Sunday, February 15, 2026
HomePopularಸೆ. 24 ರಂದು ಪುಣೆ ಒಪ್ಪಂದ ಹಾಗೂ ಒಳಮೀಸಲಾತಿ ಸಾಧಕ ಬಾಧಕ ಕುರಿತು ಕಾರ್ಯಕ್ರಮ: ರಾಜಕುಮಾರ...

ಸೆ. 24 ರಂದು ಪುಣೆ ಒಪ್ಪಂದ ಹಾಗೂ ಒಳಮೀಸಲಾತಿ ಸಾಧಕ ಬಾಧಕ ಕುರಿತು ಕಾರ್ಯಕ್ರಮ: ರಾಜಕುಮಾರ ಗೂನ್ನಳ್ಳಿ

ಸೆ. 24 ರಂದು ಪುಣೆ ಒಪ್ಪಂದ ಹಾಗೂ ಒಳಮೀಸಲಾತಿ ಸಾಧಕ ಬಾಧಕ ಕುರಿತು ಕಾರ್ಯಕ್ರಮ: ರಾಜಕುಮಾರ ಗೂನ್ನಳ್ಳಿ
ಬೀದರ್: ಸೆ. 24 ರಂದು ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ 1932ರ ಪುಣೆ ಒಪ್ಪಂದ ಹಾಗೂ ಒಳಮೀಸಲಾತಿ ಜಾರಿಯ ಸಾಧಕ ಬಾಧಕಗಳ ಕುರಿತು ಬೆಂಗಳೂರಿನ ಪ್ರಸನ್ನಕುಮಾರ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಅಂಬೇಡ್ಕರ್ ಯುವ ಸೇನೆ ರಾಜ್ಯಾಧ್ಯಕ್ಷ ರಾಜಕುಮಾರ ಗುನ್ನಳ್ಳಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಅಂಬೇಡ್ಕರ್ ಯುವ ಸೇನೆ ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಆಯೋಜಿಸುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಜ್ಞಾನಪ್ರಕಾಶ ಸ್ವಾಮೀಜಿ ವಹಿಸಲಿದ್ದು, ಪೌರಾಡಳಿತ ಸಚಿವ ರಹಿಂಖಾನ್ ಸೇರಿದಂತೆ ಜಿಲ್ಲೆಯ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಆದ್ದರಿಂದ ಜಿಲ್ಲೆಯ ದಲಿತ ಬಾಂಧವರು, ಮುಖಂಡರು, ವಿದ್ಯಾರ್ಥಿಗಳು, ಚಿಂತಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶೋಭೆ ಹೆಚ್ಚಿಸಬೇಕೆಂದು ಕರೆ ಕೊಟ್ಟರು.
ದಲಿತ ಸೇನೆ (ರಾಮವಿಲಾಸ ಪಾಸ್ವಾನ್) ರಾಜ್ಯ ಉಪಾಧ್ಯಕ್ಷ  ಚಂದ್ರಕಾಂತ ನಿರಾಟೆ ಮಾತನಾಡಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ಮಧ್ಯದಲ್ಲಿ ಯರವಾಡಾ ಜೈಲಿನಲ್ಲಿ ಆದ ಒಪ್ಪಂದವೇ ಪುಣೆ ಒಪ್ಪಂದ. ಬ್ರಿಟೀಷ ಸರ್ಕಾರದ ಅಂದಿನ ಪ್ರಧಾನಿ ಬ್ರಿಟನ್‌ನಲ್ಲಿ ದುಂಡುಮೇಜಿ ಸಮ್ಮೇಳನ ಆಯೋಜನೆ ಮಾಡುತ್ತಾರೆ. ಈ ಸಭೆಯಲ್ಲಿ ಡಾ. ಬಾಬಾ ಸಾಹೇಬರು ಭಾರತದ ಅಸ್ಪೃಶ್ಯರ ಹೀನಾಯ ಸ್ಥಿತಿ ಕುರಿತು ಉಲ್ಲೇಖ ಮಾಡುತ್ತಾರೆ. ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು ನೀಡಬೇಕೆಂದು ಪ್ರಸ್ತಾಪ ಮಾಡುತ್ತಾರೆ. ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ ಮಹಾತ್ಮ ಗಾಂಧಿಜಿ ಭಾಗವಹಿಸಿ ದಲಿತರಿಗೆ ನೀಡುವ ಮತದಾನದ ಹಕ್ಕನ್ನು ಗಾಂಧಿಯವರು ಒಪ್ಪುವುದಿಲ್ಲ. ಹಿಂದೂ ಧರ್ಮದಿಂದ ಬೇರ್ಪಡಿಸುವುದಕ್ಕೆ, ಪ್ರತ್ಯೇಕ ಮತದಾನದ ಹಕ್ಕಿನ ಪ್ರಸ್ತಾವನೆ ನನಗೆ ಇಷ್ಟವಿಲ್ಲ ಎನ್ನುತ್ತಾರೆ. ಕೊನೆಗೆ ಈ ಕುರಿತು ಗಾಂಧೀಜಿ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತಾರೆ.
ಉಪವಾಸ ಸತ್ಯಾಗ್ರಹ ನಡೆದಾಗ ಗಾಂಧೀಜಿಯವರ ದೇಹ ದಿನೇ ದಿನೇ ಕ್ಷೀಣಿಸುತ್ತಿರುವಾಗ ಕೊನೆಗೆ ಅಸ್ಪೃಶ್ಯರು ಹಾಗೂ ದಲಿತರು ಕೂಡಾ ಯಾವುದೇ ವರ್ಗ ವರ್ಣದವರು ಚುನಾವಣೆಗೆ ಸ್ಪರ್ಧೆ ಮಾಡಿದರೂ ಸಹ ಮತದಾನ ಮಾಡಬಹುದು ಎಂದು ಇಬ್ಬರ ಮಧ್ಯೆ 1932ರ ಸೆ. 24 ರಂದು ಒಂದು ಒಪ್ಪಂದ ಏರ್ಪಡುತ್ತದೆ. ಅದುವೇ ಪುಣೆ ಒಪ್ಪಂದ. ಈ ಕುರಿತು ಹಾಗೂ ಒಳಮೀಸಲಾತಿ ಕುರಿತು ಸಾಧಕ ಬಾಧಕಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲರೂ ಪಾಲ್ಗೊಳ್ಳಲು ನಿರಾಟೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಡಿ.ಸುಧಾಕರರಾವ ಏಕಂಬೆಕರ್, ಗೋವಿಂದ ಪೂಜಾರಿ ಉಪಸ್ಥಿತರಿದ್ದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3