ಬೀದರ್ : ಮಹಿಳೆ ಜಗತ್ತಿನ ಅದ್ಭುತ ಶಕ್ತಿಯಾಗಿದ್ದು, ಸರಕಾರಿ ಸೇವೆ ಮಾಡುವ ಮಹಿಳೆಯರು ಕುಟುಂಬ ಹಾಗೂ ಕಚೇರಿ ಎರಡನ್ನು ಸರಿದೂಗಿಸಿಕೊಂಡು ಹೊಗುತ್ತಾರೆಂದು ಜಿಲ್ಲಾದಿಕಾರಿ ಶಿಲ್ಪಾ ಶರ್ಮಾ ಅಭಿಪ್ರಾಯಪಟ್ಟರು.
ಇಂದು ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಲಾದ ವಿಶೇಷ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡುತ್ತಾ, ವೇದಿಕೆಯಲ್ಲಿ ಎಲ್ಲರೂ ಮಹಿಳೆಯರೇ ಸ್ಥಾನವನ್ನು ಅಲಂಕರಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಮುಂಬರುವ ಎಲ್ಲ ದಿನಮಾನಗಳಲ್ಲಿ ಎಲ್ಲ ಕಾರ್ಯಕ್ರಮಗಳಲ್ಲಿ ಶೇ.50 ರಷ್ಟು ಮಹಿಳೆಯರು ವೇದಿಕೆಯಲ್ಲಿ ಉಪಸ್ಥಿತರಿರಬೇಕೆಂದರು.
ಕೆಲಸ ಮಾಡುವ ಮಹಿಳೆಯರು ಕಚೇರಿಗೆ ಬರುವ ಮುನ್ನ ಮನೆಯಲ್ಲಿಯ ಎಲ್ಲ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ಕಚೇರಿಗೆ ಹಾಜರಾಗುತ್ತಾರೆ. ಸರಕಾರಿ ಸೇವೆಯ ಮಾಸಿಕ ವೇತನ ಆರ್ಥಿಕತೆಯ ದೃಷ್ಟಿಯಿಂದ ಪರಿಗಣಿಸಲಾಗುತ್ತದೆಯಾದರೂ ಅವರ ಕೌಟುಂಬಿಕ ಮನೆಗೆಲಸ ಲೆಕ್ಕಕ್ಕೆ ಬರುವುದಿಲ್ಲ. ಅಡುಗೆ, ಮನೆಗೆಲಸ ಮಾಡಿ ಕಚೇರಿಗೆ ಬರುವ ಮಹಿಳೆಯರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳೆಯರು ಮನೆಯಲ್ಲಿ ಗಂಡು, ಹೆಣ್ಣು ಮಕ್ಕಳಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡದೆ ಸರಿಸಮಾನವಾಗಿ ಪರಿಗಣಿಸಿದರೆ ಮುಂಬರುವ ದಿನಮಾನಗಳಲ್ಲಿ ಪ್ರತಿ ಕ್ಷೇತ್ರದಲ್ಲಿ ಶೇ.50 ರಷ್ಟು ಮಹಿಳಾ ಪ್ರತಿನಿಧಿಗಳನ್ನು ಕಾಣಬಹುದಾಗಿದೆಯೆಂದು ತಿಳಿಸಿದರು.
ಇಡೀ ರಂಗಮಂದಿರ ತುಂಬೆಲ್ಲ ಮಹಿಳೆಯರೇ ಭಾಗಿಯಾಗಿದ್ದು ವಿಶೇಷವಾಗಿತ್ತು. ಮುಕ್ತವಾಗಿ ಚರ್ಚೆಗಳು ನಡೆದವು. ಮಹಿಳಾ ದಿನಾಚರಣೆ ನಿಮಿತ್ತ ಜಿಲ್ಲಾಧಿಕಾರಿಗಳು ಕೇಕ್ ಕಟ್ ಮಾಡಿದರು.
ಈ ಕಾರ್ಯಕ್ರಮದಲ್ಲಿ ಹಂಸಾ ಗಿರೀಶ ಬದೋಲೆ, ಶೈನಿ ಪ್ರದೀಪ ಗುಂಟಿ, ಗೀತಾ ಶಿವಕುಮಾರ ಶೀಲವಂತ, ಬೀದರ ವಿಶ್ವವಿದ್ಯಾಲಯದ ಕುಲಸಚಿವರಾದ ಸುರೇಖಾ, ಜಿಲ್ಲಾ ಸಹಕಾರ ಸಂಘಗಳ ಉಪನಿರ್ದೇಶಕರಾದ ಮಂಜುಳಾ ಸಿ.ಎಸ್. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶಿಂಧು ಎಸ್. ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಸುರೇಖಾ ಮುನ್ನಳ್ಳಿ, ಹುಮನಾಬಾದ ತಹಸೀಲ್ದಾರ ಅಂಜುಮ, ಹುಮನಾಬಾದ ಕಾರ್ಯನಿರ್ವಾಹಕ ಅಧಿಕಾರಿಗಳಾದ ದೀಪಿಕಾ ನಾಯರ, ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳಾದ ಸುವರ್ಣಾ, ಹಿ.ವ.ಕಲ್ಯಾಣ ಇಲಾಖೆಯ ಸುಜಾತಾ, ಮೀನುಗಾರಿಕೆ ಇಲಾಖೆಯ ಜಾನವಿ, ಅಂಚೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ, ಎಡಿಎಲ್‌ಆರ್ ಗಳಾದ ಶ್ವೇತಾ, ರಾಜೇಶ್ವರಿ, ಸಾಹಿತಿಗಳಾದ ಪಾರ್ವತಿ ಸೋನಾರೆ, ಸ್ತಿçà ರೋಗ ತಜ್ಞರಾದ ಉಮಾ ದೇಶಮುಖ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಮಹಿಳಾ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಮಹಿಳ ಸಿಬ್ಬಂದಿಗಳು ಉಪಸ್ಥಿತರಿದ್ದರು.
————-