ಯಾದಗಿರಿ : ತಾಲ್ಲೂಕಿನ ಠಾಣಾಗುಂದಿ (ವಿಶ್ವಾಸಪುರ ನಗರದ ಆರಾಧ್ಯ ದೈವ ಶ್ರೀ ವೀರಾಂಜನೇಯ ಸ್ವಾಮಿಯ 16ನೇ ವರ್ಷದ ಜಾತ್ರಾ ಮಹೋ ತ್ಸವವು ಶನಿವಾರ ವಿಜ್ರಂಭಣೆಯಿಂದ ಜರುಗಿತು. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 7 ಗಂಟೆಗೆ ಸ್ವಾಮಿಗೆ ಚೆನ್ನವೀರಯ್ಯ ಸ್ವಾಮಿ, ಶರಣಪ್ಪ ಪೂಜಾರಿ, ಲಕ್ಷ್ಮಣ ಪವಾರ್ ಇವರಿಂದ ರುದ್ರಾಭಿಷೇಕ ನೆರವೇರಿತು. ನಂತರ ಬೆಳಗ್ಗೆ 8-30ಕ್ಕೆ ಹೇಳಿಕೆ ಕಾರ್ಯಕ್ರಮ ಜರುಗಿತು. ಸಂಜೆ 4-35ಕ್ಕೆ ಸುಮಂಗಲಿ ಯರಿಂದ ಪೂರ್ಣಕುಂಭಮೆರವಣಿಗೆಯ ಮಧ್ಯೆ ವೀರಾಂಜನೇಯಸ್ವಾಮಿ ಸ್ವಾಮಿಯ ಮೂರ್ತಿಯ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.
ವಾದ್ಯ ಮೇಳಗಳೊಂದಿಗೆ ಸಂಜೆ 6 ಗಂಟೆಗೆ ರಥೋತ್ಸವ ಜರುಗಿತು. ನಂತರ ಅನ್ನದಾಸೋಹ ಪ್ರಸಾದ ಕಾರ್ಯಕ್ರಮಗಳು ಜರುಗಿದ್ದವು. ತದನಂತ ಧರ್ಮಸಭೆ ಜರುಗಿತು. ಸಭೆಯಲ್ಲಿ ರೆಡ್ಡಿಮಹಾರಾಜರು ದಿವ್ಯ ಸಾನಿದ್ಯ ವಹಿಸಿದ್ದರು. ಶರಣಪ್ಪ ಪೂಜಾರಿ ಠಾಣಾಗುಂದಿ, ಗೋವಿಂದಪ್ಪ ಇದ್ದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಮುದ್ನಾಳ್ ಅವರು 16 ನೇ ವರ್ಷದ ರಥೋತ್ಸವ ಬಹಳ ಅದ್ಧೂರಿಯಾಗಿ ಜರುಗಿತು. ಈ ಪುಣ್ಯ ಕ್ಷೇತ್ರಕ್ಕೆ ಸರ್ಕಾರದ ಸೌಲಭ್ಯ ಸಿಗಬೇಕು. ಮುಂದಿನ ದಿನಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆದರೆ ಬಡವರಿಗೆ ಅನುಕೂಲ ಆಗುತ್ತೆಂಬ ಭಾವನೆ ವ್ಯಕ್ತಪಡಿಸಿದರು..
ಈ ಕಾರ್ಯಕ್ರಮದಲ್ಲಿ ಖೇಮ್ ಸಿಂಗ್, ಲಕ್ಷ್ಮಣ್, ರವಿ, ಭೀಮ ಸಿಂಗ್ ಮನೋಹರ್, ಬೋಜು, ಶರಣು ಗೋಪಾಲ್ ಸೇರಿ ಅನೇಕ ಸಾರ್ವಜನಿಕರು ಜಾತ್ರೆಯಲ್ಲಿ ಭಾಗಿಯಾಗಿದ್ದರು.