ಭಾಲ್ಕಿ : ವೀರಭದ್ರಪ್ಪ ಅಪ್ಪಾ ಮಹಾ ತಪಸ್ವಿಯಗಿದರು. ಅವರು ಗಾಯಮುಖ ಸುಕ್ಷೇತ್ರದಲ್ಲಿ ದಿನಾಲು ಬೆಳಗಿನ ಜಾವ ತಪಸ್ವಿಗೆ ಕುಳಿತು ದೇವರನ್ನು ಒಲಿಸಿಕೊಳುತ್ತಿದರು ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ, ದೇಗಲಮಡಿ ಮತ್ತು ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ನುಡಿದರು.
ಭಾಲ್ಕಿ ತಾಲ್ಲೂಕಿನ ಬಾಳೂರ ಗ್ರಾಮದಲ್ಲಿಮಂಗಳವಾರ ಶ್ರೀ ವೀರಭದ್ರಪ್ಪ ಅಪ್ಪಾಮಹಾರಾಜ 79 ನೇ ಸ್ಮರಣೋತ್ಸವ ನಿಮಿತ್ಯ ಆಯೋಜಿಸಿದ್ದ ಪ್ರವಚನ, ಭಜನೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಅವರು ಜನರಿಗೆ ಬೇಡಿದ ವರವನ್ನು ಕರುಣಿಸಿದ ಅವತಾರ ಪುರುಷ ವೀರಭದ್ರಪ್ಪ ಅಪ್ಪಾ ಅಲ್ಲದೇ ಇವರು ಪವಾಡ ಪುರಷರಾಗಿದ್ದರು ಎಂದರು.
ಬಾಳೂರ ಗ್ರಾಮ ಅಲ್ಲದೇ ಅನೇಕ ಕಡೆ ಸಪ್ತಾಹ ಕಾರ್ಯಕ್ರಮ ನಡೆಸಿ ಅಪ್ಪ ಈ ಗ್ರಾಮ ಪಾವನ ಭೂಮಿಯಾಗಿದೆ ಎಂದು ನುಡಿದರು.

ಶರಣರು ಸಂತರು ಬರೆದ ವಚನಗಳು ಓದಬೇಕು ಅಲ್ಲದೇ ಪ್ರವಚನ, ಪುರಾಣ ಆಲಿಸಬೇಕು. ಬಿಡುವಿದ್ದಾಗ ಮಕ್ಕಳು ಮತ್ತು ಕುಟುಂಬದ ಸದಸ್ಯರೊಂದಿಗೆ ಸಂತಸದಿನದ ಕಾಲ ಕಳೆಯಬೇಕು ಎಂದು ತಿಳಿಸಿದರು.
ವೀರಭದ್ರಪ್ಪ ಅಪ್ಪಾ ದೇವಸ್ಥಾನ ಸುಂದರವಾಗಿ ನಿರ್ಮಿಸಲಾಗುತ್ತಿದೆ. ಈ ದೇವಸ್ಥಾನ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಲಿದೆ ಎಂದರು.
ಜೀವನದಲ್ಲಿ ತಾವೇಲ್ಲ ಒಳ್ಳೆಯ ಗುಣಗಳನ್ನು ಬೇಳೆಸಿಕೊಳ್ಳಬೇಕು. ಇನ್ನೋಬ್ಬರಿಗೆ ಉಪಕಾರಿಯಾಗಿ ಬದುಕು ಸಾಗಿಸಬೇಕು. ತಮ್ಮ ತಮ್ಮ ಬಂದು ಭಾಂಧವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಇದಕ್ಕೂ ಮುನ್ನ ಶ್ರೀ ವೀರಭದ್ರಪ್ಪ ಅಪ್ಪಾಮಹಾರಾಜ ಮೂರ್ತಿಗೆ ಪೂಜ್ಯ ಸಲ್ಲಿಸಿದರು.

ಪ್ರಮುಖರಾದ ದೇವಸ್ಥಾನದ ಅಧ್ಯಕ್ಷ ರಾಮು ದೇಶಮುಖ, ಉಪಾಧ್ಯಕ್ಷ ಕಾಮಶೇಟ್ಟಿ ಬುಳ್ಳಾ, ಅರ್ಚಕರಾದ ಓಂಕಾರ ಸ್ವಾಮಿ, ಪ್ರವೀಣ ಸ್ವಾಮಿ, ಗಂಗಾಧರ ಶಾಸ್ತ್ರಿ, ಶಿವಕುಮಾರ ಶಾಸ್ತ್ರಿ, ಓಂಕಾರ ಎಸಗೆ, ಅರವಿಂದ ವಾಡಿಕರ, ಸುಭಾಷ ವಾಡಿಕರ, ಮಹೇಶ ಘಾಳೆ, ಮಹೇಶ ಪಾಟೀಲ್, ಸೋನು ದೇಶಮುಖ, ಸಾಗರ ದೇಶಮುಖ, ವಿನೋಂದ ಧೋರಥ, ಬಾಲಾಜಿ ಕುಂಟನೋರ್, ಅಂಬದಾಸ ನೆಲವಾಡೆ, ಸಿದ್ದು ಸ್ವಾಮಿ, ದಿನಕರ ಪಾಂಚಾಳ, ಕೃಷ್ಣಾ ಸೋನಾರೆ, ಅಶೋಕ ಮಾಲಿ ಪಾಟೀಲ್, ಶಶಿಧರ ಸೀತಾ ಸಿದ್ದೇಶ್ವರ, ರವಿಂದ್ರ ಕರಂಜೆ ಮತ್ತಿತರರು ಇದ್ದರು