Friday, January 16, 2026
HomePopularಕೊರೋನಾ ಬಗ್ಗೆ ಭಯಬೇಡ ಜಾಗೃತಿ ಅಗತ್ಯ- ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಕೊರೋನಾ ಬಗ್ಗೆ ಭಯಬೇಡ ಜಾಗೃತಿ ಅಗತ್ಯ- ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಕೊರೋನಾ ಬಗ್ಗೆ ಭಯಭೇಡ ಜಾಗೃತಿ ಅಗತ್ಯ – ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ್ :  ಜಿಲ್ಲೆಯಲ್ಲಿ ಸಾರ್ವಜನಿಕರು ಕೋರೋನಾ ಬಗ್ಗೆ ಭಯ ಪಡುವ ಅಗತ್ಯವಿರುವುದಿಲ್ಲ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಿಂದ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ರೀತಿಯ ಸಕಲ ಸಿದ್ದತೆಯನ್ನು ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಭೋದಕ ಆಸ್ಪತ್ರೆ ಬೀದರ ಮತ್ತು ಜಿಲ್ಲೆಯ ಎಲ್ಲಾ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ತಿಳಿಸಿದ್ದಾರೆ.
ಕಾರಣ ಸಾರ್ವಜನಿಕರು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಿಂದ ನೀಡುವ ಮುನ್ನಚ್ಚೆರಿಕೆ ಕ್ರಮಗಳನ್ನುಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅವರು ತಿಳಿಸಿದ್ದಾರೆ.
ಯಾರು ಸಂಶಯಾಸ್ಪದ ಕೊರೋನಾ ಸೋಂಕು ಹೊಂದಿರುವವರು: ಯಾವುದೇ ವ್ಯಕ್ತಿ ನೆಗಡಿ, ಕೆಮ್ಮು, ಜ್ವರ, ಗಂಟಲು ಕೆರೆತ, ನೋವು ಹಾಗೂ ಶ್ವಾಸಕೋಶದ ಲಕ್ಷಣಗಳನ್ನು ಹೊಂದಿರಬೇಕು ಮತ್ತು ಇಲ್ಲದೇ ಕಡ್ಡಾಯವಾಗಿ ಆ ವ್ಯಕ್ತಿ ಈಗಾಗಲೇ ಕೊರೋನಾ ಸೋಂಕು ದೃಢಪಟ್ಟಿರುವ ವ್ಯಕ್ತಿ ಸಂಪರ್ಕ ಹೊಂದಿದ್ದರೆ ಅಥವಾ ಆ ವ್ಯಕ್ತಿ ಕೊರೋನಾ ಸೋಂಕು ಪ್ರಕರಣಗಳು ದೃಢಪಟ್ಟಿರುವ ಪ್ರದೇಶ (ಜಿಲ್ಲೆ/ರಾಜ್ಯ/ರಾಷ್ಟçಗಳಿಗೆ) ಈ ಲಕ್ಷಣಗಳು ಕಾಣಿಸಿಕೊಳ್ಳುವ ಹದಿನಾಲ್ಕು ದಿನಗಳ ಒಳಗೆ ಭೇಟಿ ನೀಡಿದರೆ ಅಂಥಹ ವ್ಯಕ್ತಿಗಳನ್ನು ಸಂಶಯಾಸ್ಪದ ಕೊರೋನಾ ಸೋಂಕು ಹೊಂದಿರಬಹುದೆAದು ಶಂಕಿಸಲಾಗುತ್ತ್ತದೆ.

ಶಂಕಿತ ವ್ಯಕ್ತಿಗಳ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಸಂಗ್ರಹಿಸಿ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸೋಂಕಿತ ವ್ಯಕ್ತಿಯ ಕೆಮ್ಮಿದಾಗ, ಸೀನಿದಾಗ ಪಕ್ಕದಲ್ಲಿರುವ ವ್ಯಕ್ತಿಗೆ ತುಂತುರು ಹನಿಗಳ ಮೂಲಕ ಹರಡುತ್ತದೆ. ಆದುದ್ದರಿಂದ ಕೆಮ್ಮು , ನೆಗಡಿ ಹೊಂದಿರುವ ಯಾವುದೇ ವ್ಯಕ್ತಿಯು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿದಾಗ ಮೂಗು ಹಾಗೂ ಬಾಯಿಯನ್ನು ಮುಚ್ಚಿಕೊಳ್ಳಲು ಮಾಸ್ಕಗಳನ್ನು ಬಳಸಬೇಕು. ಈ ತರಹದ ಲಕ್ಷಣಗಳನ್ನು ಹೊಂದಿರದ ವ್ಯಕ್ತಿಗಳು ಮಾಸ್ಕಗಳನ್ನು ಬಳಸುವ ಅವಶ್ಯಕತೆ ಇರುವುದಿಲ್ಲ.
ಸಾರ್ವಜನಿಕರು ಸೋಂಕು ತಗಲದಂತೆ ಮುಂಜಾಗೃತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಬೇಕು: ಕೆಮ್ಮುವಾಗ, ಸೀನುವಾಗ ಕರವಸ್ತç ಅಥವಾ ಟಿಶ್ಯೂ ಪೇಪರ್‌ನಿಂದ ಮೂರು ಹಾಗೂ ಬಾಯಿಯನ್ನು ಮುಚ್ಚಿಕೊಳ್ಳುವುದು ಮತ್ತು ಅದನ್ನು ಸಮಪರ್ಕವಾಗಿ ವಿಲೆವಾರಿ ಅಥವಾ ನಾಶ ಪಡಿಸುವುದು.ಆಗಾಗ ಕೈಗಳನ್ನು ಶೇ.70 ಪ್ರತಿಶತಕ್ಕಿಂತ ಹೆಚ್ಚು ಅಲ್ಕೋಹಾಲ್ ಇರುವ ಹ್ಯಾಂಡ್‌ವಾಶ್‌ಗಳಿAದ ತೊಳೆಯುವುದು. ವೈಯಕ್ತಿಕ ಸ್ವಚ್ಚತೆ ಪಾಲಿಸುವುದು. ಜನನಿಬಿಡಾದ ಪ್ರದೇಶದಿಂದ ದೂರವಿರುವುದು. ಸೋಂಕು ಇರುವ ವ್ಯಕ್ತಿಯ ಅತಿ ಸಮೀಪ ಹೋಗಬಾರದು. ಹಸ್ತಲಾಘವ, ತಬ್ಬಿಕೊಳ್ಳುವುದು ಅಥವಾ ಚುಂಬನ ಮಾಡಬಾರದು. ಕಣ್ಣು, ಮೂಗು ಹಾಗೂ ಬಾಯಿಯನ್ನು ಪದೇ ಪದೇ ಮುಟ್ಟಿಕೊಳ್ಳಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ಸಾಮಾನ್ಯವಾಗಿ ಮುಟ್ಟುವ ವಸ್ತುಗಳನ್ನು ಮುಟ್ಟಬಾರದು. ಸಾರ್ವಜನಿಕರು ಸಾಮಾನ್ಯ ಜ್ವರವಾಗಿದ್ದಲ್ಲಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೆ ಸದರಿ ಸೋಂಕು ಕುರಿತು ಮಾಹಿತಿ ನೀಡಲಾಗಿದೆ ಮತ್ತು ಈ ಸಿಬ್ಬಂದಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡುವಂತೆ ಸೂಚಿಸಲಾಗಿದೆ.
*****
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3