ಬೀದರ್ : ಬ್ರಾಹ್ಮಣ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವೆ, ಸಮಾಜಕ್ಕೆ ಬ್ರಾಹ್ಮಣ ಅಬಿವೃದ್ಧಿ ನಿಗಮ ಮತ್ತು ಸರ್ಕಾರಗಳಿಂದ ದೊರಕುವ ಸಕಲ ಸೌಲಭ್ಯಗಳನ್ನು ಕೊಡಿಸಲು ಶತಪ್ರಯತ್ನ ಮಾಡುವೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬೀದರ ಜಿಲ್ಲಾ ನೂತನ ಪ್ರತಿನಿಧಿ ವೆಂಕಟೇಶ ಕುಲಕರ್ಣಿ ಹುಮನಾಬಾದ ಅವರು ನುಡಿದರು.
ಅವರು ದಿ. 13 ರಂದು ರಾತ್ರಿ ಬೀದರ ನಗರದ ಶ್ರೀ ರಾಘವೆಂದ್ರ ಸ್ವಾಮಿ ಮಠದಲ್ಲಿ ನಡೆದ ಸರಳ ಸ್ವಾಗತ ಮತ್ತು ಸತ್ಕಾರ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡುತಿದ್ದರು. ಎಪ್ರಿಲ್ 13 ರಂದು ನಡೆದ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ತಮ್ಮನ್ನು ಬೀದರ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಆಯ್ಕೆ ಮಾಡಿ ತಮ್ಮ ಜವಾಬ್ದಾರಿ ಹೆಚ್ಚಿಸಿರುವಿರೆಂದು ಬ್ರಾಹ್ಮಣ ಮತದಾರ ಬಾಂಧವರಿಗೆ ಮತ್ತು ಸಮಾಜದವರಿಗೆ ಕುಲಕರ್ಣಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಬೀದರಿನ ಗುರುರಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಪಾಟೀಲ್ ಅವರು ನೂತನ ಚುನಾಯಿತ ಪ್ರತಿನಿಧಿ ವೆಂಕಟೇಶ ಕುಲರ್ಣಿಯವರಿಗೆ ಸನ್ಮಾನಿಸಿ ಗೌರವಿಸಿದರು. ಶ್ರೀ ಮಠದ ವತಿಯಿಂದಲೂ ಶಾಲು ಹೊದಿಸಿ ಆರ್ಶಿವಾದ ಮಾಡಲಾಯಿತು.
ರಘುನಾಥರಾವ ಕುಲಕರ್ಣಿ ನಗರಸಭೆ ಮಾಜಿ ಸದಸ್ಯ ಮನೋಹರ ದಂಡೆ, ಸುಧೀಂದ್ರ ಕುಲಕರ್ಣಿ, ಶಿವಕುಮಾರ ಕುಲಕರ್ಣಿ, ಬೀದರ ಎಕ್ಸಪ್ರೆಸ್ ವ್ಯವಸ್ಥಾಪಕ ಸಂಪಾದಕ ಮತ್ತು ಶ್ರೀಗಿರಿ ಕರ್ನಾಟಕ ಪತ್ರಿಕೆ ಸಂಪಾದಕ ಸುನೀಲಕುಮಾರ ಕುಲಕರ್ಣಿ ಮರಕುಂದಾ, ಶ್ರೀಕಾಂತ ಕುಲಕರ್ಣಿ ರಾಜೇಶ ಕುಲಕರ್ಣಿ ದಿನಕರ ಕುಲಕರ್ಣಿ, ರಾಜಕುಮಾರ ಕುಲಕರ್ಣಿ, ಅರವಿಂದ ಕುಲಕರ್ಣಿ, ಕೃಷ್ಣ ಕುಲಕರ್ಣಿ, ಭೀಮರಾವ ಕುಲಕರ್ಣಿ, ರಮೇಶ ಕುಲಕರ್ಣಿ, ರಮೇಶ ಮೀನಕೇರಾ, ಅವರುಗಳು ಸೇರಿದಂತೆ ಅನೇಕ ಗಣ್ಯರ, ಸಮಾಜ ಬಾಂಧವರು ವೆಂಕಟೇಶ ಕುಲಕರ್ಣಿಯವರಿಗೆ ಸತ್ಕರಿಸಿದರು.
ಭೀಮಸೇನ ಕನ್ನಿಹಾಳ, ರಾಘವೇಂದ್ರ ಕುಲಕರ್ಣಿ, ಪತ್ರಕರ್ತ ಸದಾನಂದ ಜೋಶಿ ಜನವಾಡಾ, ಮಕರಂದ ಕುಲಕರ್ಣಿ, ರಾಮರಾವ ಶೆಂಬೆಳ್ಳಿಕರ್, ಚಂದ್ರಕಾಂತ ಕುಲಕರ್ಣಿ, ಕಲ್ಯಾಣರಾವ ಗೋರ್ಟೆಕರ್, ಎಂ. ಜಿ. ದೇಶಪಾಂಡೆ, ಬೀದರ ಎಕ್ಸಪ್ರೆಸ್ ಪತ್ರಿಕೆ ಸಂಪಾದಕ ಅನೀಲ ಕುಲಕರ್ಣಿ ಮರಕುಂದಾ, ಅನೀಲ ಚಿಕ್ಕಮುನ್ನೂರು, ಗಣಪತರಾವ ಕುಲಕರ್ಣಿ, ಪ್ರಮೋದ ಕುಲಕರ್ಣಿ, ಶಾಂಭವಿ ಕುಲಕರ್ಣಿ, ರಮೇಶ ಸರ್ ಕುಲಕರ್ಣಿ, ಸುರೇಶ ಸರ್ ಕುಲಕರ್ಣಿ, ಸುರೇಂದ್ರ ಕುಲಕರ್ಣಿ, ಬೆಮಳಖೆಡಾ ಸೇರಿದಂತೆ ಅನೇಕರು ವೆಂಕಟೇಶ ಕುಲಕರ್ಣಿಯವರ ವಿಜಯಕ್ಕೆ ಶುಭ ಹಾರೈಸಿ ಸಮಾಜದ ಒಳಿತಿಗೆ ದುಡಿಯುವಂತೆ ಮನವಿ ಮಾಡಿದ್ದಾರೆ.