ಬೀದರ್: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಾನಾಪುರ ಗ್ರಾಮದಲ್ಲಿ ದೇಶಪ್ರೇಮಿ, ಸ್ವತಂತ್ರ‍್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ ನಾಮ ಫಲಕದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವ ಚಿತ್ರ ಹಾಕಿದಕ್ಕೆ ಮೇಲ್ಜಾತಿ ವರ್ಗದವರು ಪರಿಶಿಷ್ಟ ಪಂಗಡದ ಎಸ್.ಟಿ. ಗೊಂಡ ಸಮಾಜದ ಜನರನ್ನು,ಕುರುಬ ಸಮುದಾಯದ ಜನರಿಗೆ ಊರಿನಿಂದ ಬಹಿಷ್ಕಾರ ಹಾಕಿದು ಅತ್ಯಂತ ತೀವ್ರ ಖಂಡನೀಯ ಎಂದು ಕಲ್ಯಾಣ ಕರ್ನಾಟಕ ಗೊಂಡ ಸಮಾಜದ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ಅಂಬರೀಶ ಮಲ್ಲೇಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ದೇಶ ಸ್ವತಂತ್ರ‍್ಯವಾಗಿ ಇಷ್ಟು ವರ್ಷಗಳು ಕಳೆದರೂ ಅಸ್ಪೃಶ್ಯತೆ ಇನು ಜೀವಂತವಾಗಿರುವುದು ದುಃಖಕರ ಸಂಗತಿ ಇಲ್ಲಿನ ಗೊಂಡ ಸಮಾಜದ,ಕುರುಬ ಸಮಾಜದ ಜನರಿಗೆ ದಿನಾಲು ಬೇಕಾಗುವ ದಿನಸಿ ವಸ್ತುಗಳನ್ನು ಮಾರಾಟ ಮಾಡದಂತೆ ಕಿರಾಣಿ ಅಂಗಡಿಗಳನ್ನು ಹಾಲು ಹಣ್ಣು ಹಂಪಲುಗಳ ಅಂಗಡಿಗಳನ್ನು ಮತ್ತು ಇವರುಗಳಿಗೆ ಕಟಿಂಗ್ ಸಲೂನ್ ಅಂಗಡಿಗಳನ್ನು ಮುಚ್ಚಿಸಿ ಗೊಂಡ ಕುರುಬ ಸಮುದಾಯದ ಜನರಿಗೆ ಯಾವುದೇ ದಿನಸಿ ಪದಾರ್ಥಗಳನ್ನು,ಹಾಲು ಹಣ್ಣು ಹಂಪಲುಗಳು ನೀಡಬಾರದು. ಒಂದು ವೇಳೆ ಇವರುಗಳಿಗೆ ನೀಡಿದರೆ 10 ಸಾವಿರ ರೂಪಾಯಿ ದಂಡ ಅಂಗಡಿ ಮಾಲೀಕರಿಗೆ ವಿಧಿಸಲಾಗುವುದೆಂದು ಊರಿನಿಂದ ಬಹಿಷ್ಕಾರ ಹಾಕಿರುವುದು ಆಳಂದ ತಾಲೂಕು ಆಡಳಿತ, ಕಲಬುರಗಿ ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರ ಇತ್ ಕೂಡಲೇ ಗಮನ ಹರಿಸಿ ಇಂತಹ ಅನಾಗರಿಕತೆ ವರ್ತನೆಯನ್ನು ನಿಲ್ಲಿಸಿ.ಗೊಂಡ ಕುರುಬ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು ಮತ್ತು ಬಹಿಷ್ಕಾರ ಹಾಕಿರುವ ಮೇಲ್ಜಾತಿ ವರ್ಗದವರ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಿ ಅವರುಗಳ ಮೇಲೆ ಕೇಸ್ ದಾಖಲಿಸಬೇಕೆಂದು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಕೂಡಲೇ ಕಲಬುರಗಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಪ್ರಿಯಾಂಕ್ ಖರ್ಗೆ ಖಾನಾಪುರ ಗ್ರಾಮದತ್ತ ಗಮನಹರಿಸಬೇಕು. ಇಲ್ಲವಾದಲ್ಲಿ ಕಲ್ಯಾಣ ಕರ್ನಾಟಕ ಗೊಂಡ ಸಮಾಜ ಒಕ್ಕೂಟ(ರಿ) ವತಿಯಿಂದ ಕಲಬುರಗಿಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ 17.03.2025 ಸೋಮವಾರ ರಂದು ಧರಣಿ ಉಪವಾಸ ಸತ್ಯಾಗ್ರ ಮಾಡಲಾಗುವುದು ಎಂದು ಕಲ್ಯಾಣ ಕರ್ನಾಟಕ ಗೊಂಡ ಸಮಾಜದ ಒಕ್ಕೂಟ(ರಿ) ವತಿಯಿಂದ ಅಂಬರೀಶ ಮಲ್ಲೇಶಿ ಅವರು ಈ ಮೂಲಕ ಎಚ್ಚರಿಸಿದ್ದಾರೆ.
—————–