Saturday, May 24, 2025
Homeಜಿಲ್ಲೆಜಗತ್ತಿನಲ್ಲಿಯೇ ಮೊದಲ ಬಾರಿಗೆ ಸಾಮಾಜಿಕ ಕ್ರಾಂತಿ ಹುಟ್ಟು ಹಾಕಿದವರು ವಿಶ್ವಗುರು ಬಸವಣ್ಣನವರು-ಸಚಿವ ಈಶ್ವರ ಬಿ.ಖಂಡ್ರೆ.

ಜಗತ್ತಿನಲ್ಲಿಯೇ ಮೊದಲ ಬಾರಿಗೆ ಸಾಮಾಜಿಕ ಕ್ರಾಂತಿ ಹುಟ್ಟು ಹಾಕಿದವರು ವಿಶ್ವಗುರು ಬಸವಣ್ಣನವರು-ಸಚಿವ ಈಶ್ವರ ಬಿ.ಖಂಡ್ರೆ.

ಬೀದರ್ :- ಜಗತ್ತಿನಲ್ಲಿಯೇ ಮೊದಲ ಬಾರಿಗೆ ಸಾಮಾಜಿಕ ಕ್ರಾಂತಿ ಹುಟ್ಟು ಹಾಕಿದವರು ವಿಶ್ವಗುರು ಬಸವಣ್ಣನವರು ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಹೇಳಿದರು.

ಅವರು ಬುಧವಾರದಂದು ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 892ನೇ ಜಯಂತಿ ನಿಮಿತ್ಯ ನಗರದ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ, ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಾವು ಬಸವಣ್ಣನವರ ಪುಣ್ಯಭೂಮಿ ಕಲ್ಯಾಣ ನೆಲದಲ್ಲಿ ನೆಲೆಸಿದ್ದೇವೆ. 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ವಚನ ಕ್ರಾಂತಿಯು ಸಮಾಜದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಆಗುವಂತೆ ಮಾಡಿತು. ಬಸವಣ್ಣನವರ ವಚನ ಸಾಹಿತ್ಯದ ಮೂಲಕ ಜಾತಿರಹಿತ ಸಮಾಜ, ಸಮ ಸಮಾಜ ಮತ್ತು ಮೇಲು ಕೀಳು ಎಂಬ ಭಾವನೆಗಳು ಹೋಗಲಾಡಿಸಲು ಅವರ ಪ್ರಯತ್ನ ಮಹತ್ವದಾಗಿದೆ. ಇಂದು ನಾವು ಕೂಡ ಬಸವಣ್ಣನವರ ತತ್ವ- ಸಂದೇಶಗಳನ್ನು ಮಾರ್ಗದರ್ಶನವಾಗಿ ಇಟ್ಟಿಕೊಂಡು ಸಮ ಸಮಾಜದ ನಿರ್ಮಾಣ ಮಾಡಬೇಕಾಗಿದೆ ಮತ್ತು ವಚನಗಳ ಆಶಯಗಳನ್ನು ತಿಳಿದುಕೊಂಡು ಸಮಾನತೆಯಿಂದ ಕೂಡಿ ಬಾಳಬೇಕು ಎಂದು ತಿಳಿಸಿದರು.

ಇದಕ್ಕೂ ಮುಂಚೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್, ಮಾಜಿ ಸಚಿವ ಬಂಡೆಪ್ಪ ಖಾಶಂಪೂರ, ನಗರಸಭೆ ಅಧ್ಯಕ್ಷರಾದ ಮಹಮ್ಮದ ಗೌಸ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳಾದ ಡಾ.ಗಿರೀಶ ಬದೋಲೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಪ್ರದೀಪ್ ಗುಂಟಿ, ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚಿಮಕೊಡೆ, ಜೈರಾಜ್ ಖಂಡ್ರೆ, ಆನಂದ ದೇವಪ್ಪ, ಬಾಬು ವಾಲಿ, ಪಂಡಿತ ಚಿದ್ರಿ, ಈಶ್ವರಸಿಂಗ್ ಠಾಕೂರ್, ಸಂಜು ಕುಮಾರ್ ಪಾಟೀಲ್, ಮಾರುತಿ ಬೌದ್ಧೆ, ವಿಜಯಕುಮಾರ ಸೊನಾರೆ ಸೇರಿದಂತೆ ಬಸವ ಅಭಿಮಾನಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3