ಬೀದರ್ : ಇಂದು ಬೆಳಿಗ್ಗೆ ಇಹಲೋಕವನ್ನು ತ್ಯಜಿಸಿದ ಹಿರಿಯ ನ್ಯಾಯವಾದಿಗಳು ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಪ್ರಮುಖರಾದ ರಾಜಯೋಗಿ ಪ್ರಭಾಕರ್ ಭಾಯಿ ಅವರಿಗೆ ಬೀದರ್ ಜಿಲ್ಲಾ ವಕೀಲರ ಸಂಘದ ವತಿಯಿಂದ ಬೀದರ್ ಜಿಲ್ಲಾ ನ್ಯಾಯಾಲಯ ಸಂಕರ‍್ಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ವಕೀಲರ ಸಂಘದ ಜಿಲ್ಲಾಧ್ಯಕ್ಷ ಪುಟ್ಟುರಾಜ ಪಾಟೀಲ್, ರಾಜಯೋಗಿ ಪ್ರಭಾಕರ್ ಭಾಯಿ ಅವರು ಇಂದು ನಮ್ಮನ್ನು ಅಗಲಿದ್ದು ಅತ್ಯಂತ ದುಃಖಕರ ಸಂಗತಿಯಾಗಿದೆ. ಅವರು ಅತ್ಯಂತ ಸರಳ ಹಾಗೂ ಸಾತ್ವಿಕ ಜೀವಿಗಳಾಗಿದ್ದರೂ. ಸತ್ಯ ಶುದ್ಧ ಕಾಯಕದೊಂದಿಗೆ ಸಮಾಜಕ್ಕೆ ಪ್ರೇರಣೆಯಾಗಿದ್ದ ವ್ಯಕ್ತಿತ್ವ ಪ್ರಭಾಕರ್ ಭಾಯಿ ಅವರದ್ದಾಗಿತ್ತು. ತಮ್ಮ ಇಡಿ ಜೀವನವನ್ನು ಸಮಾಜಕ್ಕಾಗಿ ತ್ಯಾಗ ಮಾಡಿರುತ್ತಾರೆ, ಅವರ ಅಗಲಿಕೆಯಿಂದ ನಮ್ಮ ವಕೀಲ ಸಮುದಾಯ ಬಡವಾಗಿದೆ ಎಂದರೆ ತಪ್ಪಾಗಲಾರದು.
ಅವರ ಕುಟುಂಬಕ್ಕೆ ದುಃಖ ತಡಿಯುವ ಶಕ್ತಿಯನ್ನ ಆ ಭಗವಂತ ನೀಡಲಿ, ಅವರ ಜೀವನ ನಮ್ಮೆಲ್ಲರಿಗೂ ಆರ‍್ಶವಾಗಿರಲಿ ಎಂದರು.
ಈ ಸಮಯದಲ್ಲಿ ಪ್ರಧಾನ ಕರ‍್ಯರ‍್ಶಿ ನಾಗೇಂದ್ರ ಬಿರಾದಾರ್, ವಕೀಲರಾದ ಕೆ ವಿ ಸ್ವಾಮಿ ,ಚಂದ್ರಕಾಂತ ನಾಶಿ,ಧೂಲಪಾ ಬಿರಾದಾರ್,ಅಶೋಕ್ ಪಾಟೀಲ್,ಕೆ ಬಾಬುರಾವ್,ಸಂಜಯ್ ಮಠಪತಿ, ಸತೀಶ ಕುಲರ‍್ಣಿ, ಸಂಜಯಕುಮಾರ ಪಾಟೀಲ್, ರತ್ನ ಅಗ್ರೆ, ಮುರಳೀಧರ್, ಉಮೇಶ್ ಪಾಂಡ್ರೆ ಸೇರಿದಂತೆ ಅನೇಕರು ಉಸ್ಥಿತರಿದ್ದರು.