ಡಿಸಿಸಿ ಬ್ಯಾಂಕ್ ಶಾಖೆ ನೂತನ ಕಟ್ಟಡ ಉದ್ಘಾಟನೆ
ಬೀದರ್: ಇಲ್ಲಿಯ ಗುರುನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಶಾಖೆಯ ನೂತನ ಕಟ್ಟಡವನ್ನು ಬ್ಯಾಂಕ್ ಅಧ್ಯಕ್ಷ ಅಮರಕುಮಾರ ಬಿ. ಖಂಡ್ರೆ ಶುಕ್ರವಾರ ಉದ್ಘಾಟಿಸಿದರು.
ಈ ಮೊದಲು ಗುರುನಗರ ಶಾಖೆ ಗುರುದ್ವಾರ ಗಮಾನ್‍ಗೆ ಹೊಂದಿಕೊಂಡ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಶಾಖೆಗೆ ಸ್ವಂತ ಕಟ್ಟಡ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.ಬ್ಯಾಂಕ್ ನಿರ್ದೇಶಕರಾದ ಬಸವರಾಜ ಹೆಬ್ಬಾಳೆ, ವಿಜಯಕುಮಾರ ಎ. ಪಾಟೀಲ, ಬಸವರಾಜ ಕಾಮಶೆಟ್ಟಿ, ಅಶೋಕ ಸೋಂಜಿ, ಕಿಶನರಾವ್ ಪಾಟೀಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುಳಾ ಎಸ್, ಮುಖ್ಯ ಪ್ರಧಾನ ವ್ಯವಸ್ಥಾಪಕ ರಂಗನಾಥ ನೂಲಿಕರ್, ಪ್ರಧಾನ ವ್ಯವಸ್ಥಾಪಕ ವಿಠ್ಠಲರೆಡ್ಡಿ ಯಡಮಲ್ಲೆ, ಉಪ ಪ್ರಧಾನ ವ್ಯವಸ್ಥಾಪಕರಾದ ಬಸವರಾಜ ಕಲ್ಯಾಣ, ರಾಜಕುಮಾರ ಆಣದೂರೆ, ರಾಜಶೇಖರಯ್ಯ, ದೀನದಯಾಳ್ ಮನ್ನಳ್ಳಿ, ಪ್ರಭಾರ ಉಪ ಪ್ರಧಾನ ವ್ಯವಸ್ಥಾಪಕರಾದ ಜಗದೀಶ್ ರಾಗಾ, ಅರವಿಂದ ಮೈಲೂರಕರ್, ಶಾಖೆ ವ್ಯವಸ್ಥಾಪಕ ಸಂಗಪ್ಪ ಮತ್ತಿತರರು ಇದ್ದರು.