ಬೀದರ್ : ಆಲ್ ಇಂಡಿಯಾ ಪ್ಯಾಂಥರ‍್ಸ ಸೇನಾ, ಜಿಲ್ಲಾ ಘಟಕ, ಬೀದರ ವತಿಯಿಂದ ಬರುವ ಏ. 14 ರಂದು ವಿಶ್ವರತ್ನ ಮಹಾ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಭೀಮರಾವ ಅಂಬೇಡ್ಕರ್ ರವರ 134ನೇ ಜಯಂತ್ಯೋತ್ಸವದ ಅಂಗವಾಗಿ ಹಗಲಿರುಳು ಕಡಿ ಬಿಸಿಲಿನಲ್ಲಿ ಸೇವೆ ಸಲ್ಲಿಸುತ್ತಿರುವ ಟ್ರಾಫೀಕ್ ಪೊಲಿಸರಿಗೆ ಛತ್ರಿ (ಅಂಬ್ರೇಲ್)ಗಳು ವಿತರಿಸಲಾಯಿತು.
ಆಲ್ ಇಂಡಿಯಾ ಪ್ಯಾಂಥರ‍್ಸ ಸೇನಾ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಭರತ ಕಾಂಬಳೆ ರವರ ನೇತೃತ್ವದಲ್ಲಿ ಹಾಗೂ ಪ್ಯಾಂಥರ‍್ಸ ಪದಾಧಿಕಾರಿಗಳಾದ ದೇವಿಂದ್ರ ಆರ್. ಸೋನಿ, ದೇವರಾಜ ಆರ್ಯ, ಸಂತೋಷ ಕಾಂಬಳೆ, ಸುಜೀತ ಬಡಿಗೇರ, ಆನಂದ ಖಾಶೆಂಪೂರ, ಸೂರ್ಯಕಾಂತ ಎ., ರಾಜು ಸುಲ್ತಾನಪೂರ, ಶಾಮರಾವ ಮಲ್ಕಾಪೂರ, ರಮೇಶ ಅಂದಕು, ಮನೋಜ, ಅರುಣಕುಮಾರ, ಹಾಗೂ ಇನ್ನಿತರ ಸಂಗಡ ವಿತರಣೆ ಮಾಡಲಾಯಿತು.