ಕಲೆಗಳು ನಾಶವಾದರೆ ನಮ್ಮ ಸಂಸ್ಕೃತಿಯ ಬೇರುಗಳು ದುರ್ಬಲಗೊಳ್ಳುತ್ತವೆ – ಚಂದ್ರಕಾಂತ ಗಾದಗಿ
ಬೀದರ್ : ಇಂದಿನ ಪೀಳಿಗೆಗೆ ನಾಡಿನ ಜಾನಪದ, ನೃತ್ಯ, ಸಂಗೀತ, ರಂಗಭೂಮಿ ಇತ್ಯಾದಿ ಕ್ಷೇತ್ರಗಳ ಪರಿಚಯ ಕಡಿಮೆಯಾಗುತ್ತಿದೆ. ಈ ಕಲೆಗಳು ನಾಶವಾದರೆ ನಮ್ಮ ಸಂಸ್ಕೃತಿಯ ಬೇರುಗಳು ದುರ್ಬಲಗೊಳ್ಳುತ್ತವೆ. ಆದ್ದರಿಂದ ಕಲಾವಿದರನ್ನು ಗುರುತಿಸಿ ಅವರಿಗೆ ಬೇಕಾದ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಮಹಾದೇವ ಮಂದಿರದ ಅಧ್ಯಕ್ಷರಾದ ಚಂದ್ರಕಾಂತ ಗಾದಗಿ ಕಳವಳ ವ್ಯಕ್ತಪಡಿಸಿದರು.
ಬೀದರ ನಗರದ ಶಿವನಗರ ಕಾಲೋನಿಯ ಮಹಾದೇವ ಮಂದಿರದಲ್ಲಿ ಇತ್ತೀಚಿಗೆ ನಡೆದ ಶ್ರೀ ಕೇತಕಿ ಸಂಗಮೇಶ್ವರ ಕಲಾ ಸಾಹಿತ್ಯ ಜಾನಪದ ಕಲಾವಿದರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ 2025-26ನೇ ಸಾಲಿನ ಸಾಮಾನ್ಯ ಯೋಜನೆಯಡಿಯಲ್ಲಿ ಪ್ರಾಯೋಜಿತ ಕಾರ್ಯಕ್ರವು, ನವರಾತ್ರಿ ಉತ್ಸವ ಅಂಗವಾಗಿ ಭವಾನಿ ಮಾತೆ ಉತ್ಸವ ಸಂಗೀತ ರಸಮಂಜರಿ ಕಾರ್ಯಕ್ರಮವು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ವಿಜಯಕುಮಾರ್ ಸೋನಾರೆ ಅವರು ಮಾತನಾಡಿ, ಇಂದಿನ ಸಮಾಜದಲ್ಲಿ ಹೆಚ್ಚಿನವರು ಪಶ್ಚಿಮತ್ಯಾ ಸಂಸ್ಕೃತಿಗೆ ಮೊರೆ ಹೋಗಿ ನಮ್ಮದೇ ದೇಸಿ ಸಂಸ್ಕೃತಿ, ಪರಂಪರೆ ಮತ್ತು ಜಾನಪದ ಕಲೆಗಳನ್ನು ಮರೆಯುತ್ತಿರುವುದು ತುಂಬಾ ವಿಷಾದನೀಯ ಸಂಗತಿ. ನಮ್ಮ ಮೂಲಗಳು, ನಮ್ಮ ಹಳ್ಳಿ ಜಾನಪದ ಪರಂಪರೆ ಇವುಗಳನ್ನು ಉಳಿಸಿಕೊಂಡಾಗ ಮಾತ್ರ ನಿಜವಾದ ಸಂಸ್ಕೃತಿಯ ಸಾರ ಅರ್ಥಪೂರ್ಣವಾಗುತ್ತದೆ, ಎಂದು ಅಭಿಪ್ರಾಯಪಟ್ಟರು.
ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಖ್ಯಾತ ತಬಲಾ ವಾದಕಾರದ ಕಲ್ಯಾಣರಾವ ಪಾಟೀಲ್ ಗುಮ್ಮಾ, ಅವರು ಮಾತನಾಡಿ ಇಂದಿನ ದಿನಗಳಲ್ಲಿ ಕೆಲವರು ದುಶ್ಚಟ ಹಾಗೂ ಅನಗತ್ಯ ಪ್ರಭಾವಗಳಿಗೆ ಒಳಗಾಗುತ್ತಿದ್ದಾರೆ. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಇಂತಹ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವದರಿಂದ ಅವರ ನಡೆ, ನುಡಿ, ಆಚಾರ, ವಿಚಾರ, ಬದಲಾವಣೆಗೊಂಡು ಉತ್ತಮ ಭವಿಷ್ಯ ನಿರ್ಮಾಣಕ್ಕೆ ಸಹಾಯಕವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಅವರು ನಮ್ಮದೇ ಸಂಸ್ಕೃತಿಯನ್ನು ನಾವು ಮರೆಯಬಾರದು. ಜಾನಪದ ಕಲೆ ಮತ್ತು ಪರಂಪರೆ ನಮ್ಮ ಸಮಾಜದ ಆತ್ಮವಾಗಿದ್ದು, ಅದನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಕಲಾವಿದರನ್ನು ಗುರುತಿಸಿ ಅವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ನಮ್ಮ ಇಲಾಖೆ ಮಾಡುತ್ತಿದೆ ಎಂದರು.
ರಾಜೇಂದ್ರ ನಮೋಶಿ, ಪುಂಡಲೀಕರಾವ ಗುಮ್ಮಾ, ಮಾತನಾಡಿದರು, ಕಾಶಿನಾಥ ಬೆಲ್ದಾಳ, ವಿನಾಯಕ ಚೌದ್ರಿ, ಮುಂತಾದವರು ವೇದಿಕೆ ಮೇಲಿದ್ದರು.
ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾ ತಂಡಗಳಾದ ಡಾ. ಪಂಡಿತ, ಸಂಗೀತ ಸಾಹಿತ್ಯ ತಂಡದಿಂದ, ವಚನ ಗಾಯನ, ನಾಗೇಶ ಮಡಿವಾಳ ಸಂಗಡಿಗರಿಂದ ಜಾನಪದ ಗಾಯನ, ದತ್ತಾತ್ರಿ ವಿಳಾಸಪುರ ಸಂಗಡಿಗರಿಂದ, ತತ್ವಪದ ಗಾಯನ, ಶಿವಾಜಿರಾವ ಪಾಟೀಲ್ ಉಜನಿ, ಸಂಗಡಿಗರಿಂದ, ಭಕ್ತಿ ಗೀತೆ, ಶರಣು ಚಾಂಬೋಳೆ ಸಂಗಡಿಗರಿಂದ, ತಬಲಾ ವಾದನ, ವಿಜಯಕುಮಾರ್ ದುಬಲಗುಂಡಿ ಅವರಿಂದ ಹಾರ್ಮೋನಿಯಂ, ಗಂಗಾಧರ ಪಾಟೀಲ್ ಅವರಿಂದ ಭಾವಗೀತೆ, ಹೀಗೆ ಹಲವು ಕಲಾ ತಂಡಗಳು ಭಾಗವಹಿಸಿ ತಮ್ಮದೇ ಆದ ವೈಶಿಷ್ಟ್ಯಪೂರ್ಣ ಕಲೆಯನ್ನು ಪ್ರದರ್ಶಿಸಿದವು.
ಪ್ರಾರಂಭದಲ್ಲಿ ಕಾರ್ಯಕ್ರಮವು ಸಂಗಮೇಶ ಬೆಲ್ದಾಳ,ಸ್ವಾಗತಿಸಿ ನಿರೂಪಿಸಿದರು,ಶರಣು ವಂದಿಸಿದರು, ಅದೇ ಸಂದರ್ಭದಲ್ಲಿ ಮಹಾದೇವ ಮಂದಿರ ಆಡಳಿತ ಮಂಡಳಿ ಸದಸ್ಯರಿಗೆ ಸನ್ಮಾನಿಸಲಾಯಿತು. ಕಲಾವಿದರು, ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು.
————–
