ಬೀದರ್: ಈ ತಿಂಗಳ ೨೭ರಂದು ಸಾಯಂಕಾಲ ೬ ಗಂಟೆಗ ತಾಲೂಕಿನ ಮಿರ್ಜಾಪುರ(ಕೆ) ಗ್ರಾಮದಲ್ಲಿ ಹಿಂದೂ ಸಾಮ್ರಾಟ ಶಿವಾಜಿ ಮಹಾರಾಜರ ಮೂರ್ತಿ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ ಎಂದು ಛತ್ರಪತಿ ಶಿವಾಜಿ ಮಹಾರಾಜ ಜನತಾ ಸಂಘದ ಅಧ್ಯಕ್ಷ ಸಂದೀಪ್ ಪಾಟೀಲ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು,
ಅಂದಿನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುಲ್ತಾನಪುರ ಮಲ್ಲಯ್ಯನಗಿರಿ ಆಶ್ರಮದ ಪೂಜ್ಯ ಡಾ. ಬಸವಲಿಂಗ ಅವಧೂತರು, ಸ್ವಂತ ಹಾಗೂ ಕಲ್ಮೋಡದ ಪೀಠಾಧಿಪತಿ ಪೂಜ್ಯ ದತ್ತ ದಿಗಂಬರ ಶ್ರೀ ಶಂಕರಲಿಂಗ ಮಹಾರಾಜರು, ಔಧತಪುರದ ಶ್ರೀ ಯೋಗಿ ಮಚೇಂದ್ರನಾಥ ಮುತ್ಯ, ಹಳೆಂಬರದ ಪೂಜ್ಯ ಬಾಬುರಾವ್ ಮುತ್ಯ ರಾಜನಾಳದ ಕಾಶಿನಾಥ ಮಹಾರಾಜರು, ಬೀರಲಿಂಗೇಶ್ವರ ಪಟ್ಟದ ದೇವರಾದ ಬಾಲ ತಪಸ್ವಿ ಪೂಜ್ಯ ಗೋಪಾಲ ಮುತ್ಯ ಹಾಗೂ ಪಂಡರಾಪುರದ ಪೂಜ್ಯ ಅಂಬಾದಾಸ ಮಹಾರಾಜರು ಸಾನಿಧ್ಯ ವಹಿಸುವರು.

ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಹಾಗೂ ಮಾಜಿ ಕೇಂದ್ರ ಸಚಿವರು ಮತ್ತು ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಜಂಟಿಯಾಗಿ ಕಾರ್ಯಕ್ರಮ ಉದ್ಘಾಟಿಸುವರು. ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಔರಾದ ಶಾಸಕ ಪ್ರಭು ಚೌಹಾಣ್, ಮಾಜಿ ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ, ಬಸವಕಲ್ಯಾಣ ಶಾಸಕ ಶರಣು ಸಲಗರ, ಹುಮ್ನಾಬಾದ್ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಮಾಜಿ ವಿಧಾನ ಪರಿಷತ್ ಸದಸ್ಯ ಮಾರುತಿರಾವ ಮೂಳೆ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದೀಪಕ ಗಾದಗಿ, ಬಿಜೆಪಿ ನಿಕಟಪೂರ್ವ ಮಂಡಲ ಅಧ್ಯಕ್ಷ ರಾಜೇಂದ್ರ ಪೂಜಾರಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಹೇಶ್ವರ ಸ್ವಾಮಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ್ ಚಿದ್ರಿ, ಬಿಜೆಪಿ ನಗರ ಮಂಡಲ ಖಜಾಂಚಿ ರಾಜಕುಮಾರ ಜಮಾದಾರ್, ಉಣ್ಣೆ ಮತ್ತು ಕುರಿ ಅಭಿವೃದ್ಧಿ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಪಂಡಿತರಾವ್ ಚಿದ್ರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿಜಯಕುಮಾರ್ ಪಾಟೀಲ್ ಗಾದಗಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕುಶಾಲ ಪಾಟೀಲ್ ಗಾದಗಿ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ರಜನೀಶ ವಾಲಿ, ಜಿಲ್ಲಾ ಪಂಚಾಯತ್ ಸದಸ್ಯ ಬಾಬುರಾವ್ ಮಲ್ಕಾಪುರೆ, ನ್ಯಾಷನಲ್ ಅಂಡ್ ಸೈನಿಕ್ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಲತಾ ಸ್ವಾಮಿ, ಕೆಎಂಎಫ್‌ಸಿ ಕಲ್ಬುರ್ಗಿಯ ನಿರ್ದೇಶಕ ಮಲ್ಲಿಕಾರ್ಜುನ್ ಬಿರಾದಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೀರಪ್ಪ ಔರಾದೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ಅಧ್ಯಕ್ಷ ಲೋಕೇಶ ಮರ್ಜಾಪುರ್, ಚಿಲ್ಲರ್ಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಯರಾಜ, ಯುವ ಮುಖಂಡ ಜಗನ್ನಾಥ ಜಮಾದಾರ್, ಪತ್ರಕರ್ತ ಸುನಿಲ್ ಬಾವಿಕಟ್ಟಿ, ಎಪಿಎಂಸಿ ಮಾಜಿ ನಿರ್ದೇಶಕ ಮಾರುತಿ ಕೋಳಿ ಚಾಂಬೋಳ್, ಗಾದಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ, ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಸಂಸ್ಥಾಪಕ ಸ್ವಾಮಿದಾಸ ಕೆಂಪೇನೂರ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಅಶೋಕ ಪಾಟೀಲ್ ಅಲಿಯಾಬಾದ್, ರಾಷ್ಟ್ರ ರಕ್ಷಣಾ ಪಡೆ ಜಿಲ್ಲಾಧ್ಯಕ್ಷ ಅಮಿತ್ ಚಿಂಚೋಳೆ, ರಾಮ ಸೇನಾ ಜಿಲ್ಲಾಧ್ಯಕ್ಷ ವೀರು ಠಾಕೂರ್, ಹಿಂದೂ ಜಾಗರಣ ವೇದಿಕೆ ಸಂಚಾಲಕ ಜಗಮೋಹನ್ ರಾಜಪುತ, ಬಿಜೆಪಿ ಎಸ್ಸಿ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಶಾಲಿ ಚಿದ್ರಿ, ಹಿಂಧು ಸಂಘಟನೆ ಜಿಲ್ಲಾಧ್ಯಕ್ಷ ನಾಗರಾಜ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶಿವಾಜಿ ಮಹಾರಾಜ ಜನತಾ ಸಂಘದ ಅಧ್ಯಕ್ಷನಾದ ನಾನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವೇನು. ದಿಗಂಬರ್ ಮಾನಕಾರಿ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿರುವರು ಎಂದು ಸಂದೀಪ್ ಪಾಟೀಲ್ ಕಾರ್ಯಕ್ರಮದ ವಿವರಣೆ ನೀಡಿದರು.
ಸಂಘದ ಪ್ರಮುಖರಾದ ದತ್ತು ಮೂಲಗೆ, ಧನರಾಜ ಪಾಂಡ್ರೆ, ವಿಠಲ ಸೆಣಗೆ, ಶಿವಕುಮಾರ ರಾಯಣ್ಣ, ಸುಭಾಷ ಮಲಾರೆ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.