Friday, May 23, 2025
HomePopularಎರಡನೇ ಅವಧಿಗೆ ನೂತನ ರಾಜ್ಯ ಸಂಘಟನಾ  ಕಾರ್ಯದರ್ಶಿಯಾಗಿ ಉಮೇಶ್ ಕೆ ಮುದ್ನಾಳ  ನೇಮಕ: ದತ್ತಾತ್ರೇಯರೆಡ್ಡಿ

ಎರಡನೇ ಅವಧಿಗೆ ನೂತನ ರಾಜ್ಯ ಸಂಘಟನಾ  ಕಾರ್ಯದರ್ಶಿಯಾಗಿ ಉಮೇಶ್ ಕೆ ಮುದ್ನಾಳ  ನೇಮಕ: ದತ್ತಾತ್ರೇಯರೆಡ್ಡಿ

ಎರಡನೇ ಅವಧಿಗೆ ನೂತನ ರಾಜ್ಯ ಸಂಘಟನಾ  ಕಾರ್ಯದರ್ಶಿಯಾಗಿ ಉಮೇಶ್ ಕೆ ಮುದ್ನಾಳ  ನೇಮಕ: ದತ್ತಾತ್ರೇಯರೆಡ್ಡಿ

ಯಾದಗಿರಿ: ಅಖಿಲ ಭಾರತ ಕೋಲಿ ಸಮಾಜದ ಕರ್ನಾಟಕ ರಾಜ್ಯ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಎರಡನೇ ಬಾರಿ ಉಮೇಶ್ ಮುದ್ನಾಳ ಅವರು ಆಯ್ಕೆಯಾಗಿದ್ದಾರೆ.
ಅಖಿಲ ಭಾರತ ಕೋಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ವೀರೇಂದ್ರ ಕಶೆಪ ರವರು ಆಯ್ಕೆಯಾಗಿದ್ದು ಕರ್ನಾಟಕ ರಾಜ್ಯ ಸಮಿತಿಗೆ ನೂತನ ಅಧ್ಯಕ್ಷರನ್ನಾಗಿ ವಕೀಲರಾದ ದತ್ತಾತ್ರೇಯ ರೆಡ್ಡಿ ಮುದಿರಾಜ ರವರನ್ನು ರಾಷ್ಟ್ರೀಯ ಅಧ್ಯಕ್ಷರ ನೇಮಕ ಮಾಡಿ ಆದೇಶ ಹೊರಡಿಸಿದ್ದು ಅವರ ನಿರ್ದೇಶನದ ಮೇರಿಗೆ ರಾಜ್ಯಾದ್ಯಕ್ಷರಾದ ದತ್ತಾತ್ರೇಯ ರೆಡ್ಡಿ ಮುದರಾಜರವರು ಕರ್ನಾಟಕ ರಾಜ್ಯ ಸಮಿತಿ ಸಂಘಟನಾ   ಕಾರ್ಯದರ್ಶಿ ಗಳಾಗಿ ಕೋಲಿ ಸಮಾಜದ ಮುಖಂಡ ಉಮೇಶ್ ಮುದ್ನಾಳ ಅವರು ಎರಡನೇ ಬಾರಿ ಆಯ್ಕೆಯಾಗಿದ್ದಾರೆ.
ಸಂಘದ ರಾಜ್ಯ ಅಧ್ಯಕ್ಷರಾದ ದತ್ತಾತ್ರೇಯರೆಡ್ಡಿ ಮುದರಾಜ ಅವರು ಗುರುವಾರ ಯಾದಗಿರಿ ತಾಲೂಕಿನ ಮುದ್ನಾಳ ಗ್ರಾಮದ ಉಮೇಶ್ ಮುದ್ನಾಳ ಅವರ ನಿವಾಸದಲ್ಲಿ ಸಭೆ ನಡೆಸಿ ಈ ಬಗ್ಗೆ ಉಮೇಶ್ ಮುದ್ನಾಳ ಆಯ್ಕೆ ಘೋಷಣೆ ಮಾಡಿದರು.


ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ದತ್ತಾತ್ರೇಯ ರೆಡ್ಡಿ ಅವರು,ಉಮೇಶ್ ಮುದ್ನಾಳ ಅವರು ಸಮಾಜ ಸಂಘಟನೆ ಮಾಡಿ  ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.ಶಿಕ್ಷಣದ ಮಹತ್ವ,ಸಮಾಜದ ಜನರು ಸ್ವಾವಲಂಬಿ ಬದುಕು ಸಾಗಿಸುವ ಬಗ್ಗೆ ಹೀಗೆ ಹಲವು ಹತ್ತಾರು  ಕಾರ್ಯಕ್ರಮ ನಡೆಸಿ ಜಾಗೃತಿ ಕೂಡಿಸಿ ಅಕ್ಷರ ಜ್ಞಾನದ ಮಹತ್ವ ಹಾಗೂ ಸ್ವಾವಲಂಬಿ ಜೀವನ ಬಗ್ಗೆ ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸಿ ವಿನೂತನ ವಾಗಿ ಸಮಾಜದ ಜನರಿಗೆ ಅರಿವು ಮೂಡಿಸುತ್ತಾ ಬಂದಿದ್ದಾರೆ.ಹೀಗಾಗಿ ಇವರ ಉತ್ತಮ ಸೇವೆ ಪರಿಗಣಿಸಿ ಸಮಾಜಕ್ಕೆ ಇಂತಹವರ ಸೇವೆ ಮುಖ್ಯವಾಗಿದ್ದು ಹೀಗಾಗಿ ಎರಡನೇ ಬಾರಿ ಸಮಿತಿಯ ರಾಜ್ಯ ಸಂಘಟನೆಯ ಕಾರ್ಯದರ್ಶಿಯಾಗಿ ಎರಡನೇ ಬಾರಿ ಆಯ್ಕೆಮಾಡಲಾಗಿದೆ ಎಂದರು.
ಈ ವೇಳೆ ಟಿ.ಡಿ.ರಾಜು ಮಾತನಾಡಿ,ಸಮಿತಿಯ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲಾ  ಕೇಂದ್ರಗಳಲ್ಲಿ ಪ್ರವಾಸ ಮಾಡಿ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಪದಾಧಿಕಾರಿಗಳ ನೇಮಕ ಮಾಡಿ ಸಂಘಟನೆ ಮಾಡಲಾಗುತ್ತದೆ ಎಂದರು.
ಈ ವೇಳೆ ರಾಜಗೋಪಾಲರೆಡ್ಡಿ,ಮಲ್ಲೇಶ ಪಸಪುಲ್,ಪವನ ಮುದ್ನಾಳ ಸೇರಿದಂತೆ ಅನೇಕರು ಇದ್ದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3