ವಿಶ್ವ ತಂಬಾಕು ದಿನ-2025 ಜಾಗೃತ ರ‍್ಯಾಲಿ
ಬೀದರ್ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿಂದು ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಜಾಗೃತಿ ಜಾಥಾಕ್ಕೆ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅರ್ಜುನ ಬನಸೋಡೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಷಣ್ಮುಖಯ್ಯಾ ಬಿ.ಸ್ವಾಮಿ, ಶಿವರಾಜ ಬಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಜ್ಞಾನೇಶ್ವರ ನಿರುಗಡೆ ಅವರು ರಿಬ್ಬನ್ ಕತ್ತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

ಈ ಜಾಥಾದಲ್ಲಿ ಜಿಲ್ಲೆಯ ಎಲ್ಲಾ ಕಾರ್ಯಕ್ರಮ ಅಧಿಕಾರಿಗಳು, ಎಸ್,ಬಿ.ಪಾಟೀಲ್ ದಂತ ಮಹಾವಿದ್ಯಾಲಯದ ಪ್ರಾಶುಂಪಾಲರು ಹಾಗೂ ವಿಧ್ಯಾರ್ಥಿಗಳು, ಜಿಲ್ಲಾ ನರ್ಸಿಗ್ ಕಾಲೇಜು ವಿಧ್ಯಾರ್ಥಿ-ವಿಧ್ಯಾರ್ಥಿನಿಯರು, ವಸಂತ ನರ್ಸಿಗ್ ಕಾಲೇಜುಗಳ ವಿದ್ಯಾರ್ಥಿ-ವಿಧ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗದವರು ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.
ಜಾಥಾವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಿಂದ ಬೀದರ ನಗರದ ಜನವಾಡ್ ವಾಟರ್ ಟ್ಯಾಂಕ್, ಅಂಬೇಡ್ಕರ್ ಸರ್ಕಲ್, ಮುಖಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಾಲಯದ ವರೆಗೆ ಸಂಚರಿಸಿತು. ಜಾಥಾದಲ್ಲಿ ವಿದ್ಯಾರ್ಥಿಗಳು “ಆಕರ್ಷಕ ಉತ್ಪನಗಳು ಕರಾಳ ಉದ್ದೇಶಗಳು” ಎಂಬ ಜಾಗೃತಿ ಘೋಷಣೆಗಳನ್ನು ಕೂಗುತ್ತಾ, ನಾಮಪಲಕ, ಬ್ಯಾನರ್, ಕರಪತ್ರ, ಹಾಗೂ ಸಿಗರೇಟ್‌ನ ಶವ ಯಾತ್ರೆಯನ್ನು ತೋರಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸು ಮೂಖಾಂತರ ಜಾಗೃತಿ ಜಾಥಾವನ್ನು ಅಂತ್ಯಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಶಂಕರೇಪ್ಪಾ ಬೊಮ್ಮಾ ಮತ್ತು ಜಿಲ್ಲೆಯ ಎಲ್ಲಾ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಶಿವಶಂಕರ ಬಿ ಡಾ. ಕಿರಣ ಪಾಟೀಲ್, ಡಾ.ಅನೀ¯ ಚಿಂತಾಮಣಿ, ಡಾ. ದೀಲಿಪ್ ಡೋಂಗ್ರೆ, ಉಪಸ್ಥಿತರಿದ್ದರು.
ಸಂಗಪ್ಪಾ ಕಾಂಬಳೆ ಕಾರ್ಯಕ್ರಮದ ನಿರೂಪಣೆ ನೀಡಿದರು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಪ್ರಕಾಶ ವಗ್ಗೆ ಹಾಗೂ ಮಹೇಶ ಬ¨ಛಡೆ, ಹಾಗು ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
