Friday, January 16, 2026
HomePopularಏಕಂಬಾ ಅಖಂಡ ಹರಿನಾಮ ಸಪ್ತಾಹದಲ್ಲಿ ಶಾಸಕ ಪ್ರಭು ಚವ್ಹಾಣ ಭಾಗಿ

ಏಕಂಬಾ ಅಖಂಡ ಹರಿನಾಮ ಸಪ್ತಾಹದಲ್ಲಿ ಶಾಸಕ ಪ್ರಭು ಚವ್ಹಾಣ ಭಾಗಿ

ಏಕಂಬಾ ಅಖಂಡ ಹರಿನಾಮ ಸಪ್ತಾಹದಲ್ಲಿ ಶಾಸಕ ಪ್ರಭು ಚವ್ಹಾಣ ಭಾಗಿ

ಬೀದರ್ : ಔರಾದ(ಬಿ) ತಾಲ್ಲೂಕಿನ ಏಕಂಬಾ ಗ್ರಾಮದ ವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಅಖಂಡ ಹರಿನಾಮ ಸಪ್ತಾಹದಲ್ಲಿ ಜೂ.15ರಂದು ಭಾಗಹಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಅತ್ಯಂತ ವಿಶಿಷ್ಟವಾಗಿದೆ. ಇವುಗಳನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಅಖಂಡ ಹರಿನಾಮ ಸಪ್ತಾಹಗಳು ಸಹಕಾರಿಯಾಗಿವೆ. ಗ್ರಾಮಸ್ಥರು ಮುತುವರ್ಜಿ ವಹಿಸಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.
ಸಪ್ತಾಹದಲ್ಲಿ ಅನೇಕ ಪೂಜ್ಯರು, ಕೀರ್ತನಕಾರರು ಆಗಮಿಸಿ ಜ್ಞಾನ ಪ್ರಸಾರ ಮಾಡಿದ್ದಾರೆ. ಅವರೆಲ್ಲರ ಸಂದೇಶಗಳನ್ನು, ತತ್ವಗಳನ್ನು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉತ್ತಮ ಗುಣ ನಡತೆಗಳನ್ನು ಕಲಿತು ಸುಂದರ ಬದುಕು ರೂಪಿಸಬೇಕೆಂಬುದೇ ಎಲ್ಲ ಧರ್ಮ ಗುರುಗಳ ಸಂದೇಶವಾಗಿರುತ್ತದೆ. ಅದರಂತೆ ಕೆಟ್ಟದನ್ನು ಮಾಡದೇ ಎಲ್ಲರೂ ಸಕಾರಾತ್ಮಕ ಗುಣಗಳನ್ನು ಬೆಳೆಸಿಕೊಳ್ಳಬೇಕು. ಪರೋಪಕಾರಿಯಾಗಿ ಜೀವಿಸಬೇಕು ಎಂದರು.
ಏಕಂಬಾ ನನ್ನ ಗ್ರಾಮವಾಗಿದ್ದು, ಈ ಗ್ರಾಮದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದೇನೆ. ಹಿಂದಿನಿAದಲೂ ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದ್ದೇನೆ. ಸುಂದರ ಸಮುದಾಯ ಭವನ ಕಟ್ಟಿಸಿಕೊಟ್ಟಿದ್ದರಿಂದ ಗ್ರಾಮಸ್ಥರು ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗಿದೆ. ನಾನು ಸದಾ ಎಕಂಬಾ ಅಭಿವೃದ್ಧಿಯ ಪರವಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ಬೇಡಿಕೆಗಳನ್ನು ಈಡೇರಿಸುವೆ ಎಂದು ಹೇಳಿದರು.

ಪೂಜ್ಯ ಕರಣ ಗಜೇಂದ್ರ ಭಾರತಿ ಮಹಾರಾಜರು, ಪೂಜ್ಯ ಅವಧೂತ ಆನಂದ ಮಹಾರಾಜರ ನೇತೃತ್ವದಲ್ಲಿ ಪೂಜಾ, ಕೀರ್ತನೆ ಕಾರ್ಯಕ್ರಮಗಳು ನಡೆದವು. ಒಂದು ವಾರಗಳ ಹಿಂದೆ ಆರಂಭವಾಗಿರುವ ಸಪ್ತಾಹ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕೊನೆಯ ದಿನದಂದು ರಾಜ್ಯವಲ್ಲದೇ ಪಕ್ಕದ ತೆಲಂಗಾಣಾ, ಆಂಧ್ರ, ಮಹಾರಾಷ್ಟçಗಳಿಂದ ಸಾಕಷ್ಟು ಭಕ್ತಾದಿಗಳು ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾದರು. ಈ ಸಂದರ್ಭದಲ್ಲಿ ಮುಖಂಡರಾದ ರಮೇಶ ಉಪಾಸೆ, ಹರಿ ಕೊಂಡಾಪೂರೆ, ಯೋಗೇಶ ಸುರನಾರ, ರಾಮರಾವ ಪಾಟೀಲ ಸೇರಿದಂತೆ ಇತರರಿದ್ದರು.

—————
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3