ನಗರದ ರಂಗಮಂದಿರದಲ್ಲಿ ಜರುಗಿದ ೩೦೦ನೇ ಅಹಿಲ್ಯಾದೇವಿ ಹೋಳ್ಕರ್ ಜಯಂತಿ
ಸನಾತನ ಧರ್ಮಕ್ಕೆ ಅಹಿಲ್ಯಾದೇವಿ ಕೊಡುಗೆ ಅಪಾರ: ಭೂಷಣಸಿಂಹ ರಾಜೆ ಹೋಳ್ಕರ್
ಸನಾತನ ಧರ್ಮಕ್ಕೆ ಅಹಿಲ್ಯಾದೇವಿ ಕೊಡುಗೆ ಅಪಾರ: ಭೂಷಣಸಿಂಹ ರಾಜೆ ಹೋಳ್ಕರ್
ಬೀದರ್ : ಸನಾತನ ಧರ್ಮದ ಏಳ್ಗೆಗೆ ಮಾತೋಶ್ರೀ ಪುಣ್ಯಶ್ಲೋಕ ಅಹಿಲ್ಯಾದೇವಿ ಹೊಳ್ಕರ್ ಕೊಡುಗೆ ಅಪಾರವಾಗಿದೆ ಎಂದು ಅಹಿಲ್ಯಾಬಾಯಿ ಹೊಳ್ಕರ್ ಅವರ ೧೩ನೇ ವಂಶಸ್ಥರಾದ ಕೋಲಾಪುರದ ಶ್ರೀಮಂತ ಭೂಷಣಸಿಂಹ ರಾಜೆ ಹೊಳ್ಕರ್ ತಿಳಿಸಿದರು.
ನಗರದ ಚನ್ನಬಸವ ಪಟ್ಟದ್ದೇವರು ರಂಗಮAದಿರದಲ್ಲಿ ರಾಜಮಾತಾ ಅಹಿಲ್ಯಾದೇವಿ ಹೊಳ್ಕರ್ ಜಯಂತಿ ಸಮಿತಿ ಹಾಗೂ ಹಟಕಾರ, ಧನಗಾರ ಮತ್ತು ಗೊಂಡ ಸಮಾಜದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಪುಣ್ಯಶ್ಲೋಕ ಅಹಿಲ್ಯಾದೇವಿ ಹೊಳ್ಕರ್ ಅವರ ೩೦೦ನೇ ಜಯಂತಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮೊಘಲರ ಆಳ್ವಿಕೆ ಸಂದರ್ಭದಲ್ಲಿ ದೇವಸ್ಥಾನಗಳನ್ನು ಕೆಡವುತ್ತಿದ್ದರು. ಅಂತಹ ಸಂದರ್ಭದಲ್ಲಿ ಕಾಶಿ ವಿಶ್ವನಾಥ ದೇವಾಲಯದಿಂದ ಹಿಡಿದು ದೇಶದಾದ್ಯಂತ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಂಡು ರಾಷ್ಟçಕಟ್ಟುವ ಕಾರ್ಯ ಅಹಿಲ್ಯಾದೇವಿ ಮಾಡಿದ್ದಾರೆ. ಒಂದು ಕಾಲದಲ್ಲಿ ಧರ್ಮಾಂಧ ಟಿಪ್ಪು ಸುಲ್ತಾನ್ ಮತಾಂತರ ಮಾಡುವ ಸಂದರ್ಭದಲ್ಲಿ ಹೊಳ್ಕರ್ ಪರಿವಾರದ ತುಕಾಜಿರಾವ ಹೋಳ್ಕರ್ ಹೋರಾಟ ಮಾಡಿದ್ದಾರೆ.

ಛತ್ರಪತಿ ಶಿವಾಜಿ ಮರಣದ ನಂತರ ಸನಾತನ ಸಂಸ್ಕೃತಿಗಾಗಿ ಮಾಡುವ ಹೋರಾಟ ಮೊಟಕುಗೊಂಡಿತ್ತು. ಆ ಹೋರಾಟದ ಪರಂಪರೆ ಕೈಯಲ್ಲಿ ಖಡ್ಗ ಹಿಡಿದು ವೀರತನದಿಂದ ಮುಂದುವರೆಸಿದ ಕೀರ್ತಿ ಅಹಿಲ್ಯಾದೇವಿ ಅವರಿಗೆ ಸಲ್ಲುತ್ತದೆ ಎಂದು ಪ್ರತಿಪಾದಿಸಿದರು. ಧನಗಾರ, ಹಟಕಾರ ಮತ್ತು ಗೊಂಡ ಪರಿವಾರ ಒಂದೆ. ಯಾವುದೇ ಭೇದಭಾವ ಮಾಡದೆ ಪರಸ್ಪರ ಸಂಬಂಧ ಬೆಳೆಸಿಕೊಳ್ಳಿರಿ. ಐಕ್ಯತೆಯಿಂದ ಸಂಘಟನಾತ್ಮಕ ಹೋರಾಟ ಮಾಡಿದಾಗ ಮಾತ್ರ ರಾಷ್ಟç ಮತ್ತು ಧರ್ಮ ಉಳಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ ರಾಜ್ಯ ಮತ್ತು ರಾಷ್ಟçದ ಶಾಲಾ-ಕಾಲೇಜುಗಳ ಪಠ್ಯಪುಸ್ತಕದಲ್ಲಿ ರಾಜಮಾತೆ ಅಹಿಲ್ಯಾದೇವಿ ಹೊಳ್ಕರ್ ಅವರ ಜೀವನ ಚರಿತ್ರೆ ಅಳವಡಿಸಿ, ತಾಯಿಯ ಹೋರಾಟದ ಜೀವನ ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಪಠ್ಯಪುಸ್ತಕದಲ್ಲಿ ಔರಂಗಜೇಬ, ಟಿಪ್ಪುಸುಲ್ತಾನ, ಅಲೆಕ್ಸಾಂಡರನ ಜೀವನ ಚರಿತ್ರೆ ಇದೆ. ಆದರೆ ದೇಶಕ್ಕಾಗಿ ಧರ್ಮಕ್ಕಾಗಿ ಹೋರಾಡಿದ ಅಹಿಲ್ಯಾದೇವಿ ಚರಿತ್ರೆ ಅಳವಡಿಸಿಲ್ಲ. ಇದೆಂಥಾ ಅನ್ಯಾಯ? ಎಂದು ಪ್ರಶ್ನಿಸಿದರಲ್ಲದೆ ಧನಗಾರ ಮತ್ತು ಹಟಕಾರ ಎರಡೂ ಒಂದೇ ಎನ್ನುವ ಎನ್. ಶಂಕ್ರೆಪ್ಪ ವರದಿ ಜಾರಿಗಾಗಿ ನಾವೆಲ್ಲರೂ ಸೇರಿ ಸರ್ಕಾರದ ಮೇಲೆ ಒತ್ತಡ ಹೇರೋಣ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಮನವರಿಕೆ ಮಾಡೋಣ ಎಂದು ತಿಳಿಸಿದರು. ಸಿದ್ಧರಾಮಯ್ಯ ಜಾತಿ ಜನಗಣತಿ ವರದಿ ಕೂಡಲೇ ಬಹಿರಂಗ ಮಾಡಬೇಕು. ದೆಹಲಿಗೆ ಹೋಗಿ ಬಂದ ಮೇಲೆ ಬಹಿರಂಗ ಪಡಿಸಲು ಮೀನಮೇಷ ಎಣಿಸುತ್ತಿರುವ ಸಿಎಂ ಸಿದ್ಧರಾಮಯ್ಯ ಜಾರಿ ಮಾಡುತ್ತೇನೆಂದು ಹೇಳಿ ಮಾಡಲಿಲ್ಲ ಎನ್ನುವ ಮೋಸ ಮಾಡಿದ ಮುಖ್ಯಮಂತ್ರಿ ಎನ್ನುವ ಹಣೆಪಟ್ಟಿ ಕಟ್ಟಿಕೊಳ್ಳಬೇಡಿ. “ಜಾರಿ ಮಾಡುವೆ ಇಲ್ಲ ರಾಜೀನಾಮೆ ನೀಡುವೆ” ಎಂದು ಈಗಲೇ ಶಪಥ ಮಾಡಿ ಒತ್ತಾಯಿಸಿದರು.
ಮಾಜಿ ಮಂತ್ರಿ ಹಾಗೂ ಹಾಲಿ ಶಾಸಕ ಪ್ರಭು ಚವ್ಹಾಣ ಮಾತನಾಡಿ ರಾಜಮಾತೆ ಅಹಿಲ್ಯಾದೇವಿ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ನನ್ನ ಕ್ಷೇತ್ರ ಔರಾದನಲ್ಲಿ ಅಹಿಲ್ಯಾದೇವಿ ಹೊಳ್ಕರ್ ಸಮುದಾಯ ಭವನಕ್ಕಾಗಿ ಒಂದು ಎಕರೆ ಸ್ಥಳ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ೨ ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣವಾಗಲಿದೆ. ಜೊತೆಗೆ ಮುಂದಿನ ವರ್ಷ ಔರಾದನಲ್ಲಿ ಹಟಕಾರ ಮತ್ತು ಧನಗಾರ ಗೊಂಡ ಸಮಾಜದ ಜನರನ್ನು ಸೇರಿಸಿ ಬೃಹತ್ ಅದ್ಧೂರಿ ಜಯಂತಿ ಆಚರಿಸೋಣ ಎಂದರು. ಸಮಾಜದ ಬಂಧುಗಳು ಶಿಕ್ಷಣ ಪಡೆದು ಜಾಗೃತರಾಗಬೇಕು. ಈಗಾಗಲೇ ಜಾಗೃತರಾಗಲು ತುಂಬಾ ವಿಳಂಬವಾಗಿದೆ. ಇನ್ನು ಮುಂದಿಟ್ಟ ಹೆಜ್ಜೆ ಹಿಂದಿಡಬೇಡಿ. ಸರ್ಕಾರಿ ಯೋಜನೆಗಳನ್ನು ಪಡೆದುಕೊಳ್ಳಲು ಪ್ರಯತ್ನ ಮಾಡಿ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉತ್ಸವ ಸಮಿತಿ ಗೌರವಾಧ್ಯಕ್ಷ ಪಂಡಿತ್ ಚಿದ್ರಿ “ಜಾತಿ ಜನಗಣತಿ ಸಂದರ್ಭದಲ್ಲಿ ಕಂಪ್ಯೂಟರ್‌ನಲ್ಲಿ ಅನ್ಯ ಸಮುದಾಯದ ‘ಹಟ್ಟಗಾರ’ ಎಂದು ಬರುತ್ತಿದೆ. ಇದರಿಂದ ನಮ್ಮ ಹಟಕಾರ ಸಮಾಜದವರಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ದಯವಿಟ್ಟು ಇದನ್ನು ಸರಿಪಡಿಸಬೇಕು. ಶಾಸಕ ಪ್ರಭು ಚವ್ಹಾಣ ಅವರು ಔರಾದನಲ್ಲಿ ಅಹಿಲ್ಯಾದೇವಿ ಹೊಳ್ಕರ್ ಸಮುದಾಯ ಭವನಕ್ಕೆ ಒಂದು ಎಕರೆ ನೀಡಿದಂತೆ ಧನಗಾರ ಭವನಕ್ಕೂ ಒಂದು ಎಕರೆ ನೀಡಬೇಕೆಂದು ತಿಳಿಸಿದರು. ಜೊತೆಗೆ ಅಹಿಲ್ಯಾದೇವಿ ಜೀವನ ಚರಿತ್ರೆ ಪುಠ್ಯಪುಸ್ತಕದಲ್ಲಿ ಅಳವಡಿಸಲು ಸರ್ಕಾರಕ್ಕೆ ಒತ್ತಾಯಿಸಿದರು.
ಸೋಲಾಪುರದ ಸುಜಾತಾ ಸಾಗರ ರಾಜೆ ಪಾಂಡ್ರೆ ವಿಶೇಷ ಉಪನ್ಯಾಸ ನೀಡಿದರು. ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ, ಮುಂಬೈನ ಇತಿಹಾಸ ಅಧ್ಯಾಪಕರಾದ ಸುಮಿತರಾವ ಲೋಖಂಡೆ ಮಾತನಾಡಿದರು.
ಅಹಿಲ್ಯಾಬಾಯಿ ಹೊಳ್ಕರ್ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಈಶ್ವರಸಿಂಗ್ ಠಾಕೂರ್ ಮಾತನಾಡಿದರು. ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಶಿವಯೋಗಿ ಮಚೇಂದ್ರನಾಥ ಮಹಾರಾಜರು ಔದತಪುರ ಅವರು ಆಶಿರ್ವಚನ ನೀಡಿದರು.

ವೇದಿಕೆ ಮೇಲೆ ಪ್ರಮುಖರಾದ ಧೋಂಡಿಬಾ ನರೋಟೆ, ಗೀತಾ ಪಂಡಿತ್ ಚಿದ್ರಿ, ಬಾಲಾಜಿ ನಾಯಕ, ಎಂ.ಎಸ್.ಕಟಗಿ, ಕೊಂಡಿಬಾ ಪಾಂಡ್ರೆ, ಬಾಬು ಮಲ್ಕಾಪುರ, ಅಂಗದರಾವ ಸಿಂಗಾಡೆ, ಮಹೇಶ್ವರ ಸ್ವಾಮಿ, ವೆಂಕಟರಾವ ಮದಕಟ್ಟಿ, ಲೊಕೇಶ ಮರ್ಜಾಪುರ, ರಾಮ ನರೋಟೆ, ಸಂತೋಷ ಜೋಳದಾಪಕೆ ಸೇರಿದಂತೆ ೪೦ ವಿವಿಧ ಸಮಾಜ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು.
ಜಯಂತಿ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಾಳಪ್ಪ ಅಡಸಾರೆ ಸ್ವಾಗತಿಸಿದರು. ವಿಜಯಕುಮಾರ ಡುಮ್ಮೆ ನಿರೂಪಿಸಿದರೆ, ವೆಂಕಟರಾವ ಡೊಂಬಾಳೆ ವಂದಿಸಿದರು.

ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಬೊಮ್ಮಗೊಂಡೇಶ್ವರ ವೃತ್ತದಿಂದ ಮಾತೋಶ್ರೀ ಪುಣ್ಯಶ್ಲೋಕ ಅಹಿಲ್ಯಾದೇವಿ ಹೊಳ್ಕರ್ ಅವರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಡೊಳ್ಳು ಕುಣಿತ, ಹಲಗೆ ವಾದನದ ಜೊತೆಗೆ ಯುವಕರು ಹೆಜ್ಜೆ ಹಾಕಿದರು. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶ್ರೀಮಂತ ಭೂಷಣಸಿಂಹ ರಾಜೆ ಹೊಳ್ಕರ್, ಈಶ್ವರಸಿಂಗ್ ಠಾಕೂರ್, ಪಂಡಿತ್ ಚಿದ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮೆರವಣಿಗೆಯು ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಭಗತಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮುಖಾಂತರ ರಂಗಮAದಿರ ತಲುಪಿತು.