ಹುಟ್ಟು ಹಬ್ಬ ನಿಮಿತ್ಯ ರಕ್ತದಾನ, ಗೋ ಪೂಜೆ, ಸಸಿ ವಿತರಣೆ ಹಾಗೂ ವೃದ್ದಾಶ್ರಮದಲ್ಲಿ ಬಟ್ಟೆ ವಿತರಣೆ
ರಕ್ತದಾನ ಸರ್ವ ಶೃಷ್ಠದಾನ – ಸೋಮಶೇಖರ ಪಾಟೀಲ್
ಬೀದರ್ : ಸೋಮಶೇಖರ ಪಾಟೀಲ್ ಗಾದಗಿ ಅವರ 60 ನೇ ಹುಟ್ಟು ಹಬ್ಬ ನಿಮಿತ್ಯ ಇಂದು ಗೋ ಶಾಲೆಯಲ್ಲಿ ಗೊ ಪೂಜೆ ಸಲ್ಲಿಸಲಾಯಿತು, ಸುಮಾರು 100 ಕ್ಕೂ ಹೆಚ್ಚು ಅವರ ಅಭಿಮಾನಿಗಳಿಂದ ಜಿಲ್ಲಾ ಆಸ್ಪತ್ರೆಯ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಲಾಯಿತು.
ರಕ್ತದಾನ ಮಾಡಿದ ಅವರ ಅಭಿಮಾನಿಗಳಿಗೆ ಶಾಲು, ಸಸಿ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಇದಕ್ಕೂ ಮುಂಚೆ ಅವರು ವೃದ್ದಾಶ್ರಮದಲ್ಲಿ ಬಟ್ಟೆ ವಿತರಣೆ ಹಾಗೂ ಕಾಣಿಕೆ ನೀಡಿ ಅವರನ್ನು ಗೌರವಿಸಲಾಯಿತು. ಹಾಗೇಯೆ ಅಂಗವಿಕಲ ಚೇತನ ವಿಷೇಶ ಮಕ್ಕಳಿಗೂ ಬಟ್ಟೆ ಹಾಗೂ ಕಾಣಿಕೆ ನೀಡಿ ಸಿಹಿ ಹಂಚಿ ಅವರ ಅಭಿಮಾನಿಗಳು ಸೋಮಶೇಖರ ಪಾಟೀಲ್ ಅವರ 60ನೇ ಹುಟ್ಟು ಹಬ್ಬ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಸೋಮಶೇಖರ ಪಾಟೀಲ್ ಅವರು ಮಾತನಾಡಿ ರಕ್ತದಾನ ಸರ್ವ ಶ್ರೇಷ್ಟದಾನವಾಗಿದೆ ಇದರಿಂದ ಅನೇಕರಿಗೆ ಜೀವದಾನ ಮಾಡಿದಂತಾಗಿದೆ, ರಕ್ತದಾನದ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ ಮತ್ತು ಇತರರ ಜೀವಗಳನ್ನು ರಕ್ಷಿಸಲು ತಮ್ಮ ರಕ್ತವನ್ನು ನೀಡುವ ಎಲ್ಲಾ ನಿಸ್ವಾರ್ಥ ಅಭಿಮಾನಿಗಳು ಅವರ ಸ್ವ ಇಚ್ಛೆಯಿಂದ ರಕ್ತದಾನ ಮಾಡಿ ಅನೇಕ ಬಡ ಜನರ ಜೀವ ಉಳಿಸಿದ್ದಾರೆ ಅದಕ್ಕಾಗಿ ಅವರ ಶ್ರೇಷ್ಠ ಸೇವೆಗೆ ಎಷ್ಟು ರುಣ ತಿರಿಸಿದ್ದರು ಸಾಲದು ಎಂದರು.
ಈ ಸಂದರ್ಭದಲ್ಲಿ ಕಪೀಲ್ ಹೂಗಾರ, ಡಾ. ವಿರೇಂದ್ರ ಪಾಟೀಲ್, ಪ್ರೇಮಕುಮಾರ, ಡಾ. ಮನೋಜಕುಮಾರ, ರಾಹೂಲ ಕುಲಕರ್ಣಿ, ವಿಕ್ರಮ ಮುದ್ದಾ, ಸಂಜು ಕುಮಾರ ಹೂಗಾರ, ದತ್ತು ದಾಚೆಪಳ್ಳಿ, ಅಮರ ಗಾದಗಿ, ಲೋಕೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.