Friday, January 16, 2026
HomePopularಬಿತ್ತನೆ ಬೀಜ್, ಗೊಬ್ಬರ ಸಕಾಲದಲ್ಲಿ ರೈತರಿಗೆ ವಿತರಣೆ ಮಾಡಿ - ಸಚಿವ ರಹೀಂ ಖಾನ್

ಬಿತ್ತನೆ ಬೀಜ್, ಗೊಬ್ಬರ ಸಕಾಲದಲ್ಲಿ ರೈತರಿಗೆ ವಿತರಣೆ ಮಾಡಿ – ಸಚಿವ ರಹೀಂ ಖಾನ್

ಬಿತ್ತನೆ ಬೀಜ್, ಗೊಬ್ಬರ ಸಕಾಲದಲ್ಲಿ ರೈತರಿಗೆ ವಿತರಣೆ ಮಾಡಿ – ಸಚಿವ ರಹೀಂ ಖಾನ್
ಬೀದರ್ : ರೈತರಿಗೆ ಸರ್ಕಾರದಿಂದ ಸಿಗುವ ಬಿತ್ತನೆಬೀಜ, ಕೃಷಿಭಾಗ್ಯ ಯೋಜನೆ, ಸಾವಯವ ಕೃಷಿ ಹಾಗೂ ಇತರೆ ಯೋಜನೆಗಳ ಲಾಭವನ್ನು ಸಕಾಲದಲ್ಲಿ ರೈತರಿಗೆ ವಿತರಿಸುವಂತೆ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್ ಅಧಿಕಾರಿಯವರಿಗೆ ಸೂಚಿಸಿದರು.
ಅವರು ಮಂಗಳವಾರ ಜಿಲ್ಲಾ ಪಂಚಾಯತ, ಕೃಷಿ ಇಲಾಖೆ, ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಬೀದರ ಸಂಯುಕ್ತಾಶ್ರಯದಲ್ಲಿ ಚಾಂಬೋಳಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಿತ್ತನೆ ಬೀಜ ವಿತರಣೆ ಹಾಗೂ ಬೀಜ ಉಪಚಾರ ಹಾಗೂ ಕೀಟನಾಸಕ ಸುರಕ್ಷಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೀದರ ಜಂಟಿ ಕೃಷಿ ನಿರ್ದೇಶಕರಾದ ಜಿಯಾವುಲ್ಲಾ ಕೆ. ಅವರು ಪಾಸ್ತಾವಿಕ ಮಾತನಾಡಿ, ಸೋಯಾ ಮತ್ತು ಇತರೆ ಬೀಜಗಳು ದಾಸ್ತಾನು ಮಾಡಿರುವ 29 ಬೀಜ ವಿತರಣಾ ಕೇಂದ್ರಗಳ ಬಗ್ಗೆ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಮಾಹಿತಿ ನೀಡಿ ದಿನಾಂಕವಾರು ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ ಎಂದರು.
ಸಕಾಲದಲ್ಲಿ ಮಳೆಯಾಗಿರುವುದರಿಂದ ಉದ್ದು, ಹೆಸರು ಮತ್ತು ಮಿಶ್ರ ಬೆಳೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಾಗೂ ಡಿಎಪಿ ಬದಲಿಗೆ ಸಂಯುಕ್ತ ಗೊಬ್ಬರಗಳನ್ನು ಬಳಸಲು ರೈತರಿಗೆ ಸಲಹೆ ನೀಡಿದರು.

ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿಗಳಾದ ಡಾ.ಮಲ್ಲಿಕಾರ್ಜುನ ಲಿಂಗದಳ್ಳಿ ಅವರು ಸಮಗ್ರ ಕೃಷಿ ಪದ್ಧತಿ ಹಾಗೂ ಬಿತ್ತನೆ ಬೀಜ ಉಪಚಾರದ ಕುರಿತು ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಸಿದ್ರಾಮಯ್ಯ ಸ್ವಾಮಿ, ಬೀದರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಆರ್.ಎಲ್. ಜಾಧವ ಚಾಂಬೋಳ್ ಗ್ರಾಮ ಪಂಚಾಯತ ಅಧ್ಯಕ್ಷರಾದ ಸುರೇಖಾ ಅರ್ಜುನ ಕೋಳಿ, ಉಪಾಧ್ಯಕ್ಷರಾದ ದೌಲತರಾವ, ಚಾಂಬೋಳ್ ಪಿಕೆಪಿಎಸ್ ಅಧ್ಯಕ್ಷರಾದ ಸುನಿಲ್ ಪಾಟೀಲ್, ಜಿಲ್ಲಾ ಕೃಷಿಕ ಸಮಾಜದ ಸದಸ್ಯರಾದ ಸಂಜು ಪಾಟೀಲ್ ಕನ್ನಳ್ಳಿ, ತಾಲ್ಲೂಕ ಪಂಚಾಯತಿ ಸದಸ್ಯರಾದ ರಾಮರಾವ ಪಾಟೀಲ್, ನಾಗೇಂದ್ರ ಪಾಟೀಲ್, ಬಂಡೆಪ್ಪಾ ಜ್ಯಾಂತೆ, ಧನರಾಜ ಪಾಟೀಲ್, ಉಮೇಸ ಮೊಟ್ಟೆ, ಚಂದ್ರಕಾAತ ಹಿಪ್ಪಳಗಾಂವ ಸೇರಿದಂತೆ ಇತರರು ಉಪಸ್ಥಿತರಿದ್ದರು.
*****
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3