ಕಠಿಣ ಕ್ರಮಕ್ಕೆ ರಮೇಶ ಕುಲಕರ್ಣಿ ಒತ್ತಾಯ
ಬೀದರ್: ಬ್ರಾಹ್ಮಣರ ಕುರಿತು ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ನೀಡಿರುವ ಅಪಮಾನಕರ ಹೇಳಿಕೆಯನ್ನು ಜಿಲ್ಲಾ ಬ್ರಾಹ್ಮಣ ಮಹಾ ಸಂಘದ ಅಧ್ಯಕ್ಷ ರಮೇಶ್ ಕುಲಕರ್ಣಿ ತೀವ್ರವಾಗಿ ಖಂಡಿಸಿದ್ದಾರೆ.
‘ಬ್ರಾಹ್ಮಣರ ಬಾಯಿಗೆ ಶೌಚ ಮಾಡುವೆ’ ಎಂದಿರುವುದು ಅತ್ಯಂತ ಕೀಳು, ಅನಾಗರಿಕ ಹಾಗೂ ಅಸಭ್ಯ ಹೇಳಿಕೆ. ಇದು, ಒಂದು ಸಮುದಾಯವನ್ನು ನಿಂದಿಸಿದ ಹೇಳಿಕೆಯಷ್ಟೇ ಅಲ್ಲ; ಭಾರತೀಯ ಸಂಸ್ಕೃತಿ, ಪರಂಪರೆ, ಸಹಿಷ್ಣುತೆ ಹಾಗೂ ಸೌಹಾರ್ದದ ವಿರುದ್ಧದ ಹೇಳಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರಾಹ್ಮಣ ಸಮುದಾಯ ದೇಶಕ್ಕೆ ವೇದ, ಶಾಸ್ತ, ಸಂಸ್ಕಾರ ಹಾಗೂ ಜ್ಞಾನ ನೀಡಿದ ಶ್ರೇಷ್ಠ ಸಮುದಾಯ. ಶಿಕ್ಷಣ, ವಿಜ್ಞಾನ, ಗಣಿತ, ವೈದ್ಯಶಾಸ್ತ, ಸಾಹಿತ್ಯ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಮುದಾಯದ ಕೊಡುಗೆ ಅಪಾರ. ಅಭಿವ್ಯಕ್ತಿ ಸ್ವಾತಂತ್ರö್ಯದ ಹೆಸರಲ್ಲಿ ಕಶ್ಯಪ್ ನೀಡಿರುವ ಹೇಳಿಕೆ ಸಮಾಜದಲ್ಲಿ ದ್ವೇಷದ ವಿಷ ಹರಡುವಂಥದ್ದು ಎಂದು ಹೇಳಿದ್ದಾರೆ.
ಬ್ರಾಹ್ಮಣರು ಸಹಿಷ್ಣುಗಳು. ಆದರೆ, ದುರ್ಬಲರಲ್ಲ ಎಂಬುದ್ದನ್ನು ಕಶ್ಯಪ್ ಅರಿತುಕೊಳ್ಳಬೇಕು. ಬ್ರಾಹ್ಮಣರಿಗೆ ನೋವು ಉಂಟು ಮಾಡಿದ್ದಕ್ಕೆ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬ್ರಾಹ್ಮಣ ಸಮುದಾಯದ ಅವಹೇಳನ ಮಾಡಿದ ಕಾರಣಕ್ಕಾಗಿ ಸರ್ಕಾರ ಅನುರಾಗ್ ಕಶ್ಯಪ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಅವರ ಚಿತ್ರಗಳನ್ನು ಬಹಿಷ್ಕರಿಸಬೇಕು ಎಂದು ಹೇಳಿದ್ದಾರೆ.