ಬೀದರ್ : ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವದ ಪೂರ್ವಭಾವಿ ಸಭೆಯು ದಿನಾಂಕ 15 ಎಪ್ರಿಲ್ 2025 ರಂದು ಮಂಗಳವಾರ ಸಾಯಂಕಾಲ 5.00ಗಂಟೆಗೆ ಬೀದರ ನಗರದ ಗಾಂಧಿಗಂಜ್ ನಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ಬಸವ ಜಯಂತಿ ಉತ್ಸವ ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸುವ ಪ್ರಯುಕ್ತ ಎಲ್ಲಾ ಬಸವಪರ ಸಂಘಟನೆಗಳ ಪ್ರಮುಖರ ಹಾಗೂ ಬಸವಾಭಿಮಾನಿಗಳ ಸಭೆ ಕರೆಯಲಾಗಿದೆ ದಯವಿಟ್ಟು ಜಿಲ್ಲೆಯ ಬಸವಭಕ್ತರು ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವದ ಯಶಸ್ವಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿ ಸಭೆ ಯಶಸ್ವಿಗೊಳಿಸಲು ಸಮಿತಿಯು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದೆ.