕಟ್ಟಿಟ್ಟ ಬುತ್ತಿ ನದಿ ದಂಡೆಯಲ್ಲಿ ನೀರಿನ ಅಲೆಗೆ ಸಿಲುಕಿ ಹಲವು ಪ್ರವಾಸಿಗರು ಸಾವು ನೋವಿಗೆ ತುತ್ತಾಗುತ್ತಿರುವುದು ವಿಷಾದನೀಯ ಸಂಗತಿ…
ರಾಷ್ಟ್ರ ರಾಜ್ಯ ಮಟ್ಟದಲ್ಲಿರುವ ಪ್ರವಾಸಿ ತಾಣಗಳಲ್ಲಿ ಈಗಾಗಲೇ ಇಂತಹ ಅನೇಕ ಘಟನೆಗಳನ್ನು ಆಗಿ ಹೋಗಿರುವುದನ್ನು ಪರಿಗಣಿಸಿ ಕೇಂದ್ರ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆಗಳು ಅಪಾಯಕಾರಿ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸೆಲ್ಫಿ ಫೋಟೊ ತೆಗೆಯುವುದರ ಮೇಲೆ ನಿರ್ಬಂಧ ಹೇರಲು ಗಂಭೀರ ಚಿಂತನೆ ನಡೆಸಿದೆ,
ಏನೇ ಇರಲಿ ಮಳೆಗಾಲದಲ್ಲಿ ಪ್ರವಾಸಿಗರು ನದಿ, ಸರೋವರ, ಜಲಾಶಯಗಳಿಗೆ ಭೇಟಿ ನೀಡಿದಾಗ ಅನಾವಶ್ಯಕವಾಗಿ ಹರಿಯುವ ನೀರಿನ ತೀರದ ಮಧ್ಯ ಮತ್ತೆ ಬಂಡೆಗಳ ಮೇಲೆ ನಿಲ್ಲುವುದು ಇವೆಲ್ಲವೂ ಯಾವುದೇ ಕಾರಣಕ್ಕೂ ಮಾಡದೆ ಇರುವುದು ಉತ್ತಮ, ಇಂದಿನ ಆಧುನಿಕ ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸದಲ್ಲಿಯೇ ತುಂಬಾ ಬ್ಯುಸಿ ಆಗಿರುತ್ತಾರೆ, ಅದರ ಮಧ್ಯವೂ ತನ್ನ ಕುಟುಂಬದ ಜೊತೆ ನಿಸರ್ಗದ ಮಡಿಲಲ್ಲಿ ಸುತ್ತಾಡಿ ತಮ್ಮ ಪರಿವಾರದ ಜೊತೆ ಖುಷಿ ಹಂಚಿಕೊಳ್ಳಲು ಸಿದ್ದರಾಗಿರುತ್ತಾರೆ, ಆದರೆ ಪ್ರವಾಸಕ್ಕೆ ಸಂತೋಷದಿಂದ ಹೊರಟ ಕುಟುಂಬವು ಮನೆಗೆ ಬರುವ ಸಮಯಕ್ಕೆ ಕೇವಲ ಹುಚ್ಚು ಸೆಲ್ಫಿಗಾಗಿ ಜೀವಕ್ಕೆ ಕುತ್ತು ಬಂದರೆ ಪ್ರವಾಸಿಗರ ಪ್ರಯಾಣ ಯಾವ ಖುಷಿಗಾಗಿ ಅನಿಸುತ್ತಲ್ಲವೇ????….
ಪ್ರಿಯ ಪ್ರವಾಸಿಗರೇ…. ಪ್ರಯಾಣ ಮಾಡುವಾಗ ನದಿಯ ತೀರದಲ್ಲಿ ಈಜಾಡುವಾಗ, ಸ್ನಾನ ಮಾಡುವಾಗ, ಅದರಲ್ಲಿ ಹೆಚ್ಚಿನ ಹುಚ್ಚು ಸೆಲ್ಫಿಗಾಗಿ ತನ್ನ ಪ್ರಾಣಕ್ಕೆ ಹಾನಿಯಾಗದಂತೆ ಪ್ರವಾಸದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಪ್ರಯಾಣಿಸಿದರೇ ಲೇಸು……
ಚಂದ್ರಕಾಂತ ಹಳ್ಳಿಖೇಡಕರ್